ಮಲೆನಾಡಿನ ಜಾನುವಾರುಗಳ ಬಿದಿರಿನ ಘಂಟೆ

ಇತ್ತೀಚೆಗೆ ನಾನು ಮಲೆನಾಡಿನಲ್ಲಿ ಪ್ರವಾಸ ಕೈಗೊಂಡಿದ್ದೆ. ‘ಉತ್ತರ ಕನ್ನಡ ಜಿಲ್ಲೆಯ ಮನೆಮದ್ದು ಹಾಗು ನಾಟಿ ವೈದ್ಯ ಪರಂಪರೆ’ (ಹಳಿಯಾಳ, ದಾಂಡೇಲಿ ಹಾಗು ಅಂಬಿಕಾನಗರ) ಕೃಷಿ ಮಾಧ್ಯಮ ಕೇಂದ್ರದ ಫೆಲೋಶಿಪ್ ಅಧ್ಯಯನಕ್ಕಾಗಿ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ನಮ್ಮ ನಗರ ಬದುಕಿನ ಎಳ್ಳಷ್ಟು ಸೌಕರ್ಯಗಳಿಲ್ಲದ ಹತ್ತಾರು ಹಳ್ಳಿಗಳಿಗೆ ಭೇಟಿ ನೀಡುವ ಸುಯೋಗ ಒದಗಿಬಂತು. ಅಲ್ಲಿನ ಜನ ಅಲ್ಪ ತೃಪ್ತರು. ಲಭ್ಯ ಸಂಪನ್ಮೂಲಗಳನ್ನೇ ವ್ಯಸ್ಥಿತವಾಗಿ ಬಳಸಿಕೊಳ್ಳುವ ಕಲೆಗಳನ್ನು ಕರಗತ ಮಾಡಿಕೊಂಡವರು. ಇಲ್ಲಿ ನೋಡಿ. ಅವರು ಸಾಕಿದ್ದ ಎಮ್ಮೆಯ ಕೊರಳಿನಲ್ಲಿ ಬಿದಿರು ಹಾಗು ಹೊಸೆದ ಹಗ್ಗದಿಂದ ತಯಾರಿಸಲಾದ ದೇಸಿ ಘಂಟೆ. ನಮ್ಮ ಕಬ್ಬಿಣದ ಅಥವಾ ತಗಡಿನ ಘಂಟೆಯಷ್ಟೇ ಸದ್ದು ಮಾಡುವ ಇದು, ಅದಕ್ಕಿಂತಲೂ ಕೊಂಚ ಇಂಪು ಎನ್ನಲು ಅಡ್ಡಿಇಲ್ಲ. ಉಡಾಳ ಮರಿಗಳ ಕೊರಳಲ್ಲಿ ಇದು ‘ಕಂಪಲ್ಸರಿ’!- ಚಿತ್ರ: ಹರ್ಷವರ್ಧನ ಶೀಲವಂತ.