' ಅಮಟೆ ಕಾಯಿ'

 


ಮರದ ತುಂಬಾ ತೊನೆದಾಡುತ್ತಿರುವ ಅಮಟೆ ಕಾಯಿ ಗೊಂಚಲು ನೋಡಲು ಬಲು ಸುಂದರ. ಅಮಟೆಕಾಯಿ ಗೊಜ್ಜು,ಉಪ್ಪಿನಕಾಯಿ ಮಾಡಿ ಊಟಕ್ಕೆ ಬಡಿಸಿದರೆ,.......ಅಹಾ ಅದರ ಗಮ್ಮತ್ತೇ ಬೇರೆ ಎನಂತೀರಾ ?

ಪ್ರತಿಕ್ರಿಯೆಗಳು

ಮೊನ್ನೆ ಮೊನ್ನೆ, ಸುನಿಲ ಅವರು, ಅಮಟೆಕಾಯಿ ಅದೃಶ್ಯ ವಾಗಿ ಬಿಟ್ಟಿದೆ ಎಂದು ಸಂಪದದಲ್ಲೇ ಹೇಳಿದ್ದರು. ಅಮಟೆಕಾಯಿಯ ಚಿತ್ರ ಸಂಪದಿಗರೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಈ ಚಿತ್ರವನ್ನು ಸಂಪದಿಗರೊಂದಿಗೆ ಹಂಚಿಕೊಳ್ಳಲು ಸುನೀಲರೆ ಕಾರಣರು. ತಮ್ಮ ಪ್ರತಿಕ್ರಿಯೆಗೆ ವಂದನೆಗಳು ಸುಮಾ ಅವರೆ.

ಎನ್.ರಮೇಶ ಕಾಮತರಿಗೆರ ವಂದನೆಗಳು ಅಮಟೆಕಾಯಿಯ ಚಿತ್ರವನ್ನು ಹಾಕಿ ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡಿದ್ದೀರಿ ಅದರಲ್ಲೂ ಗೊಜ್ಜು ಉಪ್ಪಿನಕಾಯಿಯ ಬಗ್ಗೆ ವಿವರಿಸಿ, ಉತ್ತಮ ಚಿತ್ರ ದೊಂದಿಗೆ ಚಿಕ್ಕ ಚೊಕ್ಕ ನಿರೂಪಣೆ, ಚಿತ್ರ ಹಿಡಿಸಿತು. ಧನ್ಯವಾದಗಳು.

ಪಾಟೀಲರೆ ವಂದನೆಗಳು. ಅಮಟೇಕಾಯಿಯ ಗೊಂಚಲಿನ ಚಿತ್ರ ನೋಡಿ ಅದರ ಗೊಜ್ಜು ಹಾಗು ಉಪ್ಪಿನ ಕಾಯಿ ಮಾಡುವ ಬಗೆ ಕುರಿತು ಬರೆದಿದ್ದೀರಿ.ಮುಖತಃ ನಿಮ್ಮ ಭೇಟಿ ಆದಾಗ ಮನೆಯಲ್ಲಿ ಕೇಳಿ ತಿಳಿಸುವೆ ಮತ್ತು ಒಂದಿಷ್ಟು ಅಮಟೆಕಾಯಿಗಳನ್ನು ಕೊಡುತ್ತೇನೆ ತಮ್ಮ ಮನೆಯಲ್ಲಿ ಅದನ್ನು ಉಪಯೋಗಿಸಿ ಅದರ ಸ್ವಾಧಿಷ್ಟದ ಕುರಿತು ಒಂದು ಚುಟುಕು ಬರೆಯಿರಿ.....ಹಹ್ಹ..ಹ್ಹಾ! ಸುಮ್ಮನೆ ತಮಾಷೆಮಾಡಿದೆ ,ಬೇಸರಿಸದಿರಿ.

ಅಮಟೆಕಾಯಿ ಗೊಜ್ಜು,ಉಪ್ಪಿನಕಾಯಿ ಮಾಡಿ ಊಟಕ್ಕೆ ಬಡಿಸಿದರೆ,.......ಅಹಾ ಅದರ ಗಮ್ಮತ್ತೇ ಬೇರೆ ಎನಂತೀರಾ ? ಹಿರಿಯರೆ ನೀವ್ ಹೇಳಿದ್ದು ಕೇಳಿ ಬಾಯಲ್ಲಿ ನೀರ್ ಊರುತ್ತಿದೆ.. ಅಮಟೆ ಕಾಯಿ ಮಾತ್ರ ಹಾಕಿ ಸೆರಿಸಿ ಗೊಜ್ಜು ಛಟ್ನಿ ಮಾಡುವರೆ? ಸ್ಹುಬವಾಗಲಿ.. \|/