ತಾಯ್ತನದ ಹಿರಿಮೆ !

ನಾವು ಪರಿವಾರ ಸಮೇತ ೧೭ ದಿನಗಳ ಮೈಸೂರು ಯಾತ್ರೆಗೆ ಹೋಗಿದ್ದೆವು. ಆಗ ನಮ್ಮ ಮನೆಯ ಬಾಲ್ಕನಿಯಲ್ಲಿ ಒಮ್ಮಿದೊಂಮ್ಮೆ, ಒಂದು ಪಾರಿವಳ ಮೊಟ್ಟೆಹಾಕಿ, ಕುಳಿತು ಕಾವುಕೊಡುತ್ತಿರುವ ದೃಶ್ಯವನ್ನು ನಮ್ಮ ಮನೆಯ ಕೆಲಸದ ಬಾಯಿ ಕಂಡಳು. ಸಹಜವಾಗಿ ಅವಳೂ ಒಬ್ಬ ಸ್ತ್ರೀ ಹಾಗೂ ಮಕ್ಕಳೊಂದಿಗಳು. ಕರುಣೆಯಿಂದ ಮೊಟ್ಟೆಗಳಿಗೆ ಅಪಾಯಬರದಂತೆ ನಡೆದುಕೊಂಡಳು. ನಾವು ವಾಪಸ್ ಬಂದಾಗ, ಪುಟ್ಟ ಎರಡು ಪಾರಿವಾಳದ ಮರಿ-ಹಕ್ಕಿಗಳು ತಮ್ಮ ತಾಯಿಯಬಾಯಿನಿಂದ ಆಹಾರ ಕಸಿದುಕೊಳ್ಳುವಷ್ಟು ದೊಡ್ಡವಾಗಿ ಬೆಳೆದಿದ್ದವು. ಆದರೆ, ತಾಯಿ ಹಕ್ಕಿ, ಸುಮಾರು ಒಂದುವಾರದಿಂದ ಕದಲದೆ ಅಲ್ಲೆ ಕುಳಿತು ಮೊಟ್ಟೆ ನಂತರ ಮರಿಗಳಿಗೆ ಕಾವು ಕೊಡುತ್ತಿತ್ತು. ಊಟ, ತಿಂಡಿ, ನೀರು, ನಿದ್ದೆಗಳನ್ನೂ ಲೆಕ್ಕಿಸದೆ, ಮಕ್ಕಳ ಆಗಮನದ ಸವಿ ನೆನೆಪಿನಲ್ಲಿ, ಅವುಗಳ ಅಗತ್ಯಗಳನ್ನು ಪೂರೈಸುವುದರಲ್ಲೇ ಧನ್ಯತೆಯನ್ನು ಕಂಡೆತೇನೋ !

ನನಗೆ ಆಗ ಮಾತೃತ್ವದ , ಸವಿ ನೆನಪಾಯಿತು. ( ಎಲ್ಲರ ತಾಯಿಂದಿರಂತೆ, ನಮ್ಮತಾಯಿಯವರೂ ಮಾತೃಪ್ರೇಮಕ್ಕೆ ಒಂದು ಪ್ರಚಂಡ ಉದಾಹರಣೆಯಾಗಿದ್ದರು. ಸರಿ. ಆದರೆ, ಈ ಪಕ್ಷಿಗಳಿಗೆ ತಾಯ್ತನದ ಪಾಠವನ್ನು ಬೋಧಿಸಿದವರಾರು ? !)

-ಫೋಟೋ ನಾನೇತೆಗೆದದ್ದು.