’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ ಶಿವಮಂದಿರದ ನೋಟ.

ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಹೋಗುವ ದಾರಿಯಲ್ಲಿ ಇರುವ ಬಯಲು ಹಾಗೂ ದಟ್ಟ ಕಾಡಿನ ಅನುಭವ ಪ್ರವಾಸಿಗರಿಗೆ, " ಹೋರ್ಸ್ಲಿ" ಎಂಬ ಹಿಲ್ ರೆಸಾರ್ಟ್ಸ್ ಜಾಗದಲ್ಲಿ ಸಿಗುತ್ತದೆ. ಇದನ್ನು ಮುಟ್ಟಲು ನನ್ನ ಮಗ ಮತ್ತು ಅವನ ಗೆಳೆಯ ಬೈಕ್ ತೆಗೆದುಕೊಂಡು ಹೋಗಿದ್ದರಂತೆ. ಸುಮಾರು ೧೫೦ ಕಿ.ಮೀ ಇರಬಹುದೆಂದು ಅವನ ಅಂದಾಜು. ನ್ಯಾಷನಲ್ ಹೈವೇ [NH4 ] ನಲ್ಲಿ ಹೊಸಕೋಟೆ, ಚಿಂತಾಮಣಿ, [ಕೋಲಾರ ಜಿಲ್ಲೆ], ಮದನಪಲ್ಲಿ, ಅಂಗಲ್ಲು, ಮುಖಾಂತರ ಪ್ರಯಾಣಮಾಡಿದರೆ , ಹೋರ್ಸ್ಲಿ ಹಿಲ್ಸ್, ಸಿಕ್ಕುತ್ತದೆ. ಆಂಧ್ರದಲ್ಲಿ ಇರುವ ಎರಡೇ ಹಿಲ್ ರೆಸಾರ್ಟ್ಸ್ ಗಳಲ್ಲಿ ಇದು ಮುಖ್ಯವಾದದ್ದು. [APTDC ] ಯವರು ನಡೆಸುವ ’ಪುನಾಮಿ’ ಎಂಬ ರೆಸಾರ್ಟ್ಸ್ ಇದೆ. ಅಲ್ಲಿನ ರೇಟ್ಸ್ :೫೦೦ ರೂ/- ನಿಂದ, ೭೩೫/-, ೮೪೦ ರವರೆಗಿದೆ. ಈಜುಕೊಳಕ್ಕೆ ; ೨೫ ರೂ ಒಬ್ಬರಿಗೆ; ಒಂದು ಬಾಟಲ್ ಬೀರ್ ಗೆ : ೭೦ ರೂ. ಒಂದು ’ಜಿಮ್’ ಕೂಡಾ ಇದೆಯಂತೆ. ಕಾಡು, ಮಧ್ಯೆ ಹೊಲಗಳು, ಚಿಕ್ಕ ಚಿಕ್ಕ ನೀರಿನ ಝರಿಗಳು, ಇವುಗಳಮಧ್ಯೆ, ಬೆಟ್ಟ ಹತ್ತಿಕೊಂಡು ಹೋಗಬೇಕು. ಸ್ವಲ್ಪವೂ ಬಸ್, ಕಾರು,ಗಳ ಪಲ್ಯೂಶನ್ ಇಲ್ಲವೇ ಇಲ್ಲ. ಎಲ್ಲೆಡೆ ಶಾಂತಿ, ಪಕ್ಷಿಗಳ ಚಿಲಿ-ಪಿಲಿ ಶಬ್ದಗಳು, ಮರದ ಎಲೆಗಳ ಶಬ್ದ . ನಮಗೆ ಅಲ್ಲಿರುವಷ್ಟು ಸಮಯ, ಆನಂದ ಉಲ್ಲಾಸಗಳನ್ನು ಪಡೆಯುವ ತಾಣ ಇದು.

ಅಲ್ಲಿನ *ಶಿವಮಂದಿರಕ್ಕಿಂತ ಅದರ ಹೊರ ಅಂಗಳದಲ್ಲಿ ನೆಟ್ಟ ದೊಡ್ಡ ದೊಡ್ಡ ಕಲ್ಲು ಕಂಬಗಳ ದೃಷ್ಯ ಬಹಳ ಮುದಕೊಡುವಂತಹದು.

ಇಲ್ಲಿನ ನಮ್ಮ ಶಿವ ಮಂದಿರವನ್ನು ನೋಡಿದಾಗ ಯೂರೋಪಿನ ಗ್ರೀಸಿನ ಬಳಿ ಇರುವ ಪಾರ್ಥೆನಾನ್ - ಅತಿ ಪ್ರಾಚೀನ ದೇಗುಲವನ್ನು ನೋಡಿದ ಅನುಭವವಾಗುತ್ತದೆ.

ಅಥವಾ ಪಾರ್ಥೆನಾನ್ ನೋಡಿದಾಗ - ಹೋರ್ಸ್ಲಿಯಲ್ಲಿರುವ ನಮ್ಮ ಪ್ರಾಚೀನ ಶಿವ ಮಂದಿರವನ್ನು ನೋಡಿದ ಅನುಭವವಾಗುತ್ತದೆ ! ಅನ್ನಲು ಸಾದ್ಯವೆ. ಅಷ್ಟಕ್ಕೂ ನಮ್ಗೂ ಗ್ರೀಸಿನವರಿಗೂ ಯಾಕ್ ಪೈಪೋಟಿ.

*ನಮ್ಮ ಮನೆಯ ಫ್ಯಾಮಿಲಿ ಫೋಟೋ ಆಲ್ಬಮ್ ನಿಂದ.

ಪ್ರತಿಕ್ರಿಯೆಗಳು

ಫೋಟೋ ಚೆನ್ನಾಗಿದೆ.

ನಮ್ಮ ಜನ ಸಿಕ್ಕ ಸಿಕ್ಕ ಬೆಟ್ಟ ಗುಡ್ಡಗಳ ಮೇಲೆಲ್ಲಾ ಗುಡಿ ಕಟ್ತಾರಲ್ಲಾ..
ಅವರಿಗೆ ಎಷ್ಟು ಭಯವಿತ್ತು (ರಾಜಕೀಯ , ಯುದ್ಧ, )ಅ೦ತಾ ತಿಳಿಯುತ್ತೆ.
ಕಟ್ಟಿದ್ದು ಒಳ್ಳೆದಾಯ್ತು. ಅಕಸ್ಮಾತ್ ಕಟ್ಟಿಲ್ಲಾ ಅ೦ದರೆ ಈ ಬೆಟ್ಟಗಳೆಲ್ಲಾ ಗ್ರಾನೈಟ್ ವ್ಯಾಪಾರಿಗಳು ಕತ್ತರಿಸಿ
ಮನೆಗಳ ಬಾತ್ ರೂಮ ಗೋ ಅಥ್ವಾ ಅಡಿಗೆ ಮನೆಗೋ ಸಾಗಿಸಿಬಿದ್ಟಿದ್ದರು.ಅ೦ದರೆ ನಾವು ಕಲ್ಲನ್ನು ತಿನ್ನೋ
ಶಕ್ತಿ ಪಡೆದಿದ್ದೀವಿ.

ಗೀರ್ ಕಾಡಿನಲ್ಲಿ ಸಿಕ್ಕಾ ಪಟ್ಟೆ ದೇವಸ್ಥಾನಗಳಿದ್ದು , ಯಾತ್ರೆಗೆ ಭಕ್ತಾದಿಗಳೂ ಬ೦ದು ಹೋಗುವ ಪಯಣದಲ್ಲಿ
ಕಾಡು ಮತ್ತು ವನ್ಯ ಮೃಗಗಳು ನಾಶವಾಯ್ತ೦ತೆ.ಈಗ ಸಿ೦ಹಗಳೇ ಇಲ್ವ೦ತೆ.
ಇನ್ನು ಹಿಮಾಲಯವನ್ನೇ ನೋಡಿ ,ಅಷ್ಟು ಜನರು ತಮ್ಮ ಮೋಕ್ಷಕ್ಕಾಗಿ ಅಲ್ಲಿಗೆ ಪಯಣ ಬೆಳೆಸುತ್ತಾರೆ.
ಆದರೆ ಪರಿಸರದ ಪ್ರಜ್ನೆ ಚೂರು ಇಲ್ಲಾ. ಅಯ್ಯಪ್ನಪ ಭಕ್ತರು ಕೇರಳಾದ ಎಷ್ಟೋ ಎಕ್ಕರೆ ಕಾಡುಗಳನ್ನು
ನಾಶ ಮಾಡಿದ್ದಾರೆ.

ಹಾಗೇ ನೋಡಿದರೆ ದೇವರ ಭಕ್ತರು ದೇವರ ಸೃಷ್ಟಿಯ ಮೇಲೆ ತು೦ಬಾ ಅಪಚಾರವನ್ನು ಎಸಗಿದ್ದಾರೆ.
ದೇವರು ಮೇಲೆ ಭಕ್ತಿ ಬರುವ ಬದಲಿ ಜೀವಿಗಳ ಮೇಲೆ ದಯೆ ಪ್ರೇಮ ಬ೦ದಿದ್ದರೆ ಚೆನ್ನಾಗಿತ್ತು ಅಲ್ವೇನು ??

ಮುರಳಿಯವರೆ,

ನೀವು ಹೇಳಿದ ಮತಿನಲ್ಲಿ ತುಂಬಾ ಸತ್ಯ ಇದೆ. ಆದ್ದರಿಂದಲೆ ಹಿಂದೂ ಧರ್ಮದಲ್ಲಿ ಎಲ್ಲಾ ಜೀವಗಳು ಮತ್ತು ವಸ್ತುಗಳಲ್ಲಿ ದೇವರನ್ನು ಕಾಣಬೇಕು ಎಂಬ ನಂಬಿಕೆ ಇರುವುದು, ಆದರೆ ಇತ್ತೀಚೆಗೆ ನಮ್ಮಲ್ಲಿ ಧರ್ಮದ ಅರಿವು ಕಡಿಮೆಯಾಗಿ ಹೀಗೆಲ್ಲಾ ಮಾಡುತ್ತಿದ್ದೇವೆ. Famous ದೇವರ ದರ್ಶನ ಮಾಡುವುದು ಮತ್ತು ಅವನ ಹೆಸರಿನಲ್ಲಿ ದಾನ ಧರ್ಮದ ನಾಟಕ ಇವಲ್ಲಾ ನಮ್ಮ ಬದುಕಿನಲ್ಲಿ ಹೊಕ್ಕುಹೊಗಿವೆ. ಪ್ರಕೃತಿ ಮತ್ತು ಪ್ರಾಣಿಗಳ ಮೇಲೆ ಪ್ರೇಮ ನಮ್ಮಲ್ಲಿ ದಿನ ದಿನಕ್ಕೂ ಕಡಿಮೆಯಾಗುತ್ತಿದೆ.

shaamala

ಶ್ರೀ ವೆಂಕಟೇಶ್ ಅವರೇ,

ಉತ್ತಮವಾದ ದರ್ಶನೀಯ ಸ್ಥಳವನ್ನು ಪರಿಚಯಿಸಿದ್ದೀರಿ, ಧನ್ಯವಾದಗಳು. ನನಗೆ ಬೇಸರ ನೀಡಿದ ಒಂದು ವಿಷಯವೆಂದರೆ-ಅಲ್ಲಿಯೂ 'ಬೀರ್" ದೊರಕುವ ಏರ್ಪಾಡು. ಇಂತಹ ಪ್ರಶಾಂತ ವಾಥಾವರಣದಲ್ಲೂ ಮದ್ಯ ಮುಂತಾದ ಉತ್ತೇಜಕಗಳು ಬೇಕೆನ್ನುವವರಿಗೆ ಏನು ಹೇಳುವುದು?

ನಮಸ್ಕಾರ

ಶಾಮಲ

DSVasantharam, ಏನ್ ಬರೀತಾರೆ ಓದಿ, ಶ್ಯಾಮಲಮ್ಮ....! ’ಲೋಕೋ ಭಿನ್ನರುಚಿ ಬೀರ್,’ ಅನ್ಬೋದೇನೋ ? ಇದೇ ಸತ್ಯ-ಇದೇನಿತ್ಯ ....!

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

ಈ ಜಾಗದ ಬಗ್ಗೆ ಪರಿಚಯ ಮಾಡಿ ಕೊಟ್ಟೀದ್ದಕ್ಕೆ ಧನ್ಯವಾದಗಳು. ವಿವರಗಳಿಗೆ http://www.tourisminap.com/tirupathidivision.htm
ನೇರವಾಗಿ ಬಸ್ಸ್ ಇದೆಯಂತೆ.
ಮುಂದಿನ ವರ್ಷ ಬೇಸಿಗೇ ರಜದಲ್ಲಿ ಹೋಗಬೇಕು ಅಂದುಕ್ಕೋಂಡಿದ್ದೆ ಆದರೇ ಈಗ ಇದು ಓಂದು ಕಮರ್ಶೀಯಲ್ ಜಾಗ ಆಗಿರುವ ಹಾಗೆ ಕಾಣಿಸುತ್ತೆ. ಬೇಸಿಗೆ ರಜ (ಜೂನ್ - ಜೂಲ್ಯೆ) ಯಲ್ಲೀ ಬೀಯರ್ ಚೆನ್ನಾಗೀರುತ್ತೆ!

ವಸಂತರಾಂ