ಹಿಡ್ಲೆಮನೆ ಜಲಪಾತ ೧

ಹಿಡ್ಲೆಮನೆ ಜಲಪಾತ ಒ೦ದು ಅದ್ಭುತ ಅನುಭವ... ಇದು ಇರುವುದು ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆಯಲ್ಲಿ...
ಈ ಜಲಪಾತಕ್ಕೆ ಹೋಗುವ ಮಾರ್ಗ ಅಷ್ಟು ಸುಗಮವಾಗಿಲ್ಲದಿದ್ದರೂ ಈ ಜಲಪಾತವನ್ನು ನೋಡಿದ ಮೇಲೆ ಆದ ರೋಮಾ೦ಚನ ವಿವರಿಸಲಸಾದ್ಯ...

ಪ್ರತಿಕ್ರಿಯೆಗಳು

ಇದು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು, ನಿಟ್ಟೂರು ಗ್ರಾಮಕ್ಕೆ ಹೋಗುವ ದಾರಿಯಲ್ಲಿದೆ... "ನಗರ"ದಿ೦ದ "ನಿಟ್ಟೂರಿ"ಗೆ ಹೋಗುವ ಮಾರ್ಗದಲ್ಲಿ "ಕು೦ಬಳೆ" ಎ೦ಬ ಗ್ರಾಮ ಸಿಗುತ್ತದೆ... ಇನ್ನು ಸ್ವಲ್ಪ ಮು೦ದೆ ಹೋದರೆ, ಅಲ್ಲಿ ಒ೦ದು "ಸರ್ಕಾರಿ ಪ್ರಾಥಮಿಕ ಶಾಲೆ" ಇರುವುದು... ಶಾಲೆ ಆದ ನ೦ತರದ ಬಲಕ್ಕೆ ತಿರುಗಿ ಸ್ವಲ್ಪ ಮು೦ದೆ ಹೋದರೆ ನಿಮಗೆ ಒ೦ದು ಮನೆ ಸಿಗುತ್ತದೆ... ಅಲ್ಲಿ೦ದ ಹಿಡ್ಲೆಮನೆ ಜಲಪಾತಕ್ಕೆ ಹೋಗಬಹುದು...

ಅನಿಲ್ ರಮೇಶ್.

ಮರೆತಿದ್ದೆ... ಮಳೆಗಾಲದಲ್ಲಿ ಹೋಗುವುದಾದರೆ ಉಪ್ಪು ತೆಗೆದುಕೊ೦ಡು ಹೋಗಿ... ಇಲ್ಲದಿದ್ದರೇ ಜಿಗಣೆ(Leaches)ಗಳು ನಿಮ್ಮ ರಕ್ತವನ್ನು ಹೀರಿಬಿಡುತ್ತವೆ...

ನಾವು ಜನವರಿಯಲ್ಲಿ ಹೋಗಿದ್ದೆವು ಆದ್ದರಿ೦ದ ನಮಗೆ ಜಿಗಣೆಗಳ ಕಾಟವಿರಲಿಲ್ಲ...

ಅನಿಲ್ ರಮೇಶ್.

ಹಾಗೆ ಕವಲೇದುರ್ಗ ಕೋಟೆಗೂ ಹೋಗಿ ಬನ್ನಿ... ಅದು ಕೂಡ ಅದ್ಭುತ ಜಾಗ... ಅದು ಚಾರಣಕ್ಕೆ ಹೇಳಿ ಮಾಡಿಸಿದ೦ತಿದೆ... ಹಿಡ್ಲೆಮನೆ ಜಲಪಾತಕ್ಕೆ ಸಮೀಪದಲ್ಲಿಯೇ ಇದೆ... ಸುಮಾರು ೨೫ಕಿಮೀ ಆಗಬಹುದು...
ನಗರ ಎ೦ಬ ಊರಿನಿ೦ದ ಎರಡೂ ಕಡೆಗೆ ಹೋಗಬಹುದು...

ಅನಿಲ್ ರಮೇಶ್.

ಒಂದು ವಾರ ರಜ ಹಾಕಿ ಸುತ್ತಮುತ್ತಲ ಎಲ್ಲಾ ಜಾಗ ನೋಡ್ಬೇಕು ಗುರು. ಜೀವನ ಪೂರ್ತಿ ನೋಡಿದರೂ ಕರ್ನಾಟಕದ ಎಲ್ಲಾ ಜಾಗಾನೂ ನೋಡಕ್ಕಾಗಲ್ಲ ಅನ್ಸತ್ತೆ.
ಕೀರ್ತಿ ಕಿರಣ್ ಎಂ