ಹಾರುವ ಸಿದ್ಧತೆಯಲ್ಲಿ !

ಈ ಚಿತ್ರ, ಸ್ಯಾನ್ ಫ್ರಾನ್ಸಿಸ್ಕೊ ನಗರದ ಬಳಿಯ ಬೀಚ್ ನ ಹತ್ತಿರ ತೆಗೆದದ್ದು.

-ಖಾಸಗಿ ಆಲ್ಬಮ್ ನಿಂದ.

ಪ್ರತಿಕ್ರಿಯೆಗಳು

" ಅರಸಿ ನೇಸರೊಸಗೆ ಬಿಸಿಯ

ಹರಹಿ ತೊರೆಯ ಮೇಲೆ ಮೈಯ

ಮರೆತು ಇರುಳ ಕಹಿಯ ಜಡವ

ಹಾರು ಹಕ್ಕಿ ಹಾರು! ಗೆಲುವು ಮೂರೇ ಮಾರು "!

ಅಬ್ಬ ಎಷ್ಟು ದಿವ್ಯ, ಭವ್ಯ ಅಲ್ಲವೆ, ಬೆನಕರೆ....

ಬಹಳ ದಿನಗಳಾಗಿತ್ತು ನಿಮ್ಮ ಬರಹವನ್ನು ಸಂಪದದಲ್ಲಿ ಕಂಡು. ಇನ್ನೊಂದು ಪುಟ್ಟ ಕವನವೂ ಬೊಂಬಾಟಾಗಿದೆ. ಎಲ್ಲ ಗೆಳೆಯರಿಗೆ ವಂದನೆಗಳು.

ವೆಂ

ನೀವು ನೋಡಿದ ಚಿತ್ರ ನನ್ನ ಮಗ ತೆಗೆದದ್ದು. ನಾನಗೂ ಈ ಅದ್ಭುತನಗರವನ್ನು ವೀಕ್ಷಿಸುವ ಸುವರ್ಣಾವಕಾಶ ಬಂತು. ಈ ಪಕ್ಷಿಗಳನ್ನು’ ಸೀ ಗಲ್” ಎನ್ನುತ್ತಾರೆ. ಅವು ಬಹಳ ಜನಪ್ರೇಮಿ ಪಕ್ಷಿಗಳು. ಸ್ವಲ್ಪ ಕಾಳು ತೋರಿಸಿದರೆ ನಿಮ್ಮಪಕ್ಕದಲ್ಲೇ ಪಟಪಟನೆ ರೆಕ್ಕೆ ಹೊಡೆಯುತ್ತಾ ಹಾರಿ ನಮ್ಮನ್ನು ಸ್ತಬ್ಧಗೊಳಿಸುತ್ತವೆ. ನೋಡಲು ಪಾರಿವಾಳದತರಹದ ಅಚ್ಚುಕಟ್ಟಾದ ಮೈಕಟ್ಟಿಲ್ಲ. ಆದರೂ ಅಡ್ಡಿಯಿಲ್ಲ. ಹಾರುವಾಗಮಾತ್ರ ಎಂತಹವರನ್ನೂ ಮೋಡಿಮಾಡಿಬಿಡುತ್ತವೆ ! ದುರದೃಷ್ಟವಶಾತ್ ಇವುಗಳ ಹಾರುವಿಕೆಯ ದೃಷ್ಯವನ್ನು ಕೊಳ್ಳೆಹೊಡೆಯುವ ಯೋಜನೆಗೆ ಕೈಹಾಕಿದಾಗ, ಅರಿವಾದದ್ದು, ಕ್ಯಾಮರಸೆಲ್ ಬಾಯಾರಿಕೆಯಿಂದ ಕಣ್- ಕಣ್ ಬಿಡುತ್ತಿತ್ತು. ಒಟ್ಟಿನಲ್ಲಿ ಅವನ್ನು ನನ್ನ ತಲೆಯಲ್ಲಿ ಸೇವ್ ಮಾಡಿಕೊಂಡಿದ್ದೇನೆ ! ಒಂದು ವಿಷಯ- ಹಾರುವಿಕೆಯನ್ನು ಯಾರುಬೇಕಾದರೂ ಸೆರೆಹಿಡಿಯಬಹುದು. ಅದರಲ್ಲೇನೂ ಹೆಚ್ಚುಗಾರಿಕೆಯಿಲ್ಲ.