'ನ್ಯೂಪೋರ್ಟ್' ಕಡಲತೀರಪ್ರದೇಶ, ಕ್ಯಾಲಿಫೋರ್ನಿಯರಾಜ್ಯದ, ಕಾಸ್ಟಾ-ಮೆಸಾದಿಂದ, ಕೇವಲ ೧೦ ಮೈಲಿದೂರದಲ್ಲಿದೆ.

ನ್ಯೂಪೋರ್ಟ್ ಬೀಚ್, ಕ್ಯಾಲಿಫೋರ್ನಿಯ !

ಇದು ಆರೇಂಜ್ ಕೌಂಟಿಯೆಂದೇ ಪ್ರಸಿದ್ಧಿಯಾದ, ಕ್ಯಾಲಿಫೋರ್ನಿಯ ರಾಜ್ಯದಲ್ಲಿ, ಸ್ಯಾಂಟಾ ಅನ್ನವೆಂಬ ಪ್ರದೇಶದಭಾಗವಾಗಿದೆ. (ಸ್ಯಾಂಟಾ ಅನ್ನದಿಂದ ನ್ಯೂಪೋರ್ಟ್ ಬೀಚಿಗೆ, ೧೦ ಮೈಲಿ ದೂರ ಅಷ್ಟೆ) ಸಾಂಟ ಅನ್ನಾ ನದಿ, ನ್ಯೂಪೋರ್ಟ್ ಗೆ ಸೇರಿಕೊಳ್ಳುತ್ತದೆ. ೧೯೦೬ ರಲ್ಲಿ ಇದು ಒಂದು ನಿರ್ಜನಪ್ರದೇಶ. ಆಗ, ಅಲ್ಲಿ ಕೇವಲ ೨೦೬ ಮಂದಿಜನ ವಾಸವಾಗಿದ್ದರು. ೧೮೭೦ ರಲ್ಲಿ ಒಬ್ಬ ಹಡಗುವ್ಯಾಪಾರಿ ತನ್ನ ಮೊಟ್ಟಮೊದಲ ಯಾನವನ್ನು, ತನ್ನ ’ದ ವ್ಯಾಕ್ವೆರೋ’ ಯೆಂಬ ವ್ಯಾಪಾರ ನೌಕೆಯಲ್ಲಿ ಶುರುಮಾಡಿದನಂತೆ. ಆ ಸ್ಥಳಕ್ಕೆ ಆತ, ’ನ್ಯೂಪೋರ್ಟ್’ ಯೆಂದು ನಾಮಕರಣಮಾಡಿದನಂತೆ.

೧೯೦೫ ರಲ್ಲಿ, ನಗರ ಚೆನ್ನಾಗಿಬೆಳೆದು ಹೆಸರುವಾಸಿಯಾಗಿತ್ತು. ಅದೂಅಲ್ಲದೇ, ’ಪೆಸಿಫಿಕ್ ರೈಲ್ ರೋಡ್’ ನ ಕಾಮಗಾರಿ ಶುರುವಾಗಿತ್ತು. ದಕ್ಷಿಣದ ಟರ್ಮಿನಸ್ ಆಗಿ, ’ನ್ಯೂಪೋರ್ಟ್’ ಬಂದರನ್ನು ಬಡಾವಮಾಡಲಾಯಿತು. ಮುಂದೆ ಕ್ಯಾಲಿಫೋರ್ನಿಯನಗರದ ಡೌನ್ ಟೌನ್ ಗೆ, ಸಂಪರ್ಕಕೊಡಲಾಯಿತು.”ನ್ಯೂಪೋರ್ಟ್ ’ಯೆಂಬ ನಾಮಕರಣವೂ ಆಯಿತು. ಆಗ ಅಲ್ಲಿ ವಾಸಿಸುತ್ತಿದವರ ಸಂಖ್ಯೆ, ಕೇವಲ ೨೦೬ ಮಂದಿ ಮಾತ್ರ ! ಈಗ , ೨೦೦೭ ರಲ್ಲಿ ೮೪,೨೧೮ ಜನವಾಸಿಸುತ್ತಿದ್ದಾರೆ.
ಸುಮಾರು ಸಮುದ್ರಮಟ್ಟಕ್ಕಿಂತ ೧, ೧೬೧ ಅಡಿಎತ್ತರದಲ್ಲಿರುವ, ”ನ್ಯೂಪೋರ್ಟ್ ಬೀಚ್, ’ಪಶ್ಚಿಮಕ್ಕೆ ’ಹಂಟಿಂಗ್ಟನ್ ಬೀಚ್ ನ, ಉತ್ತರಕ್ಕೆ ಕೋಸ್ಟಾ ಮೆಸಾ ನಗರ, ಹಾಗೂ ಜಾನ್ ವ್ಹೇನ್ ವಿಮಾನ ನಿಲ್ದಾಣಗಳಿವೆ. ಇದಕ್ಕೆ ಕರೋನ ಡೆಲ್ಮಾರ್, ಕೂಡ ಸೇರಿಕೊಂಡಿದೆ. ನ್ಯೂಪೋರ್ಟ್ ತೀರಕ್ಕೆ ’ಬಲ್ಬೋವ ದ್ವೀಪ ,’ಅಂಟಿಕೊಂಡಿದೆ. ಸ್ಯಾನ್ ಜ್ಯಾಕ್ವಿನ್ ಬೆಟ್ಟಗಳೂ ಸೇರಿವೆ.

-ಕೃಪೆ : ವಿಕಿಪೀಡಿಯ.