ವಾಹ್ ತಾಜ್ !

ಔರಂಗಾಬಾದಿನ " ಬೀಬಿ ಕ ಮಕ್ಬರ " ಕಟ್ಟಡವನ್ನು ನೋಡಿದ ಜನ, ತಾಜ್ ನೋಡಿದ ಮೇಲೆ ಅಂತಹ ವಿಸ್ಮಯವನ್ನು, ಕೌತುಕವನ್ನೂ ತಮ್ಮ ಮುಖದಲ್ಲಿ ತೋರಿಸುವುದಿಲ್ಲ. ೪ ಕಡೆಯೂ ಸಮನಾದ ಚಚ್ಚೌಕಾರದ ಅಮೃತಶಿಲೆಯ ಭವ್ಯ ಮಂದಿರ ಅದು. ಮಿನಾರ್ಗಳೂ ಅಂತೆಯೆ. ಆ ಮಿನಾರ್ಗಳು, ನಾಲ್ಕೂಕಡೆ ನಿಂತು ವೀಕ್ಷಿಸುತ್ತಿವೆ. ಔರಂಗಾಬಾದಿನ ಮಹಲ್ಲಿನ ಪ್ರತಿರೂಪ ತಾನೇ ಅದು ? ವಿಶಾಲವಾಗಿದೆ. ನಿಜ. ಇನ್ನೂ ಒಳ್ಳೆಯ ಅಮೃತಶಿಲೆಗಳನ್ನು ಉಪಯೋಗಿಸಿದ್ದಾರೆ. ಆದರೆ ಅದರ ನಿರ್ಮಾಣಕ್ಕೆ ಇರಾನ್ ನಿಂದ ೨೦,೦೦೦ ಸಾವಿರ ಶಿಲ್ಪಿಗಳು ಹಗಲಿರುಳು ದುಡಿಯಲಿಲ್ಲವೇ ? ಹಲವಾರು ಲಕ್ಷರೂಪಾಯಿಗಳು ವಿಚ್ಚಮಾಡಿ ಕಟ್ಟಿದ್ದಾರೆ ಅನ್ನುತ್ತೀರಿ ತಾನೇ ?

ಈಗ, ಎಲ್ಲರ ಬಾಯಿನಲ್ಲೂ ವಿಶ್ವದ ೭ ಪ್ರಸಿದ್ಧವಿಸ್ಮಯಗಳು ಯಾವುವು ? ಎನ್ನುವ ಮಾತೆ ! ಹೊಸದಾಗಿ ಹಲವು ಸೇರ್ಪಡೆಯಾಗಿವೆ.

ಈಗ ಟಾಜ್ ಮಹಲ್ ತನ್ನ ಮೊದಲಿನ ಸ್ಥಾನವನ್ನು ಕಾಯಂಆಗಿ ಇಟ್ಟುಕೊಂಡಿದೆಯೋ ಇಲ್ಲವೊ, ಎನ್ನುವ ಕಾತರ ಕೆಲವರಿಗೆ.

"ಹೌದು. ಇಷ್ಟು ಎತ್ತರದ ರಮ್ಯ, ಭವ್ಯ, ಕಲೆಯ ಬಲೆಗಳನ್ನು ಹೇಗೆ ಮುಗಿಲಿಗೆ ಕೊಂಡೊಯ್ದರು "? ಇದನ್ನು ನಮ್ಮ ಭಾರತದ ದಕ್ಷಿಣ ಪ್ರದೇಶದ ದೇವಾಲಯಗಳನ್ನು ವಿಕ್ಷಿಸಿದ ಯಾತ್ರಿಕರು ಒಮ್ಮೆಲೇ ಕೇಳುವ ಪ್ರಶ್ನೆ !

ಈಗಿನ ಕ್ರೇನ್ ಮುಂತಾದ ಯಂತ್ರಗಳು, ವೈಜ್ಞಾನಿಕ, ತಂತ್ರಜ್ಞಾನಗಳಿರುವ ಈಗಿನ ಯುಗದಲ್ಲಿ ಅಂತಹ ನಿರ್ಮಾಣ ಕಾರ್ಯ ಯಾರಿಗೂ ಸವಾಲೆನಿಸುವುದಿಲ್ಲ. ಹಂಪೆಯ ವಿರೂಪಾಕ್ಷದೇವಾಲಯದ ಶಿಖರದ ಬಗ್ಗೆ ನಾವು ಯೋಚಿಸಿದರೆ, ಮಧುರೆ ಮೀನಾಕ್ಷಿದೇವಾಲಯವನ್ನು ನೋಡಿದವರಿಗೆ, ಇದನ್ನು ಹೇಗೆ ಕಟ್ಟಿದರಪ್ಪ, ಎಂದು ಅನ್ನಿಸುತ್ತದೆ.

ನಮ್ಮ ಬೆಂಗಳೂರಿನಲ್ಲಿ ಕಂಗೊಳಿಸುವ, ಭವ್ಯ "ವಿಧಾನ ಸೌಧ "ದ ವಿಶಾಲತೆಗೆ, ಅಂದಕ್ಕೆ ಮಾರುಹೋಗದವರ್ಯಾರು ?

ದಕ್ಷಿಣದ ಶೈಲಿಯಲ್ಲಿ ಕಡೆದು ನಿಲ್ಲಿಸಿರುವ ಈ ಅರಮನೆಯನ್ನು, ದೇಗುಲವನ್ನು, ಮಹಲ್ ಯಾವ ಶಿಲ್ಪಕ್ಕೆ, ಕಡಿಮೆಯಿದೆ ?

ಅದೂ ನಮ್ಮದೇಶದ ಕುಶಲ ಕರ್ಮಿಗಳನ್ನೂ, ಇಲ್ಲಿನ ವಾಸ್ತು, ಸಂಪನ್ಮೂಲಗಳನ್ನೂ ಸರಿಯಗಿ ಉಪಯೋಗಿಸಿಕೊಂಡು ನಿರ್ಮಿಸಿದ, ಸೊಗಸಿನ ಸೌಧಕ್ಕೆ, ಆ ವಿಶ್ವಕರ್ಮರಿಗೆ ನಮೋನಮಃ.