ನೀರಿನಲ್ಲಿ ಬಂಗಾರೇಶ್ವರ

ಶಿರಸಿ - ಬನವಾಸಿ ದಾರಿಯಲ್ಲಿರುವ ಪುಟ್ಟ ಊರು ಗುಡ್ನಾಪುರ. ಇಲ್ಲಿನ ವಿಶಾಲ ಕೆರೆಯ ತಟದಲ್ಲಿದೆ ಶ್ರೀ ಬಂಗಾರೇಶ್ವರ (ಭಗವಾನ್ ಶಿವ) ದೇವಸ್ಥಾನ. ನಾನು ೨೦೦೫ ಅಗಸ್ಟ್ ನಲ್ಲಿ ಭೇಟಿ ನೀಡಿದಾಗ ಶಿವಲಿಂಗ ಮತ್ತು ನಂದಿ ಎರಡೂ ಗುಡ್ನಾಪುರ ಕೆರೆಯ ನೀರಿನಲ್ಲಿ ಮುಳುಗಿದ್ದವು. ಈ ಕೆರೆಯನ್ನು ಕದಂಬ ರಾಜರು ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ. ಹಾಗೆ ಸ್ವಲ್ಪ ಮುಂದೆ ಸಾಗಿದರೆ ಕದಂಬ ರಾಣಿಯರ ಅರಮನೆಯ ಅವಶೇಷಗಳನ್ನು ಕೆರೆಗೆ ತಾಗಿ ಇರುವ ದಿಬ್ಬವೊಂದರ ಮೇಲೆ ಕಾಣಬಹುದು. ರಾಣಿ ಅರಮನೆಯ ಪ್ರಾಂಗಣದವರೆಗೆ ಬಂದು ರಸ್ತೆ ಕೊನೆಗೊಳ್ಳುತ್ತದೆ. ಇದೊಂದು ರಕ್ಷಿತ ಸ್ಮಾರಕ. ಕಾವಲುಗಾರ ಅಲ್ಲಿರದೇ ಇರುವುದು ಸ್ವಾಭಾವಿಕವಾಗಿರುವುದರಿಂದ ಗೇಟು ಹಾರಿ ಪ್ರಾಂಗಣದೊಳಗೆ ಹೋಗಬೇಕಾಗಬಹುದು. ಇಲ್ಲಿಂದ ಗುಡ್ನಾಪುರ ಕೆರೆಯ ವಿಹಂಗಮ ನೋಟ ಸುಂದರ.