ಈ ಗೇಟಿನ ಒಳಗೆ ಹೋಗಿ. ರಾಯರಮಠ ಸಿಗುತ್ತೆ !

ರಾಯರ ಮಠ - ಮಂತ್ರಾಲಯದಲ್ಲಿ. ಒಮ್ಮೆ ಆ ಪ್ರಶಾಂತ ವಾತಾವರಣದೆಡೆಗೆ ಹೊದರೆ ಸಾಕು, ಒಂದು ಹೊಸ ಲೋಕಕ್ಕೇ ಹೋದ ಅನುಭವವಾಗುತ್ತದೆ. ದಿನವಿಡೀ ಜರುಗುವ ಮಂತ್ರಘೋಷಗಳು, ಪೂಜೆಗಳು , ರಥೋತ್ಸವ, ಸತ್ಸಂಗ, ಭಕ್ತರ ಉರುಳುಸೇವೆ, ಕ್ಯೂನಲ್ಲಿ ರಾಯರ ವೃಂದಾವನದ ದರ್ಶನ, ಕೊನೆಗೆ ಊಟದ ವ್ಯವಸ್ಥೆ. ಅದರ ರುಚಿಯೇ ಬೇರೆ !

ನೂರಾರು, ಸಹಸ್ತ್ರಾರು ಭಕ್ತಾದಿಗಳು ಬಂದು ಸೇವೆ ಮಾಡಿಸಿಕೊಂಡು ಹೋಗುತ್ತಾರೆ. ಇದೊಂದು ಪುಣ್ಯ ಸ್ಥಳ.

-ನಮ್ಮ ಮನೆಯ ಪ್ರಾಯ್ವೇಟ್ ಫೋಟೋ ಆಲ್ಬಮ್ ನಿಂದ.

ಪ್ರತಿಕ್ರಿಯೆಗಳು

ಸಾಮನ್ಯವಾಗಿ ಶೀರ್ಷಿಕೆಯನ್ನು ಕಿರಿದಾಗಿ ಬರೆಯುವುದು ವಾಡಿಕೆ. ಅದರೆ ನೀವು ಅತಿ ಉದ್ದ ಶಿರೋನಾಮೆ ಕೊಡುವುದ್ಯಾಕೆ? ಅದು ನಿಮ್ಮ usp
ಅಂತ ನನಗ್ಗೊತ್ತು. :)

ಶೀರ್ಶಿಕೆ ಬರೆಯುವುದು ಒಂದು ಕಲೆ- ಇದನ್ನು ನಾನು ಓದಿದ್ದೇನೆ. ಸರಿ. ಸಾಮಾನ್ಯವಾಗಿ ಒಂದು ಸ್ವಯಂ ತಿಳುವಳಿಕೆ ಕೊಡುವ ಬಿತ್ತಿ ಚಿತ್ರವಾದಲ್ಲಿ ಅದರ ಕೆಳಗೆ ಉದ್ದುದ್ದದ ಶಿರೋನಾಮದ ಅಗತ್ಯವಿಲ್ಲ. ಆದರೆ ನಾನು ಮೇಲೆ ಕೊಟ್ಟ ಶಿರೋನಾಮ ಬಹಳ ಉಪಯುಕ್ತವಾದದ್ದು. ಏಕೆ ಹೇಳಿ ?

ದೊಡ್ಡ ಗೇಟಿಗೂ, ರಾಯರಿಗೂ ಏನು ಸಂಬಂಧ ?

ಓದುಗರು ಈ ಲೇಖನ ನೋಡುವುದೇ ಇಲ್ಲ. ಆದ್ದರಿಂದ ನಾನು ಕೊಟ್ಟ ಶೀರ್ಷಿಕೆ ಸಮರ್ಪಕವಾಗಿದೆ. ಓದುಗನಿಗೆ ಮಾಹಿತಿ ಕೊಡುವುದರಲ್ಲಿ ಯಶಸ್ವಿಯಾಗಿದೆ ಎಂಬುದು ನನ್ನಂತಹ ಅಲ್ಪಮತಿಯ ಮಾತು !

ನಿಮಗ್ಯಾರು ಹೇಳಿದರು, ಚಿಕ್ಕ ಶೀರ್ಷಿಕೆಗಳು ಆವಶ್ಯಕ ಎಂದು ?
ನಿಮ್ಮ ಒಂದು ತಪ್ಪನ್ನು ಮುಚ್ಚಲು ಇನ್ನೊಂದು ಟಿಪ್ಪಣಿ- ಅದೂ ತಿದ್ದುಪಡಿ. ಸ್ವಲ್ಪ ನಿಧಾನವಾಗಿ ಯೋಚಿಸಿ. ಉದ್ದುದ್ದ ಪ್ರತಿಕ್ರಿಯ ಏಕೆ ಬೇಕು ? ಸಂಕ್ಷಿಪ್ತವಾಗಿದ್ದರೆ ಸಾಲದೇ ?

ವೆಂ.

ಕ್ಷಮಿಸಿ,ನೀವು ಬೇಸರ ಮಾಡಿಕೊಂಡಂತಿದೆ.
ನೀವು ಬರೆದುದು ತಪ್ಪೆಂದು ನಾನು ಹೇಳಿಲ್ಲ.
ನಿಮ್ಮ ಶೈಲಿ ಅದೆಂದು ಹೇಳಿದೆ-ವಾಡಿಕೆಗೆ ವ್ಯತಿರಿಕ್ತ ಎಂದು (ಸಲಿಗೆಯಿಂದ) ಹೇಳಿದೆ.ಹೇಳಬಾರದಿತ್ತು ಎಂದು ಈಗನಿಸುತ್ತಿದೆ.
ನಾನು ಬರೆದದ್ದು ಉದ್ದವಾಯಿತೇ? ಕಿರಿದಾಗಿಸುತ್ತೇನೆ.
ಪ್ರೀತಿಯಿರಲಿ.

ಪ್ರೀತಿಯ ಅಶೊಕ್ ರವರೆ,

ನಾನು ಇತ್ತೀಚೆಗೆ ನೋಡ್ತಾ ಇರೋದು- ನನ್ನ ಮಗನಿಂದಾಗಿ ಎಲ್ಲ ಕಿರಿಯರೂ ತಮ್ಮ ವೈಯಕ್ತಿಕ ಭಾವನೆಗಳನ್ನು ವ್ಯಕ್ತಪಡಿಸುವಾಗ, ಅತಿ ಸುಲಭವಾಗಿ ತೆಗೆದುಕೊಳ್ಳುತ್ತಾರೆ. ಆದರೆ, ಅವರೇ ಯಾವುದಾದರು ಹುಡುಗಿ ಅಥವಾ ಅವರ ಓರಿಗೆಯವರೊಡನೆ ಮಾತಾಡುವಾಗ, 'ವಾಟ್ ಐ ಮೀನ್' ಇತ್ಯಾದಿ, 'ಎಟಿಕೇಟ್ಸ್' ಬಳಸುತ್ತಾರೆ. ಸಲಿಗೆ ಹೇಗೆ ಬರುತ್ತೆ ? ಹೀಗೆ ಯಾಕೆ ಮಾಡ್ತೀರಿ, ಎಂದು ನಾವು ಯಾರ್ನಾದ್ರೂ ಕೇಳಲು ಸಾಧ್ಯವೇ. ಇನ್ನು ಬೇಸರ ಆಗುವುದು ಅನಿವಾರ್ಯವೇ ಅಲ್ಲವೇ ?

ಮನೆಯಲ್ಲೂ ನಮ್ಮ ತಾಯಿ, ತಂದೆ ಸಹೋದರ ಸಹೋದರಿಯರ ಜೊತೆಗೆ ಸಂಭಾಷಿಸುವಾಗಲೂ ಇದು ಅತಿ ಮುಖ್ಯ. ಅಮ್ಮನಿಗೆ ಅಡಿಗೆ ಸೊಗಸಾಗಿದೆ, 'ಥಾಂಕ್ಸ್' ಹೇಳಬಾರದೇ. ಅಪ್ಪ, ಅಷ್ಟು ದೂರ ಹೋಗಿ ನಿಮ್ಮ ಪಿ. ಪಿ. ಎಫ್ ಫಂಡಿನ ಹಣ ತುಂಬಿಬಂದಾಗ "ಥಾಂಕ್ಸ ಅಪ್ಪ," ಎಂದು ಹೇಳಬಹುದಲ್ಲ. ಅವ್ರೇನು ಬೇರೆಯವ್ರೇ, ಅವರ್ಗ್ಯಾಕೆ ಇದೆಲ್ಲಾ ? ನಿಮ್ಮ ತಂಗಿ, ನಿಮಗೆ ಜ್ಞಾಪಿಸಿ ಏನಾದ್ರೂ ಹೇಳಿದ್ರೆ, ಕೋಪ ಎಕೆ ?

ಇದು ತರವಲ್ಲ. ಇದನ್ನು ನಾವು ಸ್ವಲ್ಪ ಅಭ್ಯಾಸ ಮಾಡಿಕೊಳ್ಳುವುದು ಅಗತ್ಯ. ಸಲಿಗೆ..... ಅದು ಬೇರೆ... ನಾವು ಅತ್ಯಂತ ಗಹನವಾದ ಮಾತುಕತೆ ಮಾಡುತ್ತಿದ್ದು, ಒಮ್ಮೆ ಯಾವಾಗಲಾದರು ಈ ಕಟ್ಟುಪಾಡುಗಳನ್ನು ಕಳಚಿಕೊಂಡು ಸಮವಯಸ್ಕರಂತೆ ವರ್ತಿಸಲು ಸುರು ಮಾಡುತ್ತೇವೆ. ಆ ಸ್ಥಿತಿ ಬಂದರೆ ಒಳ್ಳೆಯದು. ಒಟ್ಟಿನಲ್ಲಿ ಸ್ವಲ್ಪ 'ಎಟಿಕೇಟ್ಸ್ ' ಗಳು ಮುಖ್ಯ ಅಂತ ನನ್ನ ಅನಿಸಿಕೆ. ಇದು ನನ್ನ ವೈಯಕ್ತಿಕವಾದ ಹೇಳಿಕೆ. ಅದು ತಪ್ಪಿರಲೂ ಬಹುದು.

ಯಾವುದನ್ನೂ ಬೇರೆಯವರ ಮೇಲೆ ಹೇರುವುದು ಒಳ್ಳೆಯದೇ ! ನೀವು ಯಾವುದಾದರೂ ವ್ಯವಸ್ಥೆಯ ರುವಾರಿಯಾಗಿ ( ಉದಾ : ನೀವು ಸಂಪದ ಕನ್ನಡ ಸೈಟಿನ ಸೀ. ಇ. ಒ; ಆಗಿದ್ದೀರಿ ಅಂತ ಇಟ್ಕೊಳ್ಳೋಣ ! ಆಗ ಸರಿ.) ನಿಮಗೆ ಕಷ್ಟ ಬಂದಾಗ ಹೀಗಲ್ಲ ಹೀಗೆ, ಎಂದು ಹೇಳಿದರೆ ಪರವಾಗಿಲ್ಲ.

" ಬೋರ್ ಮಾಡುವುದು ನನ್ನ ಜಾಯಮಾನದಲ್ಲಿಲ್ಲ ; ಸ್ವಲ್ಪ ಬಿಡಪ್ಪ ಜಾಗ ಅಂದ್ರೆ, ಗಾವುದ ದೂರ ಹೋಗೋದ್ ನನ್ನ ಮನಸ್ಸಿನ ಸ್ಥಿತಿ ".

ಸಿಗೋಣ.

ವಂದನೆಗಳು
ವೆಂ.

Those men with their jaunty jalopies, Guess who is coming to dinner, one flew over a cackoo's nest, where were you when the lights were off ? On a clear morning.... , Far from the madding croud, bahu oh jo piya man bhAye, jis des me ganga behti hai etc;

ಮೇಲೆ ತಿಳಿಸಿದ ಹಲವು ಹಾಲಿವುಡ್ ಮತ್ತು ಹಿಂದಿ ಚಿತ್ರಗಳ ಟೈಟಲ್ ಗಳು ದೊಡ್ಡದಾಗಿಯೇ ಇವೆ. ನಿಮಗೂ ಅದು ತಿಳಿದಿದೆ !

ಸರ್ ,

ಉದ್ದ ಶೀರ್ಷಿಕೆ ಏಕೆ ?

ಎಂಬ ಪ್ರಶ್ನೆಯನ್ನು ಸ್ವಲ್ಪ ನಯವಾಗಿ ಕೇಳಬಹುದಿತ್ತೇನೋ ? ಆದರೆ ಈ ಅವಸರದ ಮತ್ತು ತಂತ್ರಜ್ಞಾನದ ಯುಗದಲ್ಲಿ ಇದು ಎಲ್ಲೆಡೆಯ ಅನುಭವ . ಹೋಗಲಿ ಬಿಡಿ.

ಇದಕ್ಕೆ ಎರಡು ಉತ್ತರ . ಒಂದು -ಓದುಗರ ಗಮನ ಸೆಳೆಯುವದು ; ಎರಡು - (ಇದು ಸ್ವಲ್ಪ ಒರಟು ಕಾಣಬಹುದು ; ಆದರೆ ಹಾಗೆ ಪರಿಗಣಿಸಬೇಕಿಲ್ಲ) - ನನ್ನ ಇಷ್ಟ! (ಎದುರಿಗಿದ್ರೆ ನಗುತ್ತಾ ಹೇಳಬಹುದೇನೋ , ಇಲ್ಲಿ ಅದೇನೋ ಅಂತಾರಲ್ಲ ಸ್ಮೈಲಿ - ಭಾವಸೂಚಕ ಚಿತ್ರ- :) ನಗುಮುಖದ್ದು ಸೇರಿಸಬಹುದು. ಆದರೆ ಅದನ್ನೆಲ್ಲ ತಿಳಿದುಕೊಂಡು ಮಾಡುವದು ....)

ಏನೇ ಇರಲಿ , ನೀವು ಮಂತ್ರಾಲಯವನ್ನು ನೆನಪಿಸುವ ಮೂಲಕ , ನನಗೆ ರಾಜ್‌ಕುಮಾರ್ ಹಾಡಿರುವ ಮಧುಮಧುರ ಗೀತೆಗಳನ್ನು ನೆನಪಿಸುವ ಮೂಲಕ , ನಾನು ಅಷ್ಟೊಂದು ಆಸ್ತಿಕನಲ್ಲದಿದ್ದರೂ , ಭಕ್ತಿ ಭಾವ ತುಂಬಿ ಮನಸ್ಸು ಮುದಗೊಳ್ಳುವಂತೆ ಮಾಡಿದಿರಿ , ತುಂಬ ಧನ್ಯವಾದಗಳು.

(ಸರ್ , ನಿಮಗೆ ಗೋವಿಂದನ ಮೇರಿ ಮರ್ಜಿ ಹಾಡಿ ಕೇಳಿ/ನೋಡಿದ್ದೀರಾ ? )

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಅಶೋಕ್

ನನ್ನ ಹಣೆಬರಹ ವನ್ನು ತಿದ್ದಿದ್ದೇನೆ ; [ ಸಾಧ್ಯವೇ?] ನೋಡಿ ಸರಿಯಾಗಿದೆಯೋ ಹೇಗೆ ?

ತಿದ್ದೋಕೆ ಯಾಕೆ ಹೋದಿರೋ? ಇಂತಹ ಸೌಕರ್ಯವಿದೆ ಎನ್ನುವುದನ್ನು ಗೊತ್ತು ಮಾಡಿದ್ದಕ್ಕೆ ಧನ್ಯವಾದ ಅನ್ನಲೇ?
ನನ್ನ ಸಣ್ಣ ಪ್ರತಿಕ್ರಿಯೆ ನಿಮಗೆಷ್ಟು ಕಿರಿಕಿರಿಯಾಯಿತು ಎನ್ನುವುದು ಇದರಿಂದ ಸ್ಪಷ್ಟ. ಕ್ಷಮಿಸಿಬಿಡಿ.
*ಅಶೋಕ್

Dear Ashok,

ನನ್ನ ವರ್ತನೆ ನನಗೆ ನಾಚಿಗೆ ಉಂಟುಮಾಡಿದೆ. ವಯಸ್ಸಾಯಿತು. ಬುದ್ಧಿಮಾತ್ರ ಬರಲಿಲ್ಲ. ನೀವು ಹೇಳಿದ್ದರಲ್ಲಿ ತಪ್ಪೇನು ? Ego ನೋಡಿ. ನಾನು, ನನಗೆ, ಎಲ್ಲಾ ಗೊತ್ತು. ಇತ್ಯಾದಿ.

ಕ್ಷಮೆಯಿರಲಿ.

ಛೇ ಛೇ ಬೇಜಾರು ನಾಚಿಕೆ ಏನು ಪಟ್ಕೋ ಬೇಡಿ.. ಈ ಹುಡುಗ ಚೇಷ್ಟೆ ನೋಡಿ ನಗಬೇಕು ಅಷ್ಟೆ.
ಬೇರೆ ಯಾವುದೇ ಪ್ರತಿಕ್ರಿಯೆ ಸಹಜವಾದದ್ದಲ್ಲಾ..
ಬುದ್ಧಿ ಬ೦ದಿಲ್ಲಾ ಅ೦ತಾ ಚಿ೦ತೆ ಮಾಡಬೇಡಿ...ಬುದ್ಧಿ ಜಾಸ್ತಿ ಇದ್ದರೆ ಶಾ೦ತಿ ಯಿರುವಿದಿಲ್ಲಾ.
ಆಗ ಈ ಮಠ ಆ ಸ೦ನ್ಯಾಸಿ ಗಳ ಹುಡುಕಾಟದಲ್ಲಿ ದುಡ್ಡೂ ಮತ್ತು ಕಾಲ ವ್ಯಯವಾಗುತ್ತೆ.
ನಿಮ್ಮ ಬುದ್ಧಿ ಗೆ ವಿಶ್ರಾ೦ತಿ ಸಿಗಲಿ - ಅದೇ ನಿಜವಾದ ಸಿದ್ಧಿ.

ಶೀರ್ಷಿಕೆ ಯ ವಿಷಯಕ್ಕಿನ್ನಾ.. ಈ ಮಠಗಳ ಶಿಷ್ಯಾರು ನಾವ್ಯಾಕ್ಕೆ ಆಗ್ತೀವಿ ಅನ್ನೋದು ಮುಖ್ಯ.
ಮಠಗಳು ಸಮಾಜವನ್ನು ಮತೀಯ ಸುಳಿಯಲ್ಲ್ಲಿ ಎಳೆದು ಭ್ರಾ೦ತರನ್ನಾಗಿ ಮಾಡುತ್ತವೆ.
ನಮ್ಮ ಕರ್ನಾಟಕದ ಮಠಗಳ ಚರಿತ್ರೆಯನ್ನು ನೋಡಿದರೆ, ಎಲ್ಲರೂ ಕಾಲೇಜು ಆಸ್ಪತ್ರೆ ಇಡುವವರೆ.
ಎಲ್ಲರೂ ಶಿಕ್ಷಣ ಪ೦ಡಿತರೆ. ಇವೆಲ್ಲಾ ಹಾಗಿರಲಿ . ಅದಕ್ಕಿನ್ನಾ ಮುಖ್ಯ ನಾವು
ಮಠಕ್ಕೆ ಎಕೆ ಹೋಗ್ತೀವಿ ?? ಸ೦ನ್ಯಾಸಿಗಳ ಕಾಲಿಗೆ ಏಕೆ ಬೀಳ್ತೀವಿ ?
ಅಲ್ಲಿ ಶಾ೦ತಿ ಅದ್ಯಾವ ಕಾರಣಕ್ಕೆ ಸಿಗುತ್ತದೆ ?? ಎ೦ದು ಪ್ರಶ್ನಿಸಿದಾಗ ನಮಗೆ ನಮ್ಮೊಳಗೆ ಉತ್ತರ ಸಿಗುತ್ತೆ.
ಅಲ್ಲಿ ನಮ್ಮ ನ೦ಬಿಕೆಗಳನ್ನೇ ಹೊತ್ತು ಬ೦ದ "ಭಕ್ತರು" ಇರುತ್ತಾರೆ.
ನಮ್ಮ ಮನಸ್ಸಿಗೆ ಅವರ ನಡುವೆ ಒ೦ದು ರೀತಿಯ ರಕ್ಷಣೆ ಸಿಗುತ್ತೆ.
ಬೇರೆ ಎಲ್ಲಾ ಕಡೆ ನಮ್ಮ ನ೦ಬಿಕಗಳ ಜೊತೆ ಘೋರ ಘರ್ಷಣೆ ನಡಿಯುತ್ತಿರುತ್ತದೆ.
ಇದೇ ನ೦ಬಿಕೆಯನ್ನು ಮುಸ್ಲಿಮ್ಮರು ಹೊತ್ತಿರುತ್ತಾರೆ. ಅದಕ್ಕೆ ಅವರು ತಪ್ಪದೇ ಮೂರು ಮಾರಿ ನಮಾಜ್ ಮಾಡುವುದು.
ಹೀಗೆ ಒ೦ದೆ ರೀತಿಯ ನ೦ಬಿಕೆಯನ್ನು ಹೊತ್ತವರು ಸೇರಿದಾಗ ಒ೦ದು ಪ೦ಗಡವು ನಿರ್ಮಾಣ ವಾಗುತ್ತದೆ.
ಮು೦ದೆ ಈ ಪ೦ಗಡದವರು ಮಾದುವ ಕೆಲಸ ವೇನೆ೦ದರೆ ವಾದ ಮತ್ತು ಜಗಳ.
ಈಗ ಪ೦ಜಾಬಿನಲ್ಲಿ ನೋಡಿ ಮೂರು ವರ್ಷದಿ೦ದ ಕ್ಷಾಮ , ಆಗ ಯಾವ ರೀತಿಯ ಒಗ್ಗಟಿರಲಿಲ್ಲಾ.
ಆದರೆ ಯಾರೋ ಒಬ್ಬ ಪ೦ಗಡದವನು ತಮ್ಮ ಪ೦ಗಡದ ಗುರುವಿನ೦ತೆ ವಸ್ತ್ರವನ್ನು ತೊಟ್ಟಿದರಿ೦ದ ಪೋರ್ಣ ಪ೦ಜಾಬ್ ಅಲ್ಲೋಲ ಕಲ್ಲೋಲ.
ಈ ಎಲ್ಲಾ ಸತ್ಯವನ್ನು ನೀವು ಕ೦ಡರೆ , ಮತ್ತೊಮ್ಮೆ ಯಾವುದೇ ಮಠಗಳಿಗೆ ಹೋಗುವುದಿಲ್ಲಾ.
ತಕ್ಷಣ ನೀವು ಈ ಪುರೋಹಿತಶಾಯಿ ಮಠಗಳಿ೦ದ ಬಿಡುಗಡೆ ಹೊ೦ದುತ್ತೇವೆ.
ನಾವು ಒಬ ಮನುಷ್ಯನನ್ನು ಸ೦ತ ಅ೦ತಾ ಏಕೆ ಕರೆಯೋದು ??
ನಮ್ಮಲ್ಲಿ ಒ೦ದು Ideology ಇರುತ್ತೆ , ಅದನ್ನು ಅವರು Follow ಮಾಡ್ತಾಯಿದ್ದಾರೆ ಅ೦ತಾ ನಾವು ತಿಳಿದುಕೊಳ್ಳುತ್ತೇವೆ ಅಲ್ಲವಾ ??.
ಅದರಿ೦ದ ಅವರು ನಮ್ಮ Idols ಅಥವಾ ಪೂಜಿಸುವ ಗೊ೦ಬೆಗಳಾಗ್ತಾರೆ.
ಇದನ್ನು ಪ್ರಶ್ನಿಸದೆ ನಾವು ಸ೦ಸ್ಕೃತಿ --culture tradition ಇತ್ಯಾದಿ ಹೆಸರನ್ನು ಕೊಡುತ್ತೇವೆ.
ಕಣ್ತೆರೆದು ನೋಡಿ.ಕಿವಿತೆರೆದು ಕೇಳಿ.. ಬರೀ ಈ ಮಂತ್ರಘೋಷಗಳನಲ್ಲಾ .. ನಮ್ಮಲ್ಲಿ ಈ ನ೦ಬಿಕೆ ಗಲ್ಯಾಕೆ೦ದು ?
"ದೇವನೊಬ್ಬ ನಾಮ ಹಲವು " -- ದೇವರಿಗೆ ನಾಮ ಕೊಟ್ಟವರು...ನಾಮ ಬಳಿದವರೇ .. ಈ ಮಠಗಳು ....ಅಲ್ವೇನು ??

Dear shri Murali,

ಕಣ್ತೆರೆದು ನೋಡಿ.ಕಿವಿತೆರೆದು ಕೇಳಿ.. ಬರೀ ಈ ಮಂತ್ರಘೋಷಗಳನಲ್ಲಾ .. ನಮ್ಮಲ್ಲಿ ಈ ನ೦ಬಿಕೆ ಗಲ್ಯಾಕೆ೦ದು ?
"ದೇವನೊಬ್ಬ ನಾಮ ಹಲವು " -- ದೇವರಿಗೆ ನಾಮ ಕೊಟ್ಟವರು...ನಾಮ ಬಳಿದವರೇ .. ಈ ಮಠಗಳು ....ಅಲ್ವೇನು ??
How realistic your are sir. Please keep it up !