ಕನ್ನಡ - ಚಿತ್ರಗಳು

ಕನ್ನಡದ ಅಂಕಿಗಳನ್ನೇ ಬಳಸಿದ ಕನ್ನಡದ ಮೊದಲ ಪತ್ರಿಕೆ "ಮಂಗಳೂರು ಸಮಾಚಾರ"

"ಮಂಗಳೂರು ಸಮಾಚಾರ" ಪತ್ರಿಕೆ ಕನ್ನಡ ಅಂಕಿಗಳನ್ನು ಬಳಸಿದ ಮೊದಲ ಪತ್ರಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಅಂಕಿಗಳ ಬಳಕೆ ತೀರಾ ಕಡಿಮೆಯಾಗಿದ್ದು ಆಂಗ್ಲ ಅಂಕಿಗಳೇ ಹೆಚ್ಚಾಗಿ ಬಳಸಲ್ಪಡುತ್ತಿವೆ. ಕೊನೆ ಪಕ್ಷ ಕನ್ನಡದಲ್ಲಿ ವ್ಯವಹಾರ ನಡೆಸುವಾಗಲಾದರೂ ಕನ್ನಡ ಅಂಕಿಗಳನ್ನು ಬಳಸಬೇಕು.

ಜಯನಗರದ ಜಯಸಿದ್ದ

ಬನ್ನೇರುಘಟ್ಟ ರಸ್ತೆಯಲ್ಲಿರುವ ಗ್ರಾನೈಟ್ ಅಂಗಡಿ ಬಳಿ ಕಂಡಿದ್ದು.
ಜಯನಗರದ ಜಯಸಿದ್ದ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
http://somari-katte.blogspot.com

ಆಟೋ ಅಣಿಮುತ್ತುಗಳು - ಹ್ಯಾಟ್ಸ್ ಆಫ್ ಗುರೂ

ತುಂಬಾ ನಿಜ ಅಲ್ವಾ ಈತ ಹೇಳಿರೋದು ?
ಇಅವತ್ತು ಬೆಳಿಗ್ಗೆ ಆಫೀಸಿಗೆ ಬರಬೇಕಾದರೆ, M.G ರೋಡಿನಲ್ಲಿ ಕಂಡಿದ್ದು
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
http://somari-katte.blogspot.com

ಕನ್ನಡದ ಅಂಕಿಗಳು ಹೇಗೆ ಬಂತು...

ಸೊನ್ನೆಯನ್ನು('೦') ಒಡೆದು ಎರಡು ಮಾಡಿ ಅದನ್ನು ಬೇರೆ ಬೇರೆ ರೀತಿ ಜೋಡಿಸಿ ೧,೨,೩,೪,೫,೬,೭,೮,೯ ಉಂಟು ಮಾಡಲಾಗಿದೆ.

ಹೆಚ್ಚಿನ ತಿಳುವಳಿಕೆಗೆ ಕುಮುದೇಂದುವಿನ 'ಸಿರಿಬೂವಲಯ' ಓದಿ

 

ಬಾದಾಮಿಯಲ್ಲಿನ ಭಿತ್ತಿಚಿತ್ರ (mural)

ಈ ಚಿತ್ರ ಬಾದಾಮಿಯ ಗುಹೆಯೊಂದರಲ್ಲಿನ ಗೋಡೆಯೊಂದರ ಮೇಲೆ ಕಾಣಬರುತ್ತದೆ.

ಚಿತ್ರ ಕೃಪೆ: ಹಿಂದೂ ಪತ್ರಿಕೆಯೊಂದರ ಲೇಖನ - ಬಿನಯ ಕೆ. ಬೆಹಲ್ ಅವರು ತೆಗೆದಿರುವ ಛಾಯಾಚಿತ್ರ

http://www.hinduonnet.com/fline/fl2121/stories/20041022000406400.htm

ಅವಸರದಲ್ಲಿ ಆದ ಅವಾಂತರ

ಜೋಗ - ಭಟ್ಕಳ ದಾರಿಯಲ್ಲಿ ಕೋಗಾರು ನಂತರ ಚೆನ್ನೆಕಲ್ ದಾಟಿದ ಬಳಿಕ ಈ ಸುರಕ್ಷಾ ಸೂಚಿ ಸಿಗುತ್ತದೆ. 'ಅವಸರವೇ ಅಪಘಾತಕ್ಕೆ ಕಾರಣ' ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಸಿಗಲಾರದು.

ಗುಳೇದಗುಡ್ಡ ಆಗಬೇಕಿತ್ತು...ಆದರೆ....

ಉಡುಪಿ ಬಸ್ಸು ನಿಲ್ದಾಣದಲ್ಲಿ. ಉತ್ತರ ಕರ್ನಾಟಕದ ಬಗ್ಗೆ ಇರುವ ನಿರ್ಲಕ್ಷ್ಯಕ್ಕೆ ಮತ್ತೊಂದು ಉದಾಹರಣೆ.

ಭಾರತೀಯ ಜೀವವಿಮಾ ನಿಗಮದವರಿಗೆ ಕನ್ನಡದ ಬಗ್ಗೆ ಗೌರವವಿಲ್ಲ !!

ಈಗ ತಾನೆ ನನ್ನ ವಿಮೆಯ ಪ್ರೀಮಿಯಮ್ ನೋಟೀಸ್ ಬಂತು. ಅದರಲ್ಲಿ ಕಣ್ಣಾಡಿಸಿದಾಗ ಹೇರಳ ತಪ್ಪುಗಳ ಕಂಡವು. ಒಂದು ಜವಾಬ್ದಾರಿಯುತ ಸಂಸ್ಥೆಯಿಂದ ಒಂದು ಅಧಿಕೃತ ಪತ್ರದಲ್ಲಿ ಇಷ್ಟೊಂದು ತಪ್ಪುಗಳೇ!!!!   ಇದೇನು ಕನ್ನಡದ ಬಗೆಗಿನ ಅಸಡ್ಡೆಯೆ??

'ದಾವಣಗೆರೆ' ಸರೀನಾ? ಅಥವಾ.....

ನನಗೆ ತಿಳಿದಿರುವ ಪ್ರಕಾರ 'ದಾವಣಗೆರೆ' ಸರಿ. ಕೆಲವೊಂದು ಕಡೆ 'ದಾವಣಗೇರಿ' ಎಂದು ಬರೆಯುತ್ತಾರೆ, ಅದೂ ಸರಿಯಿರಬಹುದು.

ಆಂಗ್ಲ ಪದ 'ಬೀಚ್'' ಎಂಬುದನ್ನು ಕನ್ನಡದಲ್ಲಿ ಈ ರೀತಿಯಲ್ಲೂ ಬರೆಯುತ್ತಾರೆ...... ಜೈ ಕನ್ನಡ!

ಹೊನ್ನಾವರದಿಂದ ಕುಮಟಾಕ್ಕೆ ತೆರಳುವಾಗ ೧೩ಕಿಮಿ ಬಳಿಕ ಸಿಗುವುದು ಧಾರೇಶ್ವರ. ಇಲ್ಲಿರುವ ರಮಣೀಯ ಸಮುದ್ರ ತೀರಕ್ಕೆ ತೆರಳಲು ಹಾಕಿರುವ ಮಾರ್ಗಸೂಚಿಯನ್ನು ಗಮನಿಸಿದರೆ....ಎಡವಟ್ಟು.

Subscribe to ಕನ್ನಡ - ಚಿತ್ರಗಳು