ಮುರುಡೇಶ್ವರ ದೇವಾಲಯ

೨೦೦೮ ರಲ್ಲಿ ದ್ರಾವಿಡ ಶೈಲಿಯಲ್ಲಿ  ಒಂದು ,ಗೋಪುರವನ್ನು ಕಟ್ಟಿದ್ದಾರೆ. ಗೋಪುರದ ಎತ್ತರ, ೨೪೯ ಅಡಿ ಎತ್ತರವಿದೆ. ಈ ಗೋಪುರ ಮುರುಡೇಶ್ವರ ದೇವಾಲಯದ ಬದಿಯಲ್ಲೇ ಇದೆ. ಇದು ೨೦  ಅಂತಸ್ತು ಇದ್ದು, ಮೇಲಕ್ಕೆ ಹೋಗಲು ಲಿಫ್ಟ್ ವ್ಯವಸ್ಥೆಯಿದೆ. ೧೮ ನೇ ಮಹಡಿಯ ಬಳಿಯ ಕಿಟಕಿಯಲ್ಲಿ ಸೂರ್ಯಾಸ್ತ ನೋಡಲು ತುಂಬಾ ಚೆನ್ನಾಗಿರುತ್ತದೆ. ಇಲ್ಲಿಂದ ಮತ್ತೊಂದು ಮಹಡಿ ಎತ್ತರಕ್ಕೆ ಹೋಗಲು ಅನುಮತಿಯಿಲ್ಲ. ಹಾಗೂ ಮೆಟ್ಟಲನ್ನು ಹತ್ತಲು ಇಳಿಯಲು ಅನುಮತಿ ಇಲ್ಲ.

ಬದಿಯಲ್ಲಿಯೇ ಸಮುದ್ರ ತಟವಿದೆ. (ಬೀಚ್ ಇದೆ). ಬೀಚ್ ಗೆ ಬರುವ ಜನ, ದೇವಾಲಯಕ್ಕೂ ಬರುತ್ತಾರೆ. ಅಲ್ಲಿನ ಮತ್ತೊಂದು ಆಕರ್ಶಣೆಯೆಂದರೆ, ಒಂದು ಬೃಹತ್ ಪ್ರಮಾಣದ ಶಿವನ ಮೂರ್ತಿಯನ್ನು ಅಲ್ಲಿ ನಿರ್ಮಿಸಲಾಗಿದೆ. ಅದನ್ನು ನೋಡಲು ಅನೇಕ ಕಡೆಯಿಂದ ಜನರು ಬರುತ್ತಾರೆ. ಸಾಯಂಕಾಲ ೬-೨೦ ರಿಂದ ೬-೩೦ ರ ಹೊತ್ತಿಗೆ ಸೂರ್ಯ ಮುಳುಗುವ ದೃಷ್ಯವನ್ನು ನೋಡಬಹುದು. ಸಮುದ್ರದ ತಟದಲ್ಲಿ ಕೆಲವರು ಇದನ್ನು ವೀಕ್ಷಿಸಿದರೆ, ಮತ್ತೆ   ಕೆ ಲವರು ೧೮ ಅಂತಸ್ತಿನ ರಾಜಗೋಪುರದ ಮೇಲೆ ಹೋಗಿ ನೋಡುತ್ತಾರೆ. ತೊಂದರೆಯೆಂದರೆ, ಒಂದೇ ಕಿಟಕಿಯಲ್ಲಿ ಜನರೆಲ್ಲಾ ತಮ್ಮ ಮೊಬೈಲ್ ಮತ್ತು ಕ್ಯಾಮರಾ ಹಿಡಿದು ಸೂರ್ಯಮುಳುಗುವ ದೃಷ್ಯವನ್ನು ಸೆರೆಹಿಡಿಯಲು ಪ್ರಯತ್ನಿಸುವುದರಿಂದ,  ಸ್ವಲ್ಪ ಗದ್ದಲವಾಗುತ್ತದೆ.  

 

 

-ಚಿತ್ರಗಳು-ವೆಂಕಟೇಶ್.