ಬೀಚಲ್ಲಿ ನೋಡಿದ ಸೂರ್ಯಾಸ್ತ

ನಾನು ನನ್ನ ಸ್ನೇಹಿತರೊಡನೆ ಒಂದು ಸಾರಿ ಕೇರಳ ಪ್ರವಾಸಕ್ಕೆ ಹೋಗಿದ್ದೆ, ಕೊನೆಯ ದಿನ ನಾವು ಬೀಚಲ್ಲಿ ಸ್ಪೆಂಡ್ ಮಾಡೋದು ಅಂತ ತಿರ್ಮಾನಿಸಿದ್ದೆವು ಅದರಂತೆ ಕೊಚಿನ ಗೆ ಸಮೀಪ ಇರುವ 'ಚರಾಯ' ಎಂಬ ಒಂದು ಸುಂದರವಾದ ಬೀಚ ಗೆ ಹೋದ್ವಿ ಅಲ್ಲಿ ಪೂರ್ತಿ ದಿನ ಕಳೆಯೋ ಮನಸಾಯಿತು, ಭಾರಿ ಮಸ್ತ ಅದ ಆ ಬೀಚ, ಸೊ ನಾವೆಲ್ಲ ಸುಮಾರು ೧೧ ಘಂಟೆಗೆ ನೀರಲ್ಲಿ ಇಳಿದೆವು. ಅಲ್ಲಿ ಭಾಳ ಹೊತ್ತ ನೀರಾಗ ಇದ್ವಿ, ನೀರ ಬಿಟ್ಟ ಬರಾಕ ಮನಸ ಬರೋಲ್ದಾಗಿತ್ತ. ಸೂರ್ಯಾಸ್ತದ ಟೈಮ್ಗೆ ನಾವೆಲ್ಲ ನೀರಿಂದ ಹೊರಗ ಬಂದು ಕಾಯ್ತಾ ಕುಂತಿವಿ, ಸೂರ್ಯಾಸ್ತ ನೋಡಾಕ. ಸೂರ್ಯ ತನ್ನ ಪ್ರಖರ ಅರಿಸಿನ ಬಣ್ಣದಿಂದ ಕುಂಕುಮ (ಕೆಂಪು) ಬಣ್ಣಕ್ಕೆ ತಿರಗುವಷ್ಟರಲ್ಲಿ ಸೂರ್ಯ ಮತ್ತು ಸಮುದ್ರದ ನಡುವೆ ಒಂದು ಮೋಡ ಮಧ್ಯ ಬಂತ (ಶಿವ ಪೂಜೆ ಒಳಗ ಕಡ್ಡಿ [ಕರಡಿ] ಬರು ಹಾಂಗ) , ನಾವೆಲ್ಲ್ಲ ಇನ್ನೇನು ನಮಗ ಸೂರ್ಯಾಸ್ತ ಸಿಗಾಂಗಿಲ್ಲ ಬಿಡ ಅಂತ ವಿಚಾರ ಮಾಡ್ತಾ ಇದ್ದಾಗ, ಮೋಡ ಸ್ವಲ್ಪ ಸಮುದ್ರದಡಿಯಿಂದ ಮೇಲೆ ಸರಿಯಿತು, ನಮ್ಗೆ ಅದೇನೋ ಕಳೆದು ಹೋದ ವಸ್ತು ಸಿಕ್ಕಷ್ಟು ಖುಷಿ, ನಾವೆಲ್ಲ ಚಿಕ್ಕ ಮಕ್ಕಳ ಹಾಗೆ ಸೂರ್ಯಸ್ತವನ್ನು ಎಂಜೋಯ ಮಾಡಿದ್ವಿ (ಅಲ್ಲಿ ತುಂಬ ಚಿಕ್ಕ ಮಕ್ಕಳು ಬೇರೆ ಬಂದಿದ್ರು ಅವರೊಂದಿಗೆ ಆಟ ಕೂಡ ಆಡಿದ್ವಿ :) ).

ಮೋಡ ಸರಿದ ಮೇಲೆ ಕ್ಲಿಕ್ಕಿಸಿದ ಫೋಟೋ ನಿಮಗಾಗಿ ಇಲ್ಲಿ ಹಾಕಿದ್ದೇನೆ.

ಪ್ರತಿಕ್ರಿಯೆಗಳು