ಮುಂಬೈ ಬಳಿಯ ಮ್ಯಾಥೆರಾನ್ ತಂಪು -ಗಿರಿಧಾಮದ ಮಿನಿ ಟ್ರೈನ್, ಮತ್ತೆ ಓಡಲು ಪ್ರಾರಂಭಿಸಿದೆ !

ಮ್ಯಾಥೆರಾನ್ ಗಿರಿಧಾಮವನ್ನು ೧೮೫೦ ರಲ್ಲಿ ಕಂಡುಹಿಡಿದವನು, ಒಬ್ಬ ಬ್ರಿಟಿಶ್ ಅಧಿಕಾರಿ. ಥಾನೆಯ ಕಲೆಕ್ಟರ್, ಎಚ್. ಪಿ. ಮ್ಯಲೆಟ್. ಮುಂದೆ ೧೮೫೫ ರಲ್ಲಿ ಬಾಂಬೆ ಗವರ್ನರ್ ಲಾರ್ಡ್ ಎಲ್ಫಿನ್ ಸ್ಟನ್, ಬೆಟ್ಟಿಮಾಡಿದಾಗ ಅದರ ನೈಸರ್ಗಿಕ ಸೌಂದರ್ಯಕ್ಕೆ ಮನಸೋತರು. ಅವರಿಗೆ ಅಲ್ಲಿ ಒಂದು ತಂಪು ಗಿರಿ ಧಾಮವನ್ನು ಏರ್ಪಡಿಸುವ ಆಸೆಯಾಯಿತು. ಸುಮಾರು ೫೭ ವರ್ಷಗಳನಂತರ ಆಗತಾನೆ ಶುರುವಾಗಿದ್ದ [೧೮೫೩ ರಲ್ಲಿ] ಜಿ. ಐ .ಪಿ. ರೈಲ್ವೆ (Great Indian Peninsular Railways) ಸಂಸ್ಥೆ, ಪೂನಕ್ಕೆ ರೈಲ್ವೆ ದಾರಿಯನ್ನು ನಿರ್ಮಿಸುವ ಸಮಯದಲ್ಲೇ ರೈಲು ದಾರಿಯನ್ನು ನೇರಲ್ ಹತ್ತಿರಕ್ಕೆ ಕೊಂಡೊಯ್ದರು. ಬ್ರಿಟಿಶ್ ಕೃಪಾಪೋಷಿತ ಜಾಗವೆಂದಮೇಲೆ ಕೇಳಬೇಕೆ, ಎಲ್ಲಾ ಸೌಲಭ್ಯಗಳು ಕೂಡಲೇ ದೊರಕತೊಡಗಿದವು. ೨ ಅಡಿ ಅಗಲದ ಚಿಕ್ಕ ರೈಲ್ವೆ ದಾರಿ. (ನೇರಲ್ ಮ್ಯಾಥರಾನ್ ಲೈಟ್ ರೈಲ್ವೆ, NMLR ) ವೃತ್ತಾಕಾರದಲ್ಲಿ ೮೦೦ ಮೀಟರ್ ಎತ್ತರದ ಬೆಟ್ಟಧಾಮವನ್ನು ೧೧ ಕಿ.ಮಿ. ಮುಟ್ಟುವ ಪರಿ ಅನನ್ಯವಾದದ್ದು ! ಈ ತಂಪು ಗಿರಿಧಾಮ, ಮಹಾಬಲೇಶ್ವರ, ಪಂಚಗಣಿಗಳ ತರಹ ಅತ್ಯಂತ ಸೊಬಗಿನ ತಾಣ. ಅಲ್ಲಿ ವೀಕ್ಷಿಸಲು ಒಟ್ಟು ೩೮ ಸ್ಥಳಗಳಿವೆ. ಅವುಗಳಲ್ಲಿ . ಚಾರ್ಲೊಟ್ಟೆ ಸರೊವರ, ಪ್ಯಾಂಥರ್ಸ್ ಗುಹೆಗಳು, ಮೇನ್ ಬಜಾರ್. ಒಂದು ಸಮಾಧಾನಕರ ಸಂಗತಿಯೆಂದರೆ ಇಲ್ಲಿ ವಾಹನಗಳಿಗೆ ಅನುಮತಿ ಇಲ್ಲ. ಸೈಕಲ್ ರಿಕ್ಷಾಗಳೇ ಹೆಚ್ಚು. ಪೇ ಮಾಸ್ಟರ್ ಪಾರ್ಕ್, ಮಕ್ಕಳಿಗಂತು ಇದು ಸ್ವರ್ಗ. ೨೧ ಕಿ.ಮೀ ದೂರದ ಪ್ರಯಾಣದ ವೇಳೆಯಲ್ಲಿ ಮಿನಿ ರೈಲು ೩ ಜಾಗದಲ್ಲಿ ಮಾತ್ರ ನಿಲ್ಲುತ್ತದೆ. ೧. ಜುಮ್ಮಾ ಪಟ್ಟಿ ಸ್ಟಾಪ್, ೨. ವಾಟರ್ ಪೈಪ್ ಸ್ಟಾಪ್, (ಹಿಂದಿನ ಉಗಿಬಂಡಿಗಳು ಈ ಸ್ಥಳದಲ್ಲಿ ನೀರನ್ನು ತುಂಬಿಕೊಳ್ಳುತ್ತಿದ್ದವು.) ೩. ದಸ್ತುರಿನಾಕಾ, ಅಥವಾ ಅಮನ್ ಲಾಡ್ಜ್ ಸ್ಟಾಪ್. ಮ್ಯಾಥೆರಾನ್ ಗಿರಿಧಾಮ, ಹಾಗೂ ಅಲ್ಲಿನ ಮಿನಿರೈಲನ್ನು ಯುನೆಸ್ಕೋ ಸೈಟಾಗಿ ಪರಿವರ್ತನೆ ಮಾಡುವ ಸಿದ್ಧತೆಗಳು ಜಾರಿಯಲ್ಲಿವೆ. ಬೇಸಿಗೆಯಲ್ಲಿ ೩೨ ಡಿಗ್ರಿ ಚಳಿಗಾಲದಲ್ಲಿ ೧೬ ಡಿಗ್ರಿ. ವರ್ಷದ ಸರಾಸರಿ ಮಳೆ ೫೨೪ ಸೆ,ಮೀ. ಮ್ಯಾಥೆರಾನ್ ೧೨೦ ಕಿ.ಮೀ ಪುಣೆಯಿಂದ, ಮುಂಬೈ ನಿಂದ ೧೦೮ ಕಿ. ಮೀ. ದೂರದಲ್ಲಿದೆ. ಈ ಅಪರೂಪದ ರೈಲ್ವೆ ದಾರಿಯನ್ನು, ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಖ್ಯಾತಿ, ಸರ್ ಆದಮ್ಜಿ ಪೀರ್ಭಾಯಿಯವರಿಗೆ ಸಲ್ಲಬೇಕು. ಅದಕ್ಕೆ ವ್ಯಯವಾದ ಹಣ ಆಗಿನಕಾಲದಲ್ಲಿ ೧೬ ಲಕ್ಷ ರೂಪಾಯಿಗಳು. ತಮ್ಮ ಮಗ ಅಬ್ದುಲ್ ಹುಸೇನ್ ಆದಮ್ಜಿಯವರಿಗೆ ಹಣದ ವಿತರಣೆ ಮಾಡಿ, ಮಿನಿ ಟ್ರೇನ್ ರೈಲ್ವೆ ಲೈನನ್ನು ಪ್ರಾರಂಭಿಸಲು ನೇಮಿಸಿದರು. ಇವರು ಆಗಿನಕಾಲದಲ್ಲಿ ಒಳ್ಳೆ ಪ್ರವೃದ್ಧಮಾನ ಸ್ಥಿತಿಯಲ್ಲಿದ್ದ *ಬೊಹ್ರಾ ಮುಸಲ್ಮಾನ್ ವ್ಯಾಪಾರಿಗಳ ಪರಿವಾರಕ್ಕೆ ಸೇರಿದವರು. ಆಗಿನಕಾಲದ ಬೊಂಬಾಯಿನಗರದ ಅತ್ಯಂತ ಶ್ರೀಮಂತ ಉದ್ಯೋಗಪತಿಗಳಲ್ಲಿ ಪ್ರಾಮುಖ್ಯರು. ವಾಡಿಯಾ, ಟಾಟ, ರಾಜಾಬಾಯಿ, ಖಾಟಾವ್, ಥ್ಯಾಕರ್ಸೆ ಮುಂತಾದ ಅನೇಕ ಯಶಸ್ವಿ ಉದ್ಯಮಿಗಳಿದ್ದರು. ಸರ್ ಪೀರ್ ಭಾಯಿ ಭಾರತದ ಅತಿ ದೊಡ್ಡ ಹತ್ತಿಬಟ್ಟೆ ತಯಾರಕರು ; ಇವರ ಕಾರ್ಖಾನೆಯಲ್ಲಿ ತಯರಾದ ಕ್ಯಾನ್ವಾಸ್, ಖಾಕಿ ಯೂನಿಫಾರ್ಮ್ ಬಟ್ಟೆಗಳನ್ನು ಬ್ರಿಟಿಶ್ ಸೈನ್ಯ ಖರೀದಿಸುತ್ತಿತ್ತು. ಹಡಗು ಕಟ್ಟುವ ಕಾರ್ಯದಿಂದ ಪ್ರವರ್ಧಮಾನಕ್ಕೆ ಬಂದ ಈ ವರ್ತಕ ಪರಿವಾರ, ಏಶಿಯಾ ಖಂಡದಲ್ಲೇ ಅತಿ ದೊಡ್ಡ ಚರ್ಮ ಹದಗಾರಿಕಾ ಘಟಕವನ್ನು ಹೊಂದಿತ್ತು. ಕರಾಚಿ ನಗರದಲ್ಲೂ ಒಂದು ಶಾಖೆ ಇತ್ತು. ಅವರ ಒಂದು ಕಾರ್ಖಾನೆಯಲ್ಲೇ ೧೫,೦೦೦ ಜನ ಕೆಲಸಗಾರರು, ಕೆಲಸಮಾಡುತ್ತಿದ್ದರು. ಜನೋಪಕಾರೀ ಕೆಲಸಗಳನ್ನೂ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಅವುಗಳಲ್ಲಿ ಮುಖ್ಯವಾದದ್ದು, 'ಸೈಫಿ ಟ್ರಸ್ಟ್' ನ ವತಿಯಿಂದ ನಡೆಸುತ್ತಿದ್ದ ಆಸ್ಪತ್ರೆ, ಹಾಗೂ ಶಿಕ್ಷಣ ಸಂಸ್ಥೆಗಳು. ಮ್ಯಾಥರಾನ್ ನಲ್ಲಿ ಮೊದಲು ಇಳಿದುಕೊಳ್ಳಲು ಕೇವಲ ಪಾರ್ಸಿ, ಬೊಹ್ರಾ ಮುಸ್ಲಿಮ್ ಮತ್ತು ಬ್ರಿಟಿಶ್ ಸಮುದಾಯದ ವಸತಿ ಗೃಹಗಳೂ ಬಂಗಲೆಗಳೂ ಇದ್ದವು. ಅನಂತರ ಹಲವು ವರ್ಗಗಳಿಗೆ ಹೊಂದಿಕೊಳ್ಳುವ ಅನೇಕ ಖಾಸಗಿ ವಸತಿಗೃಹಗಳು ತಲೆಯೆತ್ತಿಕೊಂಡವು. ಹೀಗೆ ಸುಮಾರು ೧೦೦ ವರ್ಷಗಳ ಮಿನಿ -ರೈಲ್ವೆ ಸೇವೆಯನ್ನು ಅನುಭವಿಸಿದ ಜನರಿಗೆ, ೨೦೦೫ ರ ಅತಿವೃಷ್ಟಿಯಿಂದ ಕೊಚ್ಚಿಹೋದ ರೈಲ್ವೆ ಟ್ರ್ಯಾಕನ್ನು ಮಧ್ಯರೈಲ್ವೆ ತಕ್ಷಣ ದುರಸ್ತಿಕಾರ್ಯವನ್ನು ಕೈಗೊಂಡು ಮಾರ್ಚ್ ತಿಂಗಳ ಮೊದಲನೆಯ ವಾರದಲ್ಲಿ ೨೦೦೭ ರಲ್ಲಿ ಮತ್ತೆ ಸಾರ್ವಜನಿಕರ ಉಪಯೊಗಕ್ಕೆ ಬಿಡುಗಡೆಮಾಡಿತು. ಈ 'ಮ್ಯಾಥರಾನ್ ಪುಟಾಣಿ ರೈಲ್' ನ **೧೦೦ ವರ್ಷಗಳ ಸಂಚಾರ ವ್ಯವಸ್ಥೆಯನ್ನು ಸ್ಮರಣಾರ್ಥವಾಗಿ ಆಚರಿಸಲು ರೈಲ್ವೆ ಮಂತ್ರಾಲಯವಾಗಲಿ ಅಥವ ರಾಜ್ಯಸರ್ಕಾರವಾಗಲೀ ಮುಂದುಬರಲಿಲ್ಲ. ಮಹಾರಾಷ್ಟ್ರ ಸರ್ಕಾರಕ್ಕೆ ಕೋಟಿಗಟ್ಟಲೆ ರೆವಿನ್ಯೂ ಒದಗಿಸುವ ಪ್ರವಾಸಿತಾಣದ ಹೆಸರನ್ನು 'ಸರ್ ಪೀರ್ಭಾಯಿ ರೈಲ್ವೆ ತಾಣ’ ವೆಂದು ಹೆಸರಿಡಲು ಜನಾಬ್ ಪೀರ್ ಭಾಯಿ ಪರಿವಾರದವರು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿವೆ. ಸರ್ ಪೀರ್ ಭಾಯಿಯವರ ಮರಿ ಮಗ, ಆಲಿ ಅಕ್ಬರ್ ಪೀರ್ ಭಾಯಿ ಗೆ ಇದರ ಬಗ್ಗೆ ಬಹಳ ಕಾಳಜಿ ಇದೆ. ರೈಲ್ವೆ ಮಂತ್ರಿ, ಲಾಲೂ ಪ್ರಸಾದ್ ಯಾದವರು ಯಾಕೊ ಇದನ್ನು ಕಿವಿಯಮೇಲೆ ಹಾಗಿಕೊಂಡಿಲ್ಲ. ಇಷ್ಟುದಿನ ಪ್ರಪಂಚದ ಪ್ರವಾಸೋದ್ಯಮ ನಕ್ಷೆಗಳಲ್ಲಿ ಹೆಸರಗಿರುವ ಗಿರಿಧಾಮದ ಹೆಸರನ್ನು ಬದಲಾಯಿಸಿದರೆ ಪ್ರವಾಸೋದ್ಯಮಮೇಲೆ ಬಹಳ ಪರಿಣಾಮಮಾಡಬಹುದೆಂದು ಅದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ರೈಲ್ವೆಬೋರ್ಡಿನ ನಿರ್ದೇಶಕರಾದ ರಾಜೇಶ್ ಅಗರ್ವಾಲ್ ಇದರ ಬಗ್ಗೆ ಆಗುವ ತೊಂದರೆಯನ್ನು ಪತ್ರಿಕಾಕರ್ತರಿಗೆ ಒತ್ತಿ ಹೇಳಿದರು.

ತಾಜಾ ಸುದ್ದಿ :
**
ಏನೇ ಆದರೂ ಈ ದಿನ ರವಿವಾರ, ಏಪ್ರಿಲ್ ೧೫, ೨೦೦೭ ದಿನ ದಂದು, ೧೧-೩೦ ಕ್ಕೆ, ಶ್ರೀ ಲಾಲೂ ಪ್ರಸಾದ್ ಯಾದವ್ ಯೂನಿಯನ್ ರೈಲ್ವೆ ಮಂತ್ರಿಗಳು, ಮತ್ತು ರಾಜ್ಯ ರೈಲ್ವೆ ಮಂತ್ರಿಗಳ ಸಹಕಾರದೊಂದಿಗೆ "ನೇರಲ್ -ಮ್ಯಾಥೆರಾನ್ ಮಿನಿ ರೈಲ್ ನ ಶತಮಾನೋತ್ಸವ ಸಮಾರಂಭ " ವನ್ನು ಉದ್ಘಾಟಿಸಿದರು. ಆದರೆ ಪೀರ್ ಭಾಯಿಯವರ ಮೊಮ್ಮಗ, ಶ್ರೀ. ಅಕ್ಬರ್ ಭಾಯಿಯವರ ಕನಸು, ನನಸಾಗಲಿಲ್ಲ.

ಪ್ರತಿಕ್ರಿಯೆಗಳು

ಹೌದು ನಾಡಿಗರೆ, ನಮಸ್ಕಾರ. ನಾನು ಮೊದಲು ಮ್ಯಾಥೆರಾನ್ ಬಗ್ಗೆ ಒಂದು ಚಿಕ್ಕ ಲೇಖನ ಬರೆದೆ. ಆಚುಟುಕು ಲೇಖನ
ನನಗೇಕೋ ಸರಿಬೀಳಲಿಲ್ಲ. ಮಿನಿ ಟ್ರೈನ್ ನ ಹೆಸರು ಅಲ್ಲಿ ಬರದಿದ್ದರೆ, ಬ್ಯಾಥೆರಾನ್ ಯಾತ್ರೆ ಸಮರ್ಪಕವಾದೀತೇ ?

ಮೊದಲು ನಾನು "ಕೋತಿಗಳ ಸಹಬಾಳ್ವೆ- ಮ್ಯಾಥೆರಾನ್ ಗಿರಿಧಾಮದಲ್ಲೂ" ಎಂಬ ಶಿರೊನಾಮ ಕೊಟ್ಟಿದ್ದೆ. ಅದನ್ನು ಅಳಿಸಿ ಮತ್ತೆ ಹೊಸ ಫೋಟೋ ಅಪ್ ಲೋಡ್ ಮಾಡಿದೆ. ಆದರೆ ಅದು ಏಕೊ ಕಾಣುತ್ತಿಲ್ಲ.

ನೀವು ಸ್ವಲ್ಪ ಹಿಂಟ್ ಕೊಡಲು ಸಾಧ್ಯವೇ ?

ಇಲ್ಲ ಸಂಪದದಲ್ಲಿ ಏನೊ ಪ್ರಾಬ್ಲಮ್ ಇದೆ... ನೆನ್ನೆ ನನಗೆ ಚಿತ್ರ ಅಪ್ ಲೋಡ್ ಮಾಡಲಾಗಲಿಲ್ಲ... ಅಪಲೋಡ್ ಮಾಡಿ ಮುನ್ನೋಟದಲ್ಲಿ ನೋಡಿದರೆ ಅದು ಕಾಣಿಸುವುದಿಲ್ಲ