ಶಿವಸಮುದ್ರಮ್ ಬಳಿಯ ಪ್ರಪಾತದಲ್ಲಿ ಭೋರ್ಗರೆಯುತ್ತಾ ಧುಮುಕುವ, ಕಾವೇರಿ ನದಿಯ ವಿಹಂಗಮ ನೋಟ !

*
ಶಿವಸಮುದ್ರದ ಬಳಿ ಅತಿಎತ್ತರದ ಘಟ್ಟದಿಂದ, ಅತ್ಯಂತ ಆಳವಾದ ಕಂದರದ ಕೆಳಗೆ ಭೋರ್ಗರೆಯುತ್ತಾ, ಧುಮ್ಮಿಕ್ಕುವ ಕಾವೇರಿ ನದಿಯ ವಿಹಂಗಮ ನೋಟ, ಎಲ್ಲರಿಗೂ ಮುದನೀಡುತ್ತದೆ. ಅದರಲ್ಲಿ ನೀರಿನ ನೊರೆ, ಬಿಳುಪಾಗಿದ್ದು ಸ್ಪಟಿಕದಂತೆ, ಹಾಲಿನ ನೊರೆಯಂತೆ, ಮಲ್ಲಿಗೆಯ ಹೂವಿನಂತೆ ಕಾಣುತ್ತದೆ. ನೋಡಲು ಸೊಗಸಾದ ದೃಷ್ಯ !
ಮಂಡ್ಯ ಜಿಲ್ಲೆಯಲ್ಲಿ ಈ ಜಲಪಾತವಿದೆ. ಜಲಪಾತದ ಎರಡು ವಿಭಾಗಗಳ ಹೆಸರು, ೧. ಗಗನ ಚುಕ್ಕಿ ೨. ಭರಚುಕ್ಕಿ. ಇವೆರಡೂ ಸುಮಾರು ೧ ಕಿ. ಮೀ. ದೂರದಲ್ಲಿವೆ. ಕಾವೇರಿ ಬೇಸಿನ್ ನಲ್ಲಿ ಸಾಮಾನ್ಯವಾಗಿ ಭಾರಿ ಮಳೆ ಬೀಳುವುದರಿಂದ ಉಂಟಾಗುವ ನೀರಿನ ಆರ್ಭಟದ ಜೊತೆಗೆ, ಕಪಿಲಾ ನದಿಯ ಜಲಧಾರೆಯೂ ಸೇರಿ, ಶಿವನಸಮುದ್ರ (ಅಥವಾ ಶಿವಸಮುದ್ರ ) ಜಲಪಾತವನ್ನು, ಇನ್ನೂ ರಮಣೀಯ ಹಾಗೂ ಆಕರ್ಷಣೀಯವಾಗಿ ಮಾಡಿವೆ.

*ಇದನ್ನು ’ನಮ್ಮ ಫೋಟೋ ಆಲ್ಬಮ್” ನಿಂದ ಕೊಡಲಾಗಿದೆ.