ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ.

"ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯ,"ವನ್ನು”ಶಿವಾಜಿಮಹಾರಾಜ ವಸ್ತು ಸಂಗ್ರಹಾಲಯ,’ವೆಂದು ಕರೆಯುತ್ತಿರುವುದು ಎಷ್ಟು ಸಮಂಜಸ ಎನ್ನುವುದು ಚರ್ಚಾಸ್ಪದವಾದ ವಿಷಯ. ಏಕೆಂದರೆ, ಶಿವಾಜಿಯವರು ಉಪಯೋಗಿಸುತ್ತಿದ್ದ ಕತ್ತಿ ಗುರಾಣಿ, ಕವಚಗಳನ್ನು ಬಿಟ್ಟರೆ ಶಿವಾಜಿಯವರನ್ನು ಹೆಸರಿಸುವ ಯಾವ ಸನ್ನಿವೇಷಗಳೂ ಅಲ್ಲಿಲ್ಲ. ಈ ಭವ್ಯ ಕಟ್ಟಡದ ಶಿಲ್ಪಿ, ವಿಟೆಟ್ ರವರು. ಪ್ರಾಚ್ಯ ಪರಂಪರಾಗತ ವಸ್ತುಗಳ ಖಜಾನೆಯೇ ಅಲ್ಲಿದೆ. "ನ್ಯಾಚುರಲ್ ಹಿಸ್ಟರಿ ವಿಭಾಗ, " ಸೊಗಸಾಗಿದೆ. ತೈಲರಂಜಿತ ಕಲೆಯ ಸಂಗ್ರಹ ಬಹಳ ಅದ್ಬುತವಾಗಿದೆ. ಇದನ್ನು ಸರ್ ರತನ್ ಟಾಟಾ ಟ್ರಸ್ಟರವರು ದಾನವಾಗಿ ಕೊಟ್ಟಿದ್ದಾರೆ. ಅದಕ್ಕೆ ಟಾಟಾ ಪರಿವಾರದ, " ಸರ್ ರತನ್ ಟಾಟಾ,"ರವರನ್ನು ಎಷ್ಟು ಅಬಿನಂಸಿದರೂ ಅದು ಕಡಿಮೆಯೆ. ಇವರ ಅಣ್ಣ ದೊರಾಬ್ ಟಾಟಾ, ಟ್ರಸ್ಟ ನಿರ್ಮಿಸಿ, ಮಾಡಿದ ಸಾರ್ವಜನಿಕ ಸೇವೆ ಅವಿಸ್ಮರಣೀಯ.

ಟಾಟಾ ಕ್ಯಾನ್ಸರ್ ಆಸ್ಪತ್ರೆ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಎನ್. ಸಿ. ಪಿ. ಎ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್, ಟಾಟಾ ಇನ್ಸ್ಟಿಟ್ಯೂಟ್ , ಬೆಂಗಳೂರು - ಇವೆಲ್ಲಾ ಭಾರತದಲ್ಲಿ ಪ್ರಪ್ರಥಮವಾಗಿ ತೆರೆದ ಭವ್ಯ ಜನಹಿತಕಾರಿ ಯೋಜನೆಗಳು !

-ಟೈಮ್ಸ್ ಆಫ್ ಇಂಡಿಯದ ಕೃಪೆ.

ಪ್ರತಿಕ್ರಿಯೆಗಳು

೧) ಈ ಕಟ್ಟಡವು ನಮ್ಮ ಬಿಜಾಪುರದ ಡೆಕ್ಕನ್ ವಾಸ್ತುಶಿಲ್ಪ ಅನುಸರಿಸಿ ಕಟ್ಟಿದುದಾಗಿ ಹೊರಗಿನ ಶಿಲಾಫಲಕ ಹೇಳುತ್ತದೆ.
೨) ಇಲ್ಲಿ ಡೆಕ್ಕನ್ ಅಂದರೆ ಕನ್ನಡವೇ/ ಕನ್ನಡ ನಾಡೇ .
೩) ಇಲ್ಲಿ ಅನೇಕ ಹೊಯ್ಸಳ ಮತ್ತು ಚಾಲುಕ್ಯ ಶಿಲ್ಪಗಳಿವೆ .
೪)ಹನುಮಂತನ , ಗದಗ ಹತ್ತಿರದ ಒಂದು ಪ್ರತಿಮೆಯನ್ನೂ ನೋಡಬಹುದು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಶ್ರೀಕಾಂತರೆ,

ನಿಮ್ಮ ಮಾತು ಸರಿ. ’ದಖನ್” ಎಂದರೆ ದಕ್ಷಿಣ ಎಂದರ್ಥ. ಪುಣೆಯಲ್ಲಿ ಈ ಪದದ ಬಳಕೆ ಹೆಚ್ಚು. ಉದಾ : ’ಡೆಕ್ಕನ್ ಜಮ್ಖಾನ,” ’ಡೆಕ್ಕನ್ ಕ್ರಾನಿಕಲ್, ’ಇತ್ಯಾದಿ.

ನಾನು ಮೊದಲೇ, ವಿವರಿಸಿದಂತೆ, ವಿಟೆಟ್ , ಬೇಗ್ ರವರ ಶಿಷ್ಯ, ವಿಟೆಟ್ - ಒಬ್ಬ ಸಮರ್ಥ ವಾಸ್ತು-ಶಿಲ್ಪಿ !
ಆತ ಆಗಿನ, ಪ್ರಿನ್ಸ್ ಆಫ್ ವೇಲ್ಸ್ ನ್ನು ಕಟ್ಟುವ ಮೊದಲು, ಬಿಜಾಪುರ, ಗುಲ್ಬರ್ಗಗಳಿಗೆ ಬೇಟಿನೀಡಿ, ಅಲ್ಲಿನ "ಗೋಲ್ ಗುಂಬಜ್ " ನ್ನು ಅಭ್ಯಸಿಸಿದನಂತೆ. ಅದನ್ನೇ ಪ್ರಮುಖ ಪ್ರಕಾರವೆಂದು ಪರಿಗಣಿಸಿ, ಇಂಡೋ ಸೆರಿಸಿನಿಕ್, ಮತ್ತು ದ್ರಾವಿಡ ಶೈಲಿ, ಮತ್ತಿತರ ಶೈಲಿಗಳನ್ನೂ, ಗೊಥಿಕ್ ಶೈಲಿಯನ್ನೂ ಸಮಯೋಚಿತವಾಗಿ ಬಳಸಿಕೊಂಡು, ಈ ಭವ್ಯ ಕಟ್ಟಡವನ್ನು ಕಲ್ಲಿನಲ್ಲಿ ನಿರ್ಮಿಸಿದ್ದಾನೆ. ಆತನ ಇತರ ಕೃತಿಗಳು- ಗೇಟ್ ವೇ ಆಫ್ ಇಂಡಿಯ, ಟಾಟಾ ಸನ್ಸ್ ರವರ ’ಬಾಂಬೆ ಹೌಸ್’ , ಇನ್ಸ್ಟಿಟ್ಯೂಟ್ ಆಫ್ ಸೈಯ್ನ್ಸ್ ಇತ್ಯಾದಿ. ಇವರ ಗುರುಗಳು, ಮುಂಬೈ ನ ಜನರಲ್ ಪೋಸ್ಟ್ ಆಫೀಸ್ ನ ಕರ್ತೃಗಳು !

ಕಟ್ಟಡ ನೋಡಲು ಬಹಳ ಚೆನ್ನಾಗಿ ಕಾಣುತ್ತಿದೆ ಫೋಟೋದಲ್ಲಿ...

ವೆಂಕಟೇಶರೆ, ಇದಕ್ಕೆ ಮೊದಲು "ಪ್ರಿನ್ಸ್ ಆಫ್ ವೇಲ್ಸ್" ಸಂಗ್ರಹಾಲಯ ಎಂಬ ಹೆಸರು ಯಾಕೆ ಬಂತು? ಗೌರವಾರ್ಥ ಇಟ್ಟದ್ದೋ?
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]