" ಶ್ರೀಕೃಷ್ಣ ಬಟಾಟಾವಡ ಅಂಗಡಿ ", ಮುಂಬೈ, ದಾದರ್ ಪಶ್ಚಿಮ !

ಹೊಸವರ್ಷ ಶುರುವಾಯಿತು. ಬಟಾಟಾವಡ ತಿನ್ನುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೋದ ವರ್ಷ, ೭ ರೂಪಾಯಿ ಇದ್ದ ಈ ಆಲೂಗಡ್ಡೆ ವಡೆ, ಈಗ ೮ ರೂಪಾಯಿ ಆಗಿದೆ. ಒಂದು ಚಿಕ್ಕ ಆಲೂಗಡ್ಡೆ ವಡೆ, ಒಂದೆರಡು ಬೇಯಿಸಿದ ಹಸಿಮೆಣಸಿನಕಾಯಿಯನ್ನು ಕಾಗದ ತಟ್ಟೆಯಲ್ಲಿ ಅಂಗೈನಲ್ಲಿ ಇಟ್ಟುಕೊಂಡು , ಮುಂಗೈನಲ್ಲಿ ಮುಚ್ಚಿಕೊಂಡು ಸವಿಯುವರನ್ನು ನೋಡಿ, ನಮಗೆ ಆಶ್ಚರ್ಯವಾಗುತ್ತೆ. ಬಿಸಿ-ಬಿಸಿ ವಡೆ, ಈಗಿನ ಸ್ವಲ್ಪ ಥಂಡಿಹವದಲ್ಲಿ, ನಾಲ್ಗೆ, ಬಾಯಿ ಸುಟ್ಟಾಗ, ಬಹುಶಃ ಒಂದ್ತರ್ಹ ರುಚಿ ಬರ್ಬಹುದು ಅನ್ನಿಸತ್ತೆ.

ನೀವು ಒಂದ್ಸರ್ತಿ ತಿಂದು ನೋಡಿಪ !

-ನಾನು ರುಚಿನೋಡಿ ಹಾಗೆ ಒಂದು ಫೋಟೊ ಖೀಂಚ್ದೆ !

ಪ್ರತಿಕ್ರಿಯೆಗಳು

ಇಲ್ಲಿ ಬೋಂಡಕ್ಕೆ ವಡಾ ಅಂತಾರೆ !
ಇಡ್ಲಿಯ ಜತೆಗೆ ನೀವು ತಿನ್ನುವ ಉದ್ದಿನ ವಡಾಕ್ಕೆ - ಮೇಂದು ವಡಾ ಅಂತಾರೆ .
ಈ ಮೇಂದು ಅಂದ್ರೆ ಏನೋ ? ವೆಂಕಟೇಶರಿಗೆ ಗೊತ್ತಿರಬೈದು .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಮ್ಮಲ್ಲಿ ಮಾಡುವ ಬೋಂಡ, ಇಲ್ಲಿನ ಜನರಿಗೆ ಮೆದುವಡವಾಗಿದೆ. ಸರಿಯಾಗಿ ಹೇಳಿದಿರಿ.
ಮೇಂದು ಅಂತ ಅಂತಾರೆ. ಅದರ ಅರ್ಥ ಸರಿಯಾಗಿಯಾರಿಗು ಗೊತ್ತಿಲ್ಲ.

ಇನ್ನೊಂದು ಈ ವಡ ತಯಾರು ಮಾಡುವವರು, ನಮ್ಮವರೆ, ಉಡುಪಿಯವರು, ಕನ್ನಡದವರು ! ಇದಕ್ಕೆ ಬೇಯಿಸಿದ ಹಸುರುಮೇಣಸಿನಕಾಯಿಯನ್ನು ನಮ್ಮಲ್ಲಿ ಯಾರು ಉಪಯೊಗಿಸ್ತಾರೆ ?

ದಾವಣಗೆರೆಯಲ್ಲಿ ಮೆಣ್ಸಿನ್ ಕಾಯ್ ಬೊಂಡ ಮಾಡ್ತಾರೆ. ಬೊಂಬಾಟಾಗಿರುತ್ತೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಸಾರ್ ನಿಮ್ಮ ಎಲ್ಲ ಕಾರ್ಯಚರಣೆಗಳೂ ನನಗೆ ಅತ್ಯಂತ ಪ್ರಿಯವಾದವುಗಳು. ಒಂದು ಚಿಕ್ಕ ವಿಷಯ ನಿಮ್ಮನ್ನ ಕೇಳಬೇಕೂ ಅಂತ ಸುಮಾರು ದಿನಗಳಿಂದ ಹವಣಸುತ್ತಿದ್ದೆ. ೨೦೦೮ ರಲ್ಲಿ ಅದನ್ನ ಕೇಳದಿದ್ದರೆ ನನಗೆ ಸಮಾಧಾನವಿಲ್ಲ. ಅದಕ್ಕಾಗಿ.......

ಮೇಲಿನ ನಿಮ್ಮ ವಾಕ್ಯದಲ್ಲಿ, ಪುತ್ತೆನಗೆ ಎಂದರೆ---

ಇದರ ಬಗ್ಗೆ ಒಂದು ಭಾಷಣ ಬಿಗಿರಲ.

ನಮಸ್ಕಾರಗಳು. ತಪ್ಪಿದ್ದರೆ ಕ್ಷಮಿಸಿ.

ವೆಂ.

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ!

ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ!

ಕನ್ನಡದ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ! ಕನ್ನಡಂ ದೈವಮೈ!

ಕನ್ನಡದ ಶಬ್ದಮೆಮಗೋಂಕಾರಮೀಯೆನ್ನ

ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ-

ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳಗೆ?

-----ಇದು ಸಾಲೀ ರಾಮಚಂದ್ರರಾಯರ ಕವನ .
ಪುಲ್ಲೆನಗೆ , ಸಾಲೀ ರಾಮಚಂದ್ರರಾಯರು ಅನ್ನೋ ಶಬ್ದವನ್ನ ಗೂಗ್ಲನಲ್ಲಿ ಹುಡುಕಿ ... ಇನ್ನಷ್ಟು ವಿಷಯ ತಿಳಿದೀತು. (ನನಗೆ ಆ ತಾಣಗಳು ಸಿಗುವದಿಲ್ಲ :( )
ಅವರು ಕನ್ನಡದ ಒಬ್ಬ ಹಿರಿಯರು .

ಕನ್ನಡದ ನೆಲದ ಹುಲ್ಲು ನನಗೆ ಪವಿತ್ರ ತುಳಸಿ!

ಕನ್ನಡದ ನೆಲದ ನೀರಿನ ಹೊನಲು ನನಗೆ ದೇವನದಿ-ಗಂಗೆ!

ಕನ್ನಡದ ನೆಲದ ಕಲ್ಲು ನಮಗೆ ಶಾಲಗ್ರಾಮ ಶಿಲೆ! ಕನ್ನಡವೇ ದೈವ !

ಕನ್ನಡದ ಶಬ್ದವು ಓಕಾರ ,

ಕನ್ನಡದ ನುಡಿಯೇ ಅದ್ಭುತ ಗಾಯತ್ರ ಮಂತ್ರ-

ಕನ್ನಡದ ಸೇವೆಗಿಂತ ಈ ಜಗತ್ತಿನಲ್ಲಿ ಇನ್ನಾವದು ಹಿರಿಯದು ?

ಸಾರ್ , ಈ ಅರ್ಥ ನಿಮಗೆ ಕೊಟ್ಟದ್ದಲ್ಲ - ಕಾರಣಾಂತರದಿಂದ ಮೇಲಿನ ಪದ್ಯ ತಿಳಿದುಕೊಳ್ಳಲಾಗದವರಿಗಾಗಿ ಬರೆದದ್ದು .

ಅಂದ ಹಾಗೆ ’ಪ್ರಯತ್ನಿಸು’ ಶಬ್ದಕ್ಕೆ ಬಳಕೆಯಲ್ಲಿರೋ ಕನ್ನಡ ಶಬ್ದ ಏನೂ ಅಂತ ಎಷ್ಟೋ ದಿನದಿಂದ ವಿಚಾರ ಮಾಡ್ತಾ ಇದ್ದೆ , ’ಹವಣಿಸು’ ನೆನಪಿಸಿದ್ದೀರಿ , ಧನ್ಯವಾದಗಳು .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಸಾಲಿ ರಾಮಚಂದ್ರರಾಯರು, ನಿಜಕ್ಕೂ ಅಭಿನಂದನಾರ್ಹರು. ಅವರ ಕನ್ನಡ ಪ್ರೇಮ, ನಮ್ಮೆಲರಿಗೂ ಹೆಮ್ಮೆತರುವಂತಹದು. ಮಾದರಿಯಾದ ಅವರ ವಾಕ್ಯಗಳು , ಬಹುಶಃ ನನ್ನ ಮುಂದಿನ ಜೀವನದುದ್ದಕ್ಕೂ ದಾರಿದೀಪವಾಗುವಷ್ಟು ನನಗೆ ಮೆಚ್ಚುಗೆಯಾಗಿವೆ.
ಧನ್ಯವಾದಗಳು.

ಸಾಲಿ ರಾಮಚಂದ್ರರಾಯರು, ನಿಜಕ್ಕೂ ಅಭಿನಂದನಾರ್ಹರು. ಅವರ ಕನ್ನಡ ಪ್ರೇಮ, ನಮ್ಮೆಲರಿಗೂ ಹೆಮ್ಮೆತರುವಂತಹದು. ಮಾದರಿಯಾದ ಅವರ ವಾಕ್ಯಗಳು , ಬಹುಶಃ ನನ್ನ ಮುಂದಿನ ಜೀವನದುದ್ದಕ್ಕೂ ದಾರಿದೀಪವಾಗುವಷ್ಟು ನನಗೆ ಮೆಚ್ಚುಗೆಯಾಗಿವೆ.
ಧನ್ಯವಾದಗಳು.

ಸಾಲಿ ರಾಮಚಂದ್ರರಾಯರು, ನಿಜಕ್ಕೂ ಅಭಿನಂದನಾರ್ಹರು. ಅವರ ಕನ್ನಡ ಪ್ರೇಮ, ನಮ್ಮೆಲರಿಗೂ ಹೆಮ್ಮೆತರುವಂತಹದು. ಮಾದರಿಯಾದ ಅವರ ವಾಕ್ಯಗಳು , ಬಹುಶಃ ನನ್ನ ಮುಂದಿನ ಜೀವನದುದ್ದಕ್ಕೂ ದಾರಿದೀಪವಾಗುವಷ್ಟು ನನಗೆ ಮೆಚ್ಚುಗೆಯಾಗಿವೆ.
ಧನ್ಯವಾದಗಳು.

ಅದು 'ಮೆದು ವಡೆ' ಯ ತದ್ಭವ. ಮೆದು = ಮೆತ್ತಗೆ = soft

ತಮಿಳುನಾಡಿನಲ್ಲೂ ಕಡಲೆ ಬೇಳೆಯಲ್ಲಿ (ನುಣ್ಣಗೇ ತಿರುವದೇ) ಮಾಡಿದ ವಡೆ (=ಆಂಬಡೆ) ಗೆ ವಡೆ ಎಂದೂ, ಉದ್ದಿನ ಬೇಳೆಯಲ್ಲಿ ಮಾಡುವ ವಡೆಗೆ ಮೆದುವಡೆ ಎಂದೂ ಕರೆಯುವುದಿದೆ.
-ಹಂಸಾನಂದಿ