ಮ೦ಟಪದ ಮೇಲೊಂದು ಮರ

ಮಾವಿನಕೆರೆ ಒಂದು ಪುಣ್ಯಕ್ಷೇತ್ರ. ಹಾಸನಕ್ಕೆ ೨೫ ಕಿ.ಮೀ. ದೂರದಲ್ಲಿರುವ ಮಾವಿನಕೆರೆ ಬೆಟ್ಟಕ್ಕೆ ಈಗ ವಾಹನ ಹೋಗುವಂತೆ ಟಾರ್ ರಸ್ತೆ ಯಾಗಿದೆ.ಬೆಟ್ಟದ ಮೇಲೆ ರಂಗನಾಥನ ಗುಡಿಯಮುಂದೆ ಒಂದು ಯಾಗಶಾಲೆ[ಕಲ್ಲಿನ ಮಂಟಪ]ಇದೆ. ದೇವಾಲಯದ ಜೀರ್ಣೋದ್ಧಾರವಾಗುತ್ತಿರುವುದರಿಂದ ಮಂಟಪದಲ್ಲಿಯೇ ಕಳಾಕರ್ಷಣೆ ಮಾಡಿರುವ ಕುಂಭಗಳನ್ನು ಇಟ್ಟು ಅಲ್ಲೇ ಪೂಜೆ ನಡೆಯುತ್ತಿದೆ. ವಿಚಿತ್ರವೆಂದರೆ ಕಲ್ಲಿನ ಮಂಟಪದ ಮೇಲೆ ಅರಳಿಮರದ ಬುಡಹರಡಿದ್ದು ಮರಬೆಳೆದು ನಿಂತಿದೆ ಮೂಲೆಯಲ್ಲೆಲ್ಲೋ ಸಣ್ಣದಾಗಿ ಬೇರು ನೆಲವತಾಗಿದೆ. ಇದೊಂದು ವಿಸ್ಮಯವಾಗಿ ತೋರುತ್ತದೆ.