ನೇಸರನ ಉದಯವೇ ಅಥವ ಚಂದ್ರನ ಕಣ್ಮರೆಯೆ?

ನೇಸರನ ಹಿಂದೆ ಚಂದಮಾಮ ಅವಿತುಕೊಳ್ತಾ ಇದ್ದಾನೆ ಅನ್ಸುತ್ತೆ?

ಪ್ರತಿಕ್ರಿಯೆಗಳು

ಇಲ್ಲ ಸಾರ್...ಯಾವ ಎಡಿಟಿಂಗ್ ಇಲ್ಲ :)(ಆಗೆಲೆ ಪ್ರಮಾಣಿಸಿ ನೋಡ್ತಾ ಇದ್ದೀರ :)) ...ಬೆಳಿಗ್ಗೆ ಸುಮಾರಿಗೆ ೬:೩೦ಕ್ಕೆ ತೆಗೆದಿದ್ದು ಸಿಂಗಾಪುರದಲ್ಲಿ. ಕ್ಯಾಮೆರ ಸೆಟ್ಟಿಂಗ್ಸ್ ಈ ರೀತಿ ಇತ್ತು.

Camera Model Name Canon PowerShot A700
Shooting Mode Landscape
My Colors Mode Off
Tv (Shutter Speed) 1/400
Av (Aperture Value) 4.8
Light Metering Evaluative
Exposure Compensation 0
ISO Speed Auto
Lens 5.8 - 34.8 mm
Focal Length 34.8 mm
Digital Zoom None
Image Size 2816x2112
Image Quality Fine
Flash Off
White Balance Auto
AF Mode Single AF
Parameters Contrast          Normal
Sharpness         Normal
Saturation  Normal
Color Space sRGB
File Size 942 KB
Drive Mode Single-frame shooting

ಆಗೆಲೆ ಪ್ರಮಾಣಿಸಿ ನೋಡ್ತಾ ಇದ್ದೀರ

ಅದು ನಿಮ್ಮ presumptionಉ. ನಾನು ನನಗನ್ನಿಸಿದ್ದನ್ನು ಬರೆದೆನಷ್ಟೆ. ;)
ಅಲ್ಲಿ ಸೂರ್ಯನ ಪ್ರಕಾಶಕ್ಕಂಟಿಕೊಂಡಿರುವುದು ಚಂದ್ರನೇ ಆಗಿದ್ದರೆ ಅಷ್ಟು ದೊಡ್ಡದಾಗಿ ಚಂದ್ರ ನಾ ಕಂಡದ್ದು ಚಂದ್ರಗ್ರಹಣದ ಸಮಯದಲ್ಲಿ ಮಾತ್ರ. ಇದು ಸಿಂಗಪುರದಲ್ಲಾದ್ದರಿಂದ ಅಲ್ಲಿ ಹೀಗೆ ಕಾಣಸಿಗುತ್ತದೇನೊ. ಚಿತ್ರ ಮಾತ್ರ ಒಂದು ರೇರ್ ಸೆಲೆಸ್ಟಿಯಲ್ ಘಟನೆಯ ಕ್ಯಾಪ್ಚರ್ ಇದ್ದ ಹಾಗಿದೆ. ಈ ರೀತಿಯ view ಅಪರೂಪವೋ ಅಲ್ವೊ ತಿಳಿದವರಿಗೆ ಕೇಳಿದರೆ ಗೊತ್ತಾಗುವುದು.

ಇಲ್ಲ, ಇದು ಚಂದ್ರ ಆಗಿರಲು ಸಾಧ್ಯವಿಲ್ಲ. ಏನೋ ಒಂದು optical effect ಆಗಿರಬೇಕಷ್ಟೇ.

ಮೊದಲಿಗೆ, ಬೆಳಗ್ಗೆ ಸೂರ್ಯ ಹುಟ್ಟುವ ಸಮಯ, ಚಂದ್ರ ಅವನ ಬಳಿ ಕಂಡರೆ, ಅದು ಅಮಾವಾಸ್ಯೆಯ ದಿನ. ಅಲ್ಲವೇ? ಅಂದರೆ, ಚಂದ್ರನ ಆಕಡೆಯ (ಅಂದರೆ, ನಮಗೆ ಕಾಣದ) ಭಾಗದ ಮೇಲೆ ಸೂರ್ಯನ ಬೆಳಕು ಬೀಳುತ್ತಿರುತ್ತೆ. ಹಾಗಾಗಿ, ನಮ್ಮ ಕಡೆ ಇರುವ ಭಾಗ ಕಪ್ಪಗಿರಬೇಕು, ಅಂದರೆ, ಅದು ಕಾಣಲಾರದು.

-ಹಂಸಾನಂದಿ