ಸೈಕಲ್ ಸವಾರಿಣಿ, ದಣಿವು ನೀರಡಿಕೆಯನ್ನು ನೀಗಿಸಿಕೊಂಡ ನಂತರ, ಮತ್ತೆ ಸೇತುವೆಯಮೇಲೆ ತನ್ನ ಸೈಕಲ್ ನ್ನು ನುಗ್ಗಿಸಿ ಓಡಿಸುತ್ತಾಳೆ !!

ಸೈಕಲ್ ನಿಲ್ಲಿಸಿ ವಿಶ್ರಮಿಸಿಕೊಳ್ಳುತ್ತಿರುವ, ಸೈಕಲ್ ವಾಹಿನಿಯನ್ನು ...ಅಂಬೆ ..ಎನ್ನೋಣವೇ ಅಥವಾ, ಶರ್ಲಿಯೋ, ಕೇಟಿಯೋ, ಕ್ಯಾಥರಿನ್ನೊ ನಮಗೇನು ?

ಸ್ಯಾನ್ ಫ್ರಾನ್ಸಿಸ್ ಕೊ ನಗರದ ಗೋಲ್ಡನ್ ಬ್ರಿಡ್ಜ್, ಬೃಹದ್ ತೂಗು-ಸೇತುವೆಯ ಮೇಲೆ, ಸೈಕಲ್ ವಾಹಕ(ನಿ) ಯರಿಗೆ ಒಂದು ಚಿಕ್ಕ ದಾರಿಯನ್ನು ಬಿಟ್ಟುಕೊಟ್ಟಿದ್ದಾರೆ. ಅವರೆಲ್ಲಾ ಒಬ್ಬರ ಹಿಂದೊಬ್ಬರು ಸೈಕಲ್ ಸವಾರಿಮಾಡುತ್ತಾ ಅನಂದಿಸುವುದನ್ನು ನೋಡಲು ಬಲುಚೆನ್ನು ! ಸ್ವಾಭಾವತಃ ಸಾಹಸಪ್ರಿಯರಾದ ಅವರು, ಅಮೆರಿಕಕ್ಕೆ, ಅಥವಾ ನಮ್ಮ ದೇಶಕ್ಕೆ ಬಂದ ರೀತಿಯೂ ಹೀಗೆಯೇ....ಅಲ್ಲವೇ ??

ರಜಾದಿನಗಳಲ್ಲಿ ಪ್ರತಿಯೊಬ್ಬರೂ ಒಂದು ಚಿಕ್ಕ ದೋಣಿಯನ್ನು ತಮ್ಮ ಕಾರ್ ನ ಹಿಂದೆ ಕಟ್ಟಿಕೊಂಡು ಹೋಗಿ, ಅಲ್ಲಿ ಸಮುದ್ರದ ನೀರಿನಲ್ಲಿ ಅದನ್ನು ಇಳಿಸಿ, ದೂರದವರೆಗೆ ಸಮುದ್ರಯಾನ ಮಾಡುವ ದೃಷ್ಯ ಬಲು ಚೆನ್ನ. ಚಿಕ್ಕಮಕ್ಕಳಿಗೆ, ಹೆದರಿಕೆಯೆಂದರೆ ಏನು ? ಎಂದು ಕೇಳಬೇಕೇನೋ, ಎಂದು ನಮಗನ್ನಿಸಿತ್ತು.

-ಚಿತ್ರ. ವೆಂ