ಮುಂಬೈ ನ ಜುಹುಬೀಚಿನಲ್ಲಿ ಒಂದು ಸಾಯಂಕಾಲ.

ಮುಂಬೈ ನಲ್ಲಿ ಜುಹುಬೀಚ್ ಉತ್ತಮ ಪ್ರವಾಸಿತಾಣಗಳಲ್ಲಿ ಒಂದಾಗಿದೆ. ಇದನ್ನು ಬಿಟ್ಟರೆ ಗೊರೈ ಬೀಚ್ ಸ್ವಲ್ಪ ಉತ್ತಮ. ದಾದರ್ ಬೀಚ್, ಚೌಪಾತಿ ಬೀಚ್ ಗಳು ಪ್ರವಾಸಿಗಳಿಗೆ ಮುದನೀಡುವಲ್ಲಿ ಅಸಮರ್ಥವಾಗಿವೆ. ಬೀಚ್ ಗಳನ್ನು ಸಮರ್ಪಕವಾಗಿ ನಾಗರಿಕರಿಗೆ ಬಳಸಲು ಅನುವುಮಾಡಿಕೊಡಬೇಕಾದರೆ ಅದಕ್ಕೆ ಸರಿಯಾದ ವ್ಯವಸ್ಥೆಗಳು, ಮತ್ತು ಬೃಹನ್ ಮುಂಬೈ ಅಧಿಕಾರಿಗಳ ಮನೋ ಸ್ಥೈರ್ಯವೂ ಅಷ್ಟೆ ಮುಖ್ಯ.