ಕೆನಡಾದ ರಾಜಕೀಯ ವಲಯದಲ್ಲಿ ಭಾರತೀಯರ ವರ್ಚಸ್ಸು !

ಉತ್ತರ ಅಮೇರಿಕಾದ  ಕೆನಡಾದಲ್ಲಿ ಭಾರತೀಯರ ಯೋಗದಾನ ಬಹಳ ಮಹತ್ವದ್ದು. ಪಂಜಾಬಿಗಳು, ಗುಜರಾತಿಗಳು,  ಮತ್ತು ದಕ್ಷಿಣ ಭಾರತೀಯರು ಪ್ರಮುಖ ಸ್ಥಾನಗಳಲ್ಲಿ ಮಂಚೂಣಿಯಲ್ಲಿದ್ದಾರೆ. ಕೆನಡಾದ ಆಂಟೇರಿಯೋ ರಾಜ್ಯದಲ್ಲಿ 'ಸೆನೆಟರ್' ಆಗಿ ನೇಮಿಸಲ್ಪಟ್ಟಿರುವ ಸ್ತ್ರೀರೋಗ ವೈದ್ಯೆ 'ಆಶಾ ಸೇಠ್', ಭಾರತದ ಸಂಜಾತೆ.

'ಕನ್ಸರ್ವೇಟಿವ್  ಪಕ್ಷದ ಸಮರ್ಥಕಿ', 'ಸ್ತ್ರೀರೋಗ ತಜ್ಞೆ, ಆಶಾ ಸೇಥ್' , ೧೯೩೯ ರ, ಡಿಸೆಂಬರ್, ೧೫  ರಲ್ಲಿ ಭಾರತದಲ್ಲಿ ಜನಿಸಿದರು. 'ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜ್' ನಲ್ಲಿ ಪದವಿಗಳಿಸಿ, 'ಲಂಡನ್ ನ ರಾಯಲ್ ಬರ್ಕ್ ಶೈರ್ ರುಗ್ಣಾಲಯ', ದಲ್ಲಿ ತರಪೇತಿಹೊಂದಿ ೧೯೭೪ ರಲ್ಲಿ ಕೆನಡದ ಪ್ರಜೆಯಾದರು. ೧೯೭೬ ರಿಂದ 'ಟೊರಾಂಟೋದ ಸೇಂಟ್ ಜಾನ್ಸ್ ಹೆಲ್ತ್ ಸೆಂಟರ್' ನಲ್ಲಿ ವೈದ್ಯೆಯಾಗಿ ದುಡಿಯುತ್ತಿದ್ದಾರೆ.  'NIMDAC Foundation,'  ನ ಸ್ಥಾಪಕರು ಸಹಿತ. 'Canada's National Institute for The Blind', ಸಂಸ್ಥೆಯ ತಂಡದ  ಜೊತೆಯಲ್ಲಿ ದುಡಿಯುತ್ತಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ 'ಕೊಡುಗೈ ದಾನಿ'. ಹಲವಾರು ಜನಸೇವಾ ಸಂಸ್ಥೆಗಳ ಜೊತೆ ಸಂಬಂಧ ಇಟ್ಟುಕೊಂಡು ಬಡವರ, ಅಶಕ್ತರ, ಅಂಗವಿಕಲರ, ಸಹಾಯಕ್ಕೆ ಕಂಕಣಕಟ್ಟಿ ದುಡಿಯುತ್ತಿದ್ದಾರೆ !

ಚಿತ್ರದಲ್ಲಿ, 'ಇಸ್ಕಾನ್ ಸಂಸ್ಥೆಯ ಆಚಾರ್ಯರು'  ' ಟೊರಾಂಟೋನಗರದ ದ್ವೀಪದಲ್ಲಿ ಆಯೋಜಿಸಲಾಗಿದ್ದ  ೪೦ ನೇ ವರ್ಷದ ಸಮಾರಂಭ', ದಲ್ಲಿ  'ಡಾ. ಆಶಾ ಸೇಥ್' ರವರ ಸೇವಾ ಮನೋವೃತ್ತಿಯನ್ನು ಗುರುತಿಸಿ, ಅವರನ್ನು ಸನ್ಮಾನಿಸಿದರು. ಆ ಭವ್ಯ ಸಮಾರಂಭದಲ್ಲಿ ನಾವೂ ಪಾಲ್ಗೊಳ್ಳಲು 'ಟ್ರಿಲಿಯನ್' ಎಂಬ ಭಾರಿ ಪ್ರಯಾಣಿಕರ ೧೯೦೧ ರಲ್ಲಿ ನಿರ್ಮಿಸಲ್ಪಟ್ಟು ಇಂದಿಗೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ನದಿನಾವೆಯಲ್ಲಿ ಸುಮಾರು ೨೦ ನಿಮಿಷ ಯಾನಮಾಡಿದ್ದೆವು !

-ಅಬ್ಬ...ಅದೊಂದು ಅತ್ಯಂತ ಮುದಕೊಟ್ಟ ಅತಿ-ಸುಂದರ ಕ್ಷಣಗಳಲ್ಲೊಂದು !!!

-ಚಿತ್ರ ಲೇಖನ : 

-ಹೊರಂಲವೆಂ 

-ಟೊರಾಂಟೋ, ಕೆನಡಾ.

Taxonomy upgrade extras: