ಎತ್ತಿನಭುಜ

ಮುಡಿಗೆರೆ ಸಮೀಪದ ಎತ್ತಿನಭುಜ ಶಿಖರ. ಮುಡಿಗೆರೆಯಿಂದ ಭೈರಾಪುರಕ್ಕೆ ತೆರಳಿದರೆ ಶೃಂಗಕ್ಕೆ ೬೦ ನಿಮಿಷದ ದಾರಿ. ದಕ್ಷಿಣ ಕನ್ನಡದ ಶಿಶಿಲದಿಂದ ಚಾರಣಗೈದರೆ ೨೫೦ ನಿಮಿಷಗಳ ಹಾದಿ. ನಾವು ೨೦೦೫ ಮೇ ತಿಂಗಳಲ್ಲಿ ಶಿಶಿಲದಿಂದ ಚಾರಣಗೈದಿದ್ದೆವು. ಶೃಂಗ ಇನ್ನೂ ೪೫ ನಿಮಿಷ ದೂರವಿರುವಾಗ ನಾನು ಮುಂದಕ್ಕೆ ನಡೆಯಲಾಗದೇ ಕುಸಿದೆ. ಈಗ ಎತ್ತಿನಭುಜಕ್ಕೆ ಭೈರಪುರದಿಂದಾದರೂ ಚಾರಣಗೈಯಲೇಬೇಕು. ನಾನು ಕುಸಿದುಬಿದ್ದ ಸ್ಥಳದಿಂದ ಕೇವಲ ೫ ನಿಮಿಷದ ನಂತರ ಶಿಶಿಲದಿಂದ ಬರುವ ದಾರಿಗೆ ಭೈರಾಪುರದಿಂದ ಬರುವ ದಾರಿ ಸೇರಿಕೊಳ್ಳುತ್ತೆ. ಬಲಿಷ್ಟ ಎತ್ತಿನ ಭುಜದ ಆಕಾರವನ್ನು ಹೋಲುವುದರಿಂದ ಎತ್ತಿನಭುಜ ಎಂದು ಹೆಸರು.

ಪ್ರತಿಕ್ರಿಯೆಗಳು

ಚಿತ್ರ ಚೆನ್ನಾಗಿ ಬಂದಿದೆ. ಒಳ್ಳೆಯ angleನಿಂದ ತೆಗೆದಂತಿದೆ. ಫ್ಯಾಂಟಮ್ ಕಾಮಿಕ್ಸ್ ಓದಿದವರಿಗೆ ಫ್ಯಾಂಟಮ್ ಶಿಖರ ನೆನಪಿಸುತ್ತೆ (ಫ್ಯಾಂಟಮ್ ಕಾಮಿಕ್ಸ್ ನಲ್ಲಿ ಫ್ಯಾಂಟಮಿನ ಮುಖ ಹೋಲುವಂತ ಶಿಖರ ಇರುವುದನ್ನ ಹಲವು ಕಥೆಗಳಲ್ಲಿ ತೋರಿಸುತ್ತಾರೆ).