ಮುಂಬೈಬಳಿಯ ಅರಬ್ಬೀ ಕಡಲಿನ ಮೇಲೆ ಒಂದು ಸುತ್ತು !

ಮುಂಬೈನ ಅರಬ್ಬೀ ಸಮುದ್ರದ ಮೇಲೆ "ಎಲಿಫೆಂಟಾ "ಕ್ಕೆ ಹೋಗುವ ದಾರಿಯಲ್ಲಿ ಕಡಲಿನ ಮೇಲೆ ದೋಣಿಯಲ್ಲಿ ಕುಳಿತು ಕ್ಯಾಮರ ಕ್ಲಿಕ್ಕಿಸಿದಾಗ, ಕಾಣುವ ನೋಟ "ಹಾಂಕಾಂಗ್ " ಗೆ ಹೋಲಿಕೆಯಾಗುವಂತಹದು.

ಬರಿ ಕಂಡರೆ ಆಗದು. ಹಾಂಕಾಂಗ್, ಸಿಂಗಪುರದಂತಹ ಅತ್ಯಂತ ಸ್ವಚ್ಛವಾದ ವಾತಾವರಣದ, ಕಸ-ಕಡ್ಡಿ ಇರದ ವಿಶಾಲ ವಾದ ರಸ್ತೆಗಳು, ಎಲ್ಲೆಲ್ಲೂ ಕಾಣುವ ಸುಂದರ ಹಾಗೂ ಭವ್ಯವಾದ ಮನೆಗಳು, ಮಾಲ್ ಗಳು, ಉದ್ಯಾನವನಗಳು, ನೈರ್ಮಲ್ಯೀಕರಣವನ್ನು ಅತ್ಯಂತ ಆದ್ಯತೆಯಾಗಿ ಪರಿಗಣಿಸಲಾಗಿರುವ ನೈಜ ವಾತಾವರಣ, ನಗುಮುಖದ ತರುಣ, ತರುಣಿಯರು. ದಾರಿಹೋಕರು, ಹಣ್ಣು ಹಂಪಲು, ವೈವಿಧ್ಯಮಯವಾದ ಹೂಗಳು ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ.

ಅಲ್ಲಿ ಜನರಿಗೆ ಯಾರೂ ಕಾನೂನು, ರೀತಿ-ನೀತಿಗಳ ಬಗ್ಗೆ ತಿಳುವಳಿಕೆ ನೀಡಬೇಕಾಗಿಲ್ಲ. ಒಂದು ಸಿಗರೇಟಿನ ತುಂಡು ತೆಗೆದುಕೊಂಡು ೧೦೦ ಅಡಿ ದೂರ ಹೋಗಿ ಅದನ್ನು Dust bin ನಲ್ಲಿ ಜನ ಹಾಕುವ ದೃಷ್ಯವನ್ನು ನಾವು ನೋಡಿ ಕಲಿಯಬೇಕಲ್ಲವೆ. ? ಬಹುಶಃ ಈ awareness ಬಂದಾಗ ಮಾತ್ರ ಮುಂಬೈ ಕೂಡ ಹಾಂಕಾಂಗ್ ಆಗಬಹುದೇನೋ !

ಆದರೆ ನಾವು ನಮ್ಮ ನಗರವನ್ನೂ ಉತ್ತಮ ಮುಂಬೈ ಮಾಡಲು ಪ್ರಯತ್ನಿಸಬೇಕು. ಹಾಂಕಾಂಗ್, ಸಿಂಗಪುರಗಳು ಅವುಗಳ ಪಾಡಿಗೆ ಇರಲಿ. ನಮಗೇಕೆ ಅವುಗಳ ಜೊತೆಗೆ ಪೈಪೋಟಿ !