ಶೃಂಗೇರಿ ಶ್ರೀ ಶಾರದಮ್ಮನವರ ದೇವಸ್ಥಾನ.

ಈ ದೇವಸ್ಥಾನ ಪುರಾತನವಾದದ್ದು. ೧೯೦೭ ರವರೆಗೆ ಅದು ಹೆಂಚಿನಛಾವಣಿಯನ್ನು ಹೊಂದಿತ್ತು. ಅದನ್ನು ಶ್ರೀಮಠದ ೩೩ ನೆಯತಿವರ್ಯರಾದ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ವಿಶಾಲವೂ ಭವ್ಯವೂ ಆದ ದೇವಾಲಯವನ್ನು ನಿರ್ಮಿಸಲು ಆಶಿಸಿದರು. ನಾಟ್ಟುಕೋಟೈ ಶೈಲಿಯಲ್ಲಿ ಪುನರ್ರಚನೆಮಾಡಲಾಯಿತು ಅದು ಶ್ರೀ ಶ್ರೀ ಚಂದ್ರಶೇಖರಸ್ವಾಮಿಗಳ ಕಾಲದಲ್ಲಿ ಮುಗಿದು, ೧೯೧೬ ರಲ್ಲಿ ಕುಂಬಾಭಿಷೇಕದೊಂದಿಗೆ ಸಂಪನ್ನವಾಯಿತು. ನಾಲ್ಮಡಿ ಕೃಷ್ಣರಾಜಒಡೆಯರೇ ಖುದ್ದಾಗಿ ಬಂದು ಆಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಶಾರದೆಯ ಹುಸಿನಗೆಯ ಅಭಯಹಸ್ತದ ಪ್ರಭೆ, ಪಟ್ಟಕ್ಕೆ ಬಂದ ಎಲ್ಲಾ ಆಚಾರ್ಯರ ಕಾರ್ಯಗಳಿಗೂ ಮೊದಲನೆಯದಾಗಿದ್ದು, ಅವರಿಗೆಲ್ಲಾ ಮಾರ್ಗದರ್ಶಿಯಾಗಿ ಶೃಂಗೇರಿಯನ್ನು ಕಾಯುತ್ತಿದೆ.

-ಆಲ್ಬಮ್.