ಓಹ್ ..’ಸಿಯಾಟಲ್ ನಗರ ’ ವೆಂದರೆ. ಮೈಜುಂ ಎನ್ನುತ್ತದೆ ; ರೋಮಾಂಚನವಾಗುತ್ತದೆ !

’ಸಿಯಾಟಲ್ ನಗರ, ಅಮೆರಿಕದೇಶದ ಪಶ್ಚಿಮೋತ್ತರ ದಿಕ್ಕಿನಲ್ಲಿರುವ ಅಧ್ಬುತನಗರಗಳಲ್ಲೊಂದು ! ಅಲ್ಲಿನ ’ಪ್ರಾಕೃತಿಕ ಬಂದರು,” ’ಎವರೆಟ್ ವಿಮಾನ ತಯಾರಿಕೆಯ ಭಾರಿ ಘಟಕ’, ಮಾರುಕಟ್ಟೆ, ಬಿಲ್ ಗೇಟ್ಸ್ ರವರ ’ ಮೈಕ್ರೊಸಾಫ್ಟ್  ಕಾರ್ಯಾಲಯ’, ನಗರದ ಪ್ರಮುಖಸ್ಥಾನದಲ್ಲಿ ಸೆಟೆದು ಎದೆಎತ್ತಿ ನಿಂತಿರುವ ದೈತ್ಯಾಕೃತಿಯ, ಹಾಗೂ ಮುದನೀಡುವ, ’ಸ್ಪೇಸ್ ಶಟಲ್.”

ನಗರದ ಮಧ್ಯದಲ್ಲೇ ಸಮುದ್ರವನ್ನು ದಾಟಲು ಕಟ್ಟಿರುವ ಸೊಗಸಾದ ಉದ್ದವಾದ ಸೇತುವೆ ; ಒಂದೇ.. ಎರಡೇ...ನಗರವನ್ನು ನೋಡಿ ಬ ರಲು, ಬಗೆಬಗೆಯ ವಾಹನ ಸೌಲಭ್ಯಗಳು, ದೂರದಲ್ಲಿ ಕಾಣಿಸುವ ಬೆಟ್ಟ, ಕಾಡು, ಜಲಪಾತ, ಇತ್ಯಾದಿಗಳು, ನಗರವನ್ನೆಲ್ಲಾಆವರಿಸಿರುವ ’ಸ್ಟಾರ್ ಬಕ್ ಕಾಫಿ, ಪರಿಮಳ, ಹಾಗೂ ’ಸ್ಟಾರ್ ಬಕ್ ರೆಸ್ಟಾರೆಂಟ್ ’ ಗಳು, ಇತ್ಯಾದಿಗಳು. ಕಣ್ಣಿಗೆ, ಮನಸ್ಸಿಗೆ ಮುದಕೊಡುವ, ಎಲ್ಲೆಲ್ಲೂ ನಗುಮುಖದ, ಹರ್ಷೋಲ್ಲಾಸದಬುಗ್ಗೆಗಳನ್ನು ಹೋಲುವ ಯುವಕ, ಯುವತಿಯರು, ಮಕ್ಕಳು, ಹಿರಿಯನಾಗರಿಕರು, ವಿಶ್ವದೆಲ್ಲೆಡೆಗಳಿಂದ ಆಗಮಿಸಿದ, ಪರ್ಯಟಕರು..... ಅದೆಷ್ಟು ವಿಷಯಗಳನ್ನು ನಾನು ಬಿಟ್ಟೆನೋ...! ಹಾ, ಈ ಸೇತುವೆ ನಗರದ ಮಧ್ಯದಲ್ಲಿ ನಿರ್ಮಿಸಿರುವ ಅತ್ಯಂತ ಉಪಯೋಗಕರವಾದ, ಸುವ್ಯವಸ್ಥಿತವಾದ, ಸಂಪರ್ಕ ಮಾಧ್ಯಮ ! ಸಿಯಾಟಲ್ ಕರ್ ರಿಗೆ ತಮ್ಮ ಜೀವನದ ಮರೆಯಲಾರದ ಅನುಭವಗಳಲ್ಲೊಂದು ; ನಮಗೂ ಸಹ !

 

-ಚಿತ್ರ. ವೆಂ