ಅಯ್ಯೊ ಇದೇನಾ ಪೋಸ್ಟ್ ಆಫೀಸು ? !

ಬೊಂಬಾಯ್.. ಅಲ್ಲ ಅಲ್ಲ ಮುಂಬೈ ನಂಥ ಭಾರಿ ನಗರದ್ ಪೋಸ್ಟ್ ಆಫೀಸ್ (ಟೆಲಿಗ್ರಾಫ್ ಆಫೀಸ್ ) ಹೀಗಿರತ್ತಾ ? ಆಶ್ಚರ್ಯ ! ಹೌದು. ಮುಂಬೈ ನ ಘಾಟ್ಕೊಪರ್ [ಪ] ದಲ್ಲಿರುವ ಪೋಸ್ಟ್ ಆಫೀಸ್ ಇರೋದೇ ಹೀಗೆ. ಇದು ಇವತ್ತಿಂದಲ್ಲ. ಹಲವಾರು ದಶಕಗಳಿಂದ ಇದು ಇರೋದೇ ಹೀಗೆ. ಜನಕೂಡ ಇದನ್ನ ಗಮನಕ್ಕೆ ತೊಗೊಳಲ್ಲ. ಎಲ್ಲರ ಕೈಲೂ ಮೊಬೈಲ್ ಇತ್ತು. ಅಷ್ಟಕ್ಕೂ ಟೆಲೆಗ್ರಾಂ ಮಾಡೊರ್ಯಾರೀಗ ! ಇನ್ನೂ ಇಲ್ಲಿರುವ ರೈಲ್ವೆ  ಸ್ಟೇಶನ್ ಗಳ್ನ ನೋಡ್ಬೇಕ್ ನೀವು. ಒಂದಸ್ತಿನ ಕಟ್ಟಡ. ಸುಣ್ಣ ಬಣ್ಣ ಪ್ರತಿವರ್ಷವು ಮಾಡಿದರು, ಮಾಡಿದ ಒಂದು ತಿಂಗಳಿನಲ್ಲೇ ಮಾಯವಾಗುವಸ್ಟು ಕಳಪೆ ಪದಾರ್ಥಗಳನ್ನು ಬಳಸಿದರೆ ಹೇಗಿರತ್ತೆ ಬಣ್ಣ  ? 

ಭಾರತದಲ್ಲಿ ಮಾನೋಪಲಿಯಲ್ಲಿರುವ ಅಂಚೆಸೇವೆನ, ಇಷ್ಟು ಹೊಲಸಾಗಿ ನೋಡ್ಕೋತಿದಾರಲ್ಲ ಅದಕ್ಕೆ ಒಂದು ಪ್ರಶಸ್ತಿ ಯೇಕೆಕೊಟ್ಟಿಲ್ಲಾ ಅನ್ನಿಸ್ತಿದೆ. ಕೇಳಿದ್ರೆ, ಅವ್ರು ಕೊಡೊ ಉತ್ತ್ರ ಇದು. ನೋಡಿ ಡಿಪಾರ್ಟ್ಮೆಂಟ್ ಹೆಚ್ಚಿಗೆ ಬಾಡ್ಗೆ ಕೊಡಕ್ ರೆಡಿ ಇಲ್ಲ. ಜಾಗ ಒಳ್ಳೆ ಮುಖ್ಯಪ್ರದೇಶದಲ್ಲಿರಬೇಕು. ಬಾಡಿಗೆ, ೨,೦೦೦ ರೂಗಳಿಗಿಂತ ಕ್ಕಿಂತ ಹೆಚ್ಚಾಗಿರಬಾರದು. ಇತ್ಯಾದಿ ಇತ್ಯಾದಿ. ಇದಕ್ಕೆ ಬೆಲೆ ಇದೆಯೇ ? ೧೫೦ ವರ್ಷಏನೋ ಕಳೀತು. ಇನ್ನ ೨೦೦ ವರ್ಷ ಆದ್ರು ಇದೇ ರೀತಿ ನಡ್ಕೊಂಡ್ ಹೋಗುತ್ತೆ. ಕೇಳೊರ್ ಯಾರು ? ಸರ್ಕಾರಿ ಕೆಲಸ ! ಹೀಗೆ,

ಇಲ್ಲಿನ " ಬರ್ವೆ ನಗರ " ದಲ್ಲಿ ಒಮ್ಮೆ ನಾನು ಯಾತಕ್ಕೊ ಹೋದಾಗ, ಅಲ್ಲಿನ ಅವಸ್ಥೆ ನೋಡಿ ಕಂಪ್ಲೆಂಟ್ ಬುಕ್ ನಲ್ಲಿ ಬರೆದಿದ್ದೆ. ’ ಟೈಮ್ಸ್ ಆಫ್ ಇಂಡಿಯ” ಪತ್ರಿಕೆಯಲ್ಲೂ ’ ಪಿಲ್ಲರ್ ಟು ಪೋಸ್ಟ್ ” ಕಾಲಂ ನಲ್ಲಿ ಬರೆದೆ. ಹೇಗೋ ನನ್ನ ಅದೃಷ್ಟ ಚೆನ್ನಾಗಿತ್ತು. ಪೋಸ್ಟ್ ಆಫೀಸ್ ಕಟ್ಟಡನ ಬದಲಾಯಿಸಿದ್ದಾಗಿದೆ. ನಿಮ್ಮಿಂದ ಉಪಕಾರವಾಯಿತು. ’ ಥ್ಯಾಂಕ್ಸ್”, ಎಂದು ಪೋಸ್ಟ್ ಮಾಸ್ಟರ್ ಹೇಳಿಫೋನ್ ಮಾಡಿದರು. 

ಈತರಹದ ಕಂಪ್ಲೆಂಟ್ ನನಗಿಂತ ಮೊದಲೇ ಹಲವಾರು ಜನ ಮಾಡಿದ್ರು. ಆದ್ರೆ. ನಾನು ದೂರು ಕೊಟ್ಟು ಬರೆದ ಮೇಲೇ ಅದೇನು ನನ್ನ ಅದೃ ಶ್ತವೋ ಈ ಬಳಲಾವಣೆಯಾಗಿ ಅಂಚೆ ಪೇದೆಗಳು ನಿರಾಳವಾಗಿ ನಿಟ್ಟುಸಿರು ಬಿಡುವಂತಾಯಿತು. ನನಗು ಸಂತೋಷವಾಗಿದೆ.