ವ್ಯಂಗಚಿತ್ರಗಳು

’ಈ ಹೀನ ಕೃತ್ಯವನ್ನು ನಾನು ಖಂಡ್ಸತೀನಿ,” ಅಂತಾ ಹೇಳ್ ಹೇಳ್ ಸಾಕಾಗಿ, ಮೂರ್ಛೆ ಬಿದ್ದಿದಾರೆ, ಪಾಪ ! ಏನು ? ಮತ್ತೊಂದು ಸ್ಪೋಟವೇ ? ರಾಮ, ರಾಮಾ !

ಇಂದಿನ ರಾಜಕೀಯದ ಸಮಯದಲ್ಲಿ ಪ್ರತಿದಿನವೂ ಒಂದಲ್ಲ ಒಂದು ಕಡೆ ಉಗ್ರರ ಕಾರ್ಯಾಚರಣೆ, ಬಾಂಬ್ ಸ್ಫೋಟ ಇದ್ದಿದ್ದೆ. ನಮ್ಮ ರಾಜಕಾರಣಿಗಳು ಏನು ಹೇಳ್ತಾರೆ ಅನ್ನೊದನ್ನ ಎಲ್ಲಾ ಜನರು ಬಲ್ಲರು. ಯಾವುದರಲ್ಲೂ ಸೀರಿಯಸ್ನೆಸ್ ಇಲ್ಲ. ಅದೇ ಉತ್ತರ. ಇವತ್ತು, ನಾಳೆ, ಮತ್ತೆ ಮುಂದೆಯೂ !

-’ಟೈಮ್ಸ್ ಆಫ್ ಇಂಡಿಯಾ,” ಆರ್. ಕೆ. ಲಕ್ಷ್ಮಣ್ ರ ’ಯು ಸೆಡ್ ಇಟ್” ನಿಂದ.

Taxonomy upgrade extras: 

ಇನ್ನೊಂದ್ ಸಾರಿ, ಹೆಸ್ರ್ ಬದ್ಲಾಯ್ಸ್ ನೋಡ್ರಿ ಸಾಹೇಬ್ರೆ... ಭಾರಿ ಒಳ್ಳೇದ್ ಆಗ್ತೈತ್ರಿ. ನನ ಮಾತ್ ಕೇಳ್ರಿ !

ಇದೇ ತರಹ ಮುಂಬೈಶಹರಿನ ಹೆಸರು ಬದಲಾಯಿಸೋ ಮಾತು, ಮುಂಬೈ ಪತ್ರಿಕೆಯೊಂದರಲ್ಲಿ ಕಾಣಿಸಿಕೊಂಡಿತ್ತು.

-ಪ್ರಜಾವಾಣಿ ಪತ್ರಿಕೆ ವ್ಯಂಗ್ಯಚಿತ್ರಕಾರ ಮೊಹಮ್ಮದ್ ಯೋಚಿಸಿದ್ದು ಹೀಗೆ .

Taxonomy upgrade extras: 

ಹಂಗೇನಿಲ್ರಿ, ಪಾಪ, ಅವ್ರ ಹತ್ಜನ ಸೆಕ್ಯೂರಿಟಿ ಗಾರ್ಡ್ ನಾಗೆ, ಒಬ್ಬ ಸುಟ್ಟೀಮ್ಯಾಲಿದಾನ್ರಿ. ಏನ್ಮಾಡೂದ್, ನೀವೇ ಹೇಳ್ರಿ ಮತ್ತ !

ಆರ್. ಕೆ . ಕಕ್ಷ್ಮಣರ ವ್ಯಂಗ್ಯಚಿತ್ರಗಳು, ಅವರ ವ್ಯಂಗ್ಯೋಕ್ತಿಯಿಲ್ಲದೆ, ಮುಂಬೈ ನ ಜನ ಮೊದ್ಲು ಕಂಗಾಲಾಗ್ಬಿಡ್ತಿದ್ರು. ಆದ್ರೆ. ಈಗ ಈ ಆತಂಕಿಗಳು ಬಂದು ಅಟ್ಯಾಕ್ ಮಾಡಿದ್ರು, ನೋಡ್ರಿ. ಕಾರ್ಟೂನ್ ಎಲ್ಲೋ ಒಳಗಿನ್ ಪುಟದಾಗೆ, ಇಲ್ಲಾಂದ್ರ, ಒಂದೊಂದ್ ದಿನ ಇರೋದೆ ಕಡಿಮೆ ಆಗದೆ, ಈಗ !

ಇವತ್ ಮತ್ತೆ ಅದೇ ಜಾಗ್ದಾಗೆ, ಮೊದಲ್ನೆ ಪೇಜ್ ನಾಗೆ ಬಂದೈತೆ ನೋಡ್ರಿ !

Taxonomy upgrade extras: 

ಕುಂತಿದ್ರಲ್ಲ. ಈವಯ್ಯ, ದೊಡ್-ಬಿಜಿನೆಸ್ಮನ್ ಆಗಿದ್ದೋರಂತೆ. ಅದಕ್ಕೇ ಕರ್ಚು-ವೆಚ್ಚದ ಲೆಕ್ಕಾ ಎಲ್ಲಾ ಇಡ್ತವ್ರೆ !

-ಸೌಜನ್ಯ. ಟೈಮ್ಸ್ ಆಫ್ ಯಿಂಡಿಯಾ ಪ್ಯಾಪರ್, ಲಕ್ಷ್ಮಣ್ ರವರ ವ್ಯಂಗ್ಯಚಿತ್ರ.

Taxonomy upgrade extras: 

ಮಂಡ್ಯದಾಗೆ ಮಾತಾಡ್ತಾರಲ್ಲಾ ಆ ಕನ್ನಡ ಭಾಷೆ, ಅಂತಲ್ವಾ, ಹೇಳೋದು ?

ಮಂಡ್ಯ ಭಾಷೆ, ಅದೇನ್ರಿ ನೀವ್ ಹೇಳೋದು, ಸರ್ಯಾಗಿ ಮಂಡ್ಯದ ಕನ್ನಡ ಭಾಷೆ, ಅಂತ ಹೇಳ್ರಿ. ಆ ದ್ಯಾವೇಗೌಡ್ರು, ಅದಿಕಾರಕ್ಕೆ ಬರ್ತಾರಲ್ಲಾ, ಆಗ್ ನೋಡ್ಕೊಳ್ತಾರ್ ಅವೃ. ಸದ್ಯಕ್ ಇನ್ನೂ ಬಾಳ ಕೆಲ್ಸ ಪೆಂಡಿಂಗ್ ಇದೇರಿ.

-ಪ್ರಜಾವಾಣಿ ಮೊಮ್ಮದು ಬರ್ದ್ ಯೆಂಗ್ಚಿತ್ರ.

Taxonomy upgrade extras: 

ಹರಿಹರಪುರ ಸಿಡಿ ಜಾತ್ರೆ

ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಹರಿಹರಪುರದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಸಿಡಿಜಾತ್ರೆಯಲ್ಲಿ ಸಿಡಿಯಾಟದ ಒಂದು ನೋಟ

Taxonomy upgrade extras: 

ಬುಕ್ರ್ ಪ್ರಸ್ತಿ ಬಂದ್ಮ್ಯಾಕ್ ನೋಡ್ಪ, ನಮ್ಜನ ಎಂಗಾಡ್ತಾವ್ರೆ ; ಇಂದೆ ಇಂಗ್ ಕರೀದೀ ಮಾಡಾದ್ ನಾನಂತೂ ಕಂಡೋನೆ ಇಲ್ಲ್ಕಣ್ಮಗ !

ಕನ್ನಡ್ದ್ಜನ, ಕೊಂಡ್ಕೊಂಡ್ ಓದೋದ್ ಸುಳ್ಳು, ಅದೇ ಬುಕ್ರ್ ಪ್ರಸ್ತಿ ಬಂದ್ಮ್ಯಾಕೆ ಒಸಿ ಅಂಗಾಡ್ತವ್ರೆ ಆಟೆ !
ಆ ಬುಕ್ರಪ್ಪಂಗ್ ಆಡ್ಬೀಳ್ದೆ ಇರಕ್ ಆಯ್ತದಾ ?

-ಚಿತ್ರ, ಅಮದ್ ಸಾಬ್ರದ್ದು, ಪ್ರಜಾವಾಣಿ ಪ್ಯಾಪ್ರನಾಗೆ ಬರ್ದವ್ರೆ.

Taxonomy upgrade extras: 

ಓ ! ಹೊರ್ಟರಪ್ಪ ನಮ್ ಪೈಲೆಟ್ ಸಾಹೇಬ್ರು ; ಬಗಲ್ನಲ್ಲಿ ಬೆಡ್ಶೀಟು, ದಿಂಬು, ಹಾಸ್ಗಿ, ಬ್ಯಾಡೇನ್ ಮತ್ತ !

-ಟೈಮ್ಸ್ ಆಫ್ ಇಂಡಿಯದ, ಆರ್. ಕೆ . ಲಕ್ಷ್ಮಣ್ ರವರ ಚಿತ್ರಾಂಕಣದಿಂದ.

Taxonomy upgrade extras: 

ಅಕ್ಕಿ ಆರ್ತೈತ್ರಿಯಪ್ಪ ; ಚಲೋಆತ್ಬಿಡ್ರಿ ; ನಿಮ್ತಲ್ಯಾಗೆ ಬಾಸ್ಮತಿಅಕ್ಕಿನೆ ಐತ್ರಿ. ಅಲ್ರಿ, ನಂಗ್ತಿಳಿಯಾಕಿಲ್ಲ ಅಂದ್ಕೊಂಡ್ರೇನು ?

ಪ್ರಜಾವಾಣಿ ಚಿತ್ರಪುಟಗಳಲ್ಲಿ ಬರೆದ ಮೊಹಮ್ಮದ್ ರವರ ವ್ಯಂಗಚಿತ್ರಕ್ಕೆ ಒತ್ತುಕೊಡೋದಾದ್ರೆ, ಈ ಮಾತು ಸರಿ ಇರಬಹುದಾ ಹೇಗೆ !

Taxonomy upgrade extras: 

ಸರ್ಕಾರಿ ನೊಕ್ರು ಬಾಳ ಸಂತೋಸ ಪಟ್ರು ಕಣಣ್ಣ. ಮುಂದೆ ೩ ದಿನ ರಜಆಕಿದ್ರೆ ಒಂದ್ವಾರ ಒಟ್ಗೆ ಸಿಗಲ್ವ.ಸ್ವಾಮಾರಾನೂ ಆಕಿ ರಜವ !

-ಪ್ರಜಾವಾಣಿ, ಚಿನ್ಕುರ್ಳಿ ಮೊಹಮ್ಮದ್ ಹೇಳೋದ್ ಸರಿ ಸಾ

Taxonomy upgrade extras: 

ನಮ್ಮಲ್ಲಿ ಯಾರು ನಾಯಕರಾಗ್ಬೇಕೂ ಅನ್ನೋದ್ರಲ್ಲಿ ಭಿನ್ನಾಭಿಪ್ರಾಯ, ಜಗಳಕದ್ನ ಯಾಕ್ರಿ ? ಬೇರೆ ಪಾರ್ಟಿನೆ ಮಾಡಿದ್ರ್ಹ್ಯಾಂಗೆ ?

-’ಯು ಸೆಡ್ ಇಟ್ ,” ’ ಟೈಮ್ಸ ಆಫ್ ಯಿಂಡಿಯ,” ಪತ್ರಿಕೆಯಿಂದ

Taxonomy upgrade extras: 

" ನಮಗೆ ಏನೂ ಸುದ್ದಿಸಿಕ್ಕಿಲ್ಲ ಅಂತ, ಹಗಲೆಲ್ಲಾ ಹೇಳೋದ್ ಕಷ್ಟ ಅಂತ, ಪೇಂಟ್ ಮಾಡ್ಬಿಟ್ಟಿದೀನಿ", ಅಲ್ವೇ ಮತ್ತೆ !

-ಟೈಮ್ಸ್ ಆಫ್ ಇಂಡಿಯದ ಒಳಗಿನ ಪುಟದಲ್ಲಿ ಬರೆದ ಆರ್. ಕೆ. ಲಕ್ಷ್ಮಣ್ ರವರ ವ್ಯಂಗ್ಯೋಕ್ತಿ !

Taxonomy upgrade extras: 

ಅಣದುಬ್ಬರ ಅನ್ನೋ ಬೂತಯ್ಯನ್ನ ಅಂಗೇ ಬರಿ ಮಾತ್ನಾಗೆ, ಒದ್ದೇ ಒದೀತಾವ್ರೆ, ನಮ್ ಚಿದಂಬ್ರಂನೋರು !

ವ್ಯಂಗ್ಯಚಿತ್ರಗಾರ್ತಿ, ಹರಿಣಿಯವರ ಚಿಂತನೆ ಹೀಗಿದೆ.

-ಪ್ರಜಾವಾಣಿ ಚಿತ್ರಪುಟಗಳಿಂದ.

Taxonomy upgrade extras: 

ಸದ್ಯ, ಆ ದರಿದ್ರ ಪಾರ್ಕಿಂಗ್ ಪ್ರಾಬ್ಲೆಮ್ ಮುಗೀತು ; ಕಾರ್ನೆ ಮಾರಿಬಿಟ್ಟೆ !

ಬಹುಶಃ ಮುಂದೆ ನಾನು, ಕಾರು ಕೊಳ್ಳವ ಸಮಯಕ್ಕೆ ಇದೇ ಸಮಸ್ಯೆ ಇರುತ್ತೆ. ಪೆಟ್ರೋಲ್ ಬೆಲೆ ಮತ್ತೂ ಗಗನಕ್ಕೇರಿರುತ್ತೆ.

-ಆರ್. ಕೆ. ಲಕ್ಷ್ಮಣ್ ರವರ ಕೃಪೆ.

Taxonomy upgrade extras: 

ಆಲು, ಎಣ್ಣೆ, ಅಕ್ಕಿ, ಬ್ಯಾಳೆ, ಗ್ಯಾಸು, ಎಲ್ಲಾದ್ರ ಬೆಲೆ ಗಗ್ನಕ್ಕೆ ಮುಟ್ಟಿಲ್ವ. ಅವ್ರೇ ಏಳ್ಬೇಕೇನು, ಚಿಂತಿಗ್ಕಾರ್ಣ ಆಗೈತೆ ಅಂತಾವ ?

೮.೧ ಆಯ್ತು ಅಂತ ತೆಲೆಕೆಡಸ್ಕಂಡೆನುಪ್ಯೊಗ ? ಬೆಲೆ ಯೇರ್ಕೆ ನಮ್ಗೇನ್ ಒಸ್ದಾ. ನೀವೆಲ್ಲೊ. ಎಂಟೊ, ಒಂಬತ್ತೊ ಕಂಡ್ಕೂಡ್ಲೆ, ಗರ ಬಡ್ದೊರಂಗಾಡ್ತಿರ. ನಮ್ಮವಸ್ತೆ ಮೊಂದ್ಲಿಂದನೂ ಇಂಗೆಯಾ, ಅದ್ಕೇನ್ ಏಳ್ತೀರಿ. ಯಾವ್ ಸರ್ಕಾರ ಬಂದ್ರು, ನಮ್ಕಷ್ಟಾನ ಕೇಳೊರ್ಯಾರು ಸಾಮಿ ?

Taxonomy upgrade extras: 

ತಕ್ಕಳಪ್ಪ ಚಿನ್ಕುರ್ಳಿ ಮೊಮ್ಮದು ಬಂದ್ರು ; ಅವ್ರ್ ಏಳೋದು ಅದೇಯ ; ಅತಂತ್ರದ ಸರ್ಕಾರದ ಬೀಗದ ಕೈ ದ್ಯಾವೇಗೌಡ್ರತಾವೇ ಐತಂತ್ರಿ, ಸಾಹೇಬ್ರೆ !

ಅಬ್ಬ ಇಷ್ಟೊಂದು ಅಣ ಪೋಲ್ ಮಾಡಿದ್ಮ್ಯಾಗೂ ಪೋಲ್ನಾಗೆ ಅದೇ ಅತಂತ್ರದ ಪರಿಸ್ತಿತಿ ಆಗೊಅಂಗೆ ಕಾಣ್ಸತೈತ್ರಿ ಅನ್ನಕ್ ಹತ್ಯಾರ್ ರಿ ನಮ್ ಮೊಮ್ಮದ್ ಸಾಹೇಬ್ರು.
ಇನ್ನೇನು ಆ ಅತಂತ್ರ ಸರ್ಕಾರದ್ ಚಾವಿ ಯಾರತ್ರಿರ್ಬೊದು ? ಗೆಪ್ಯಾಯ್ತು. ನಮ್ ದ್ಯಾವೇಗೌಡ್ರ ಇಲ್ವ್ರ, ಅವ್ರೇ ಏನಾದ್ರು ಮಾಡ್ತಾರಂತ್ರಿ. ಕರ್ ನಾಟ್ಕ ದ್ ಸೂತ್ರದಾರಿ ಅವ್ರೇ ಅಲ್ವ್ರ !

Taxonomy upgrade extras: 

ಅಯ್ಯೊ ಸಿವ್ನೆ, ಇಂಗಾದ್ರೆಂಗೆ ? ಇಂತ ಪಿಡಿಗ್ನಿಂದ ನಮ್ ಕಂದಮ್ಮಗಳ್ನ ಕಾಪಾಡೊರ್ಯಾರು ದ್ಯಾವ !

-ಚಿನ್ ಕುರ್ಳಿ ಮೊಮ್ಮದು. ಪ್ರಜಾವಾಣ್ಯಾಗೆ ಗೀಚವ್ರೆ.

Taxonomy upgrade extras: 

ಅಬ್ಬಾ, " ಬಿಜಿಂಕ್ಸ್ ಒಲಂಪಿಕ್ಸ್ ಟಾರ್ಚ " ನ್ನು ಸಾಗಿಸಲು ನಿಯೋಜಿಸಿದ, ಡ್ರಾಗನ್ ಬಂಡಿಯ ಸೊಗಸು ನೋಡಿ !

ಅಬ್ಬಾ, " ಬಿಜಿಂಕ್ಸ್ ಒಲಂಪಿಕ್ಸ್ ಟಾರ್ಚ " ನ್ನು ಸಾಗಿಸಲು ನಿಯೋಜಿಸಿದ, ಡ್ರಾಗನ್ ಬಂಡಿಯ ಸೊಗಸು ನೋಡಿ !

-ವ್ಯಂಗ್ಯಚಿತ್ರಕಾರ, ಅಜಿತ್ ನಿನಾನ್ ರ ಅದ್ಭುತ ಕಲ್ಪನೆ !

Taxonomy upgrade extras: 

ರತನ್ ಟಾಟಾ ಅವ್ರು, ಅಗ್ಗದ್ ಬೆಲೆ ಕಾರ್ ಮಾಡವ್ರೆ, ನೋಡ್ಲಿಲ್ವ್ರಾ ನೀವು ? ಓಗಿ ತಗಂಬನ್ನಿ

ರತನ್ ಟಾಟಾವ್ರು, ಬಹಳವರ್ಷದಿಂದ ಕನಸ್ ಕಾಣ್ತಾನೆ ಇದ್ರು. ನಮ್ಜನಕ್ಕೆ ಒಂದು ಸೊವಿ ಕಾರ್ನ ಕೊಡ್ಬೇಕು ಅಂತ. ಈಗ ಅದು ಮಾರುಕಟ್ಟೆಗೆ ಬಂದಿರ್ಬೊದು. ನೋಡಿ. ಹೇಗಿದೆಯೊ.

-ಚಿನಕುರಳಿ, ಅಹ್ಮದ್, ಪ್ರಜಾವಾಣಿ ಪತ್ರಿಕೆ.

Taxonomy upgrade extras: 

ಆರ್. ಕೆ. ಲಕ್ಷ್ಮಣ್, ಕಣ್ಣಿಗೆ ಮಹಾತ್ಮ ಗಾಂಧಿಯವರು ಯಾಕೆ ಹೀಗೆ ಕಾಣಿಸುತ್ತಿದ್ದರೊ ಕಾಣೆ !

ಸಣಕಲು ಕಡ್ಡಿಯಂತಿದ್ದ ನಮ್ಮ ಬಾಪುರವರು, ಲಕ್ಷ್ಮಣ್ ಕಣ್ಣಿಗೆ ಯಾಕೆ ಹೀಗೆ ದಷ್ಟಪುಷ್ಟವಾಗಿ ಕಾಣಿಸುತ್ತಿದ್ದರು ?

ಕೃಪೆ : ಟೈಮ್ಸ್ ಆಫ್ ಇಂಡಿಯ.

Taxonomy upgrade extras: 

ಹೊಸ ವರ್ಷದ್ ಭಾಷಣ ಪಾಡಾಗೈತ್ರಿ ಸಾಹೇಬ್ರೆ ; ಎಣ್ಣಿ ಬೆಲೆ ಏರಿದೆ, ಫಂಡ್ಸೆ ಇಲ್ರಿ, ರಫ್ತ್ ಬಂದಾಗದೆ, ಹಣದುಬ್ಬರ ಐತ್ರಿ. ಅದ್ಕೆ ಅವೆಲ್ಲ ನಾನು ಬಿಟ್ಟೀನಿ.

ಮಹಾನ್ ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ್ ರವರನ್ನು ವಂದಿಸಿ, ಕ್ಷಮೆಬೇಡಿ, ಬರೆಯುತ್ತಿದ್ದೇನೆ. ಇದು, ೯, ಡಿಸೆಂಬರ್, ೨೦೦೭ ರ ದಿನದ ರವಿವಾರದಂದು, ಟೈಮ್ಸ್ ಆಫ್ ಇಂಡಿಯ, ಮುಂಬೈ ಎಡಿಶನ್ ಪತ್ರಿಕೆಯಲ್ಲಿ , Passing Thought /R. K. Laxman., ಎಂಬ ಶೀರ್ಶಿಕೆಯಡಿಯಲ್ಲಿ ಪ್ರಕಟವಾಗಿದೆ.

Taxonomy upgrade extras: 

ಇಂಗ್ ದೊಂಬಿನಾಗ್ ಒಗಿ, ಕುಂತ್ಗಳಕ್ ಜಾಗ್ ಇಲ್ದಂಗ್ ಒಯ್ದಾಡದು ಎಂಗೈತೆ, ಒಸಿ ಇತ್ಯರ್ತ ಮಾಡ್ಕಂಡಿದಿರ, ಎಂಗೆ !

-ಚಿನ್ಕುರ್ಳಿ ಮೊಮ್ಮದ್ದು, ಒಳ್ಳೆ ಸವಾಲ್ನೆ ಆಕವ್ರೆ.

Taxonomy upgrade extras: 

ಮಾಟಮಂತ್ರ. ಐಟೆಕ್, ಶಾಫ್ಟ್ವೇರ್ ಎಲ್ಲ ಇಲ್ಲೆ ಐತೆ -ಇಂತವ್ನೆಲ್ಲ ನಂಬೊ ಜನ ನಮ್ಮೊರು, ಬಾರಿ ದ್ಯಾವ್ರ ಬಕ್ತ್ರು !

ಈ ಕಲ್ಯುಗ್ದಾಗೆ, ಮಾಟ, ಮಂತ್ರ, ಯಂತ್ರ, ಇವೆಲ್ಲ ನಂಬೊರು, ಬರಿ ಅಳ್ಳಿಜನನೆ ಅಲ್ಲ. ನಮ್ಮ ಮಾಜೀ ಮುಕ್ಯಮಂತ್ರಿ ಯಡಿಯೂರಪ್ಪನೊರು ಇವಕ್ಕೆ ಬಲು ಪ್ರಾಮುಕ್ಯತೆ ಕೊಡ್ತಾರ್ರಿ. ಗೌಡ್ರು ಮತ್ತು ಅವರ್ ಮಕ್ಳೆಲ್ಲ ಸೇರ್ಕಂಡ್ , ಎಡ್ಡಿಯವರ್ನೆ ಇಲ್ಲ ಅಂತ ಅನ್ಸಬುಡ್ಬೇಕು ಅಂತವ ಕುಮ್ಮಕ್ ನಡಿತ ಐತಂತೆ. ಇದ್ನ ನಂಬೊರು ಕೆಲವ್ರು ಅವ್ರೆ.

Taxonomy upgrade extras: 

ಎಲೆ,ಕೊಂಬೆ ಎಲ್ಲಿ, ಕಾಣಂಗಿಲ್ಲ. ಬೇರೊಂದುಳಕಂಡೈತೆ, ಅದು ಯಾವಾಗ್ ಒಂಟೋಯ್ತದೊ- ಆ ಸಿವ್ನೆ ಬಲ್ಲ !

-ಚಿನ್ಕುರ್ಳಿ ಮೊಮ್ಮದು, ಪ್ರಜಾವಾಣಿ ಪ್ಯಾಪರ್ನಾಗಿ ಯೆಂಗ್ಚಿತ್ರ ಗೀಚವ್ರೆ.

Taxonomy upgrade extras: 

ಇಂಗೆ ಕೂಗಾಡ್ಕಂಡು ಒಗದ್ರಲ್ಲೆ ಆತು. ಬಯ್ಯದು, ಗುದ್ದಾಟ, ಒಡ್ದಾಟ. ಜನ್ಗಳ್ನೇನ್ ತಿಳ್ಕಂಡವ್ರೆ ಇವ್ರೆಲ್ಲ. ನಾವೇನ್ ಕುರಿಗ್ಳಾ ?

ಸುಮ್ಕೆ ಕೂಗಾಡದ್ ಬಿಡ್ರಪ್ಪ. ಜನಗಳ್ನೇನ್ ಕುರಿಗ್ಳು ಅಂತ ತಿಳ್ಕಬ್ಯಾಡ್ರಿ. ಎಲ್ಲ ಗೊತ್ತಾಗೊತು. ಸಾಕ್ ಸುಮ್ಕಿರ್ರಿ. ಎಲೆಕ್ಸನ್ ಬರ್ಲಿ. ನೊಡೊವ್ರಂತೆ.

-ಚಿನಕುರ್ಳಿ, ಮಹಮ್ಮದ್ ಸಾಹೇಬ್ರ ಅಂಬೋಣ.

Taxonomy upgrade extras: 

ಅಯ್ಯಾವ್ರು ರಿಟೈರ್ ಆಗ್ತವ್ರೆ, ಒಳ್ಗಿನ್ ಗುಟ್ಟುಗಳ್ನ ಯೆಂಗ್ ರಟ್ಮಾಡದು, ಅಂತವ, ಯೊಸ್ನೆ ಮಾಡ್ತ ಕುಂತವ್ರೆ !

-ಅರ್. ಕೆ. ಲಕ್ಷ್ಮಣ್ ರವರ ಅಮೋಘ ಕುಂಚದಿಂದ.

Taxonomy upgrade extras: 

ಸುಮ್ಕೆ, ಬೆರಳ್ಚೀಪ್ಗಂಡು, ಕೈ-ಕಾಲ್ ಒಡ್ಕಂತ ರೊದ್ನ ಮಾಡಾದು, ಇಲ್ವೆ, ಕಿಲ್ಕಿಲ ಅಂತ ಜನಗೊಳ್ನೊಡಿ ನಗದು- ಇಂಗೈತೆ ನಮ್ಮವಸ್ತೆ !

" ಚಿನ್ಕುರ್ಳಿ ಮೊಹಮ್ಮದ್ "ಭಾಳ ಚನ್ನಾಗ್ ಬರಿತಿದಾರೆ. ಪ್ರಜಾವಾಣಿ ಪೇಪಾರ್ ಪೂರ್ತಿ ಒದಾದು ಒಂದೆ. ಅವರ್ ಬರ್ದಿರೊ ಚಿತ್ರ ಸರ್ಯಾಗ್ ನೊಡದು ಒಂದೆ. ಆದ್ರೆ ಇದನ್ ಬರಿಬಾರ್ದಾಗಿತ್ತಪ್ಪ. " ತು- ತು- ಮೈ -ಮೈ ಒಂದ್ ತರ್ಹ ಗುಟ್ಟಲ್ವ. ಹೌದು, ಇದು ಮನ್ಯಗಿನ್ ವಿಷ್ಯ ಅಲ್ಲೊ ಮಾರಾಯ. ನಮ್ ದೆಶದ್ದು.

Taxonomy upgrade extras: 

ಸಂಮಿಸ್ರ ಸರ್ಕಾರ್ಗೋಳು ಇಂಗೆನೆಯ ! ಸಿನ್ -ಎಲ್ಡು.

ಮುನ್ಯಪ್ಪ, ದೊಗ್ಗನಾಳು :

-ಮಂಗ್ಳೂರಿನ್ ಅಮೃತಪ್ಪಾರು ಒಳ್ಳೆ ಯಂಗ್ಚಿತ್ರ ಬರಿತಾರಪೊ. ದಟ್ಸ್ ಕನ್ನಡ ಇ-ಪತ್ರಿಕೆಸಕಾರ್ದಿಂದವ.

Taxonomy upgrade extras: 

ಮೈತ್ರಿ ಸರ್ಕಾರ್ಗೊಳೆಲ್ಲ ಇಂಗೆನೆಯ. ತಲೆಕೆಡಸ್ಕಂಡು ಉಪ್ಯೋಗಿಲ್ಲ- ಸಿನ್ ಒಂದು.

ಮುನ್ಯಪ್ಪ, ದೊಗ್ನಾಳು :

ಈ ಮೈತ್ರಿ ಸರ್ಕಾರ್ಗೊಳೆಲ್ಲ ಇಂಗೆನೆಯ. ತಲೆಕೆಡಸ್ಕಂಡು ಉಪ್ಯೋಗಿಲ್ಲ. ಸಿನ್ ಒಂದು.

ಮೊಮ್ಮದು ಒಳ್ಳೆ ಯಂಗ್ಚಿತ್ರ ಬರಿತಾರೆ ಕಣ್ಪೊ.

-ಮೊಮ್ಮದು. ಚಿನ್ಕುರ್ಳಿ, ಪ್ರಜಾವಾಣಿ.

Taxonomy upgrade extras: 

ಡಾಕಟ್ರು ಎಳೋದನ್ನ, ಒಸಿ ಕೇಳ್ಕಳ್ರಿ !

ಚಿತ್ರಕಾರ್ರಿಗೊಂದ್ಮಾತು.

ಸ್ವಾಮಿ, ಅವ್ರು ಸ್ವಲ್ಪ ನಗ್ಮುಕ್ದಲ್ಲಾದ್ರು, ಕುಂತ್ಗಂಡು, ಬಿ. ಪಿ. ಚೆಕ್ಮಾಡಕ್ಖೇಳ್ರಿ. ಚಿತ್ರದಾಗೆ ಟೆಕ್ನಿಕಲ್ ದೊಸ, ಬಾರಿ ಐತೆ ; ಅಲ್ಲ್ವ್ರಾ?

-ಸ್ವಾಮಿಗೋಳು, ಬರ್ದ್, ಯೆಂಗ್ಚಿತ್ರ.

Taxonomy upgrade extras: 

ಸ್ವಲ್ಪ ತಾಳ್ಕಳ್ಳಿ ಎಂಗಾರು ಆಗ್ಲಿ, ಒಂದ್ಸಲ, ಡಿಲ್ಲಿಗೋಗ್ ಬಂದ್ಬಿಡ್ತಿನಿ. ಆಮೆಕ್ ನೊಡ್ವ !

ಅಬ್ಬ. ನಮ್ಮ ದೇವೇ ಗೌಡ್ರ ಶಾರೀರನ ಮೆಚ್ಚಬೇಕಾದ್ದೆ. ತಮ್ಮ ಪಕ್ಷನ ಎಷ್ಟು ಚೆನ್ನಾಗಿ ನೋಡ್ಕಂತಾರೆ !

Taxonomy upgrade extras: 

ಎಂಗ್ ಬತ್ತಾರ್ನೋಡು ಈಗ !, ಎಲ್ಲಿತ್ತು ಇವೆಲ್ಲಾ ಆ ಇಂದಿನ್ಕಾಲ್ದಾಗೆ, ...ಛೆಛೆ....ಚೆ. ಚೆ. ಪಾಪ, ಪಾಪ.... !

ಈಸಿರಪ್ಪರು : ಏನ್ , ನಮ್ದೇಸ ಅಂದ್ರೇನು ? ಆಕಾಲ್ದಾಗೆ, ಇವೆಲ್ಲ ಎಲ್ಲಿತ್ತು ? ಬಂಡಿ, ಜಟ್ಕಾ, ಇಲ್ಲ,.. ಎಂದೊ ಒಂದ್ಸರಿ, ...ಮೊಟರ್ ನಾಗೆ !

ಈಗ್ ನೊಡ್ಲ, ಎಂತ ಸಿಸ್ತು, ಎಲ್ಲ ಒಂದ್ ತರ, ನಮ್ಮ " ಇಸ್ನ್ ವರ್ದನ್, " ಅಂಗೆ ಕಾಣ್ಸ್ ತದೆ ಕಣ್ಲಾ ! ಅದೇ, " ಯಜಮಾನ್ ನಾಗೆ " ನಟ್ಸಿಲ್ವೇನಪಾ ?

ಎಂಟಣ್ಣ : ಔದು ಕಣ್ ಈಸಿರಪ. ನಂಗೂ ಅಂಗೆ ಅನ್ ಸ್ತು.

Taxonomy upgrade extras: 

ಇಂಗ್ ಕಿತ್ತಾಡಕ್ಕಾ ನಾವ್ ಓಟ್ಕೊಟ್ಟಿದ್ದು ? ಒಳ್ಳೆ ಕುರ್ಚೀಗ್ ಒಡ್ದಾಟ ಆಗೋಯ್ತಲ್ಲಪೋ !

ಕರ್ನಾಟಕದ ಧರ್ಮಯುದ್ಧವೇ ಅಥವಾ ಕುರ್ಚೀ ಕಿತ್ತಾಟವೇ ?
ಓಟ್ಕೊಟ್ಟೋರ್ ಮುಖಕ್ಕೆ ಮಂಗ್ಳಾರ್ತಿ ಅಲ್ವೆ ಮತ್ತೆ ?

ದ್ಯಾವೇ ಗೌಡ್ರು ಏಳೋದೇನು ? ಚಿಕ್ಕಗೌಡ್ರು ಎದರ್ಕಂಡು- ಅದೇ ಕುಮಾರಪ್ನೋರು, ಪಿಳಿ-ಪಿಳಿ ಕಣ್ಬಿಡ್ತಾರೆ. ಯಡಿಯೂರಪ್ಪಾರು ಅದ್ವಾನಿಯೋರ್ ತರ, " ರತಯಾತ್ರೆ," ಮಾಡ್ಬೊಯ್ದ್ರಾ ? ನಿಮ್ಗೇನನ್ಸ್ತದೆ, ಒಸಿ ಯೆಳ್ರಿ ?

Taxonomy upgrade extras: 

ಜ್ವಾಕೆ ಕಣವ್ವ ; ಮೆತ್ಗೆ ಕುಟ್ಕ. ನಮ್ಮ ಕಟ್ಟಡ್ಗೋಳ್ ತಡ್ಕಣಂಗಿಲ್ಲ !

" ಇಂಗೈತ್ ನೋಡಪ್ಪ, ನಮ್ ಕಟ್ಟಡ್ಗಳ ಅವಸ್ತೆ. ಏನಾದ್ರೂ ಯಾಮಾರಿ, ಒಂದ್ ಏಟ್ ಕೊಟ್ಯೊ, ಗಾಚಾರ ಚೆನ್ನಾಗಿರಾಕಿಲ್ಲ. ಔದು, ಕಣಪ್ಪ, ಜ್ವಾಕೆ, ಉಸಾರು, ಮಗ, " !

-ಟೈಮ್ಸ್ ಆಫ್ ಇಂಡಿಯ ಕೃಪೆ.

Taxonomy upgrade extras: 

ಚಿನಕುರಳಿ !

"ಬಿನ್ ಲಾಡನ್ ಸಂದೇಶ, "ವನ್ನು ಕೇಳಿ, ಎಷ್ಟು ಯುವಕರು ಅಪಾರ್ಥಮಾಡಿಕೊಂಡು ತಮ್ಮ ಜೀವನವನ್ನು ಹಾಳುಮಾಡ್ಕೊತಿದಾರೆ ಅಲ್ವೇ !

-ಪ್ರಜಾವಾಣಿ ವತಿಯಿಂದ.

Taxonomy upgrade extras: 

ಕೌಂಟರ್ ಪಾಯಿಂಟ್ !

ಇದು " Deccan Herald Paper " ನ ವ್ಯಂಗ್ಯ ಚಿತ್ರದ ಅಂಕಣ. ಚೆನ್ನಾಗಿದೆ ಅಂತ ಕಾಣಿಸ್ತು.

The Minister says :

"Dont panic.

I have appointed them, after the State Government,

reduced my security."

-ಕೃಪೆ : ಡೆಕ್ಕನ್ ಹೆರಾಳ್ಡ್

Taxonomy upgrade extras: 

ಮತ್ತಿನ್ನೊಂದು ಎಲೆಕ್ಸನ್ ಬತ್ತಾ ಐತೆ !

ಈ ಸೊಗಸಿನ ಚಿತ್ರದ ಕರ್ತೃ, ಯಾರು ಎಂದು ಹೇಳಬೇಕಾಗಿಲ್ಲ. ಅವರೇ ನಮ್ಮ ಕನ್ನಡದ ಕೊರವಂಜಿಯಿಂದ ಪ್ರಾರಂಭಿಸಿ, ಭಾರತದ "ವ್ಯಂಗ್ಯಚಿತ್ರದಿಗಂತದ", ನಕ್ಷೆಯಲ್ಲಿ ಮಿಂಚುತ್ತಿರುವ ಅನರ್ಘ್ಯ ತಾರೆ !

ಡಾ. ಆರ್. ಕೆ. ಲಕ್ಷ್ಮಣ್.

-"ಟೈಮ್ಸ್ ಆಫ್ ಇಂಡಿಯ "ದ ಸೌಜನ್ಯದಿಂದ.

Taxonomy upgrade extras: 

೧೯೬೨ ರ ಕ್ರಿಸ್ ಮಸ್ !

"ಗಾರ್ಡಿಯನ್ " ಪತ್ರಿಕೆಯಲ್ಲಿ ೧೯೬೨ ರಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರದ ಒಂದು ತುಣುಕು !

ಇದನ್ನು ಬರೆದವರು, ಅಂದಿನ ದಿನಗಳಲ್ಲಿ ಹೆಸರು ಮಾಡಿದ, ಡೇವಿಡ್ ಲೋ- ಸುಪ್ರಸಿದ್ಧ British Political Cartoonist !

-TOI

Taxonomy upgrade extras: 

ಪಾಂಡುರಂಗರಾಯರ ವ್ಯಂಗ್ಯ ಚಿತ್ರಗಳು- ಅತ್ಯಂತ ರಸಮಯವಾಗಿವೆ !

ಪಾಂಡುರಂಗರಾಯರ ಕಾರ್ಟೂನ್ ಗಳು ನಿಜಕ್ಕೂ ರೋಚಕ ಹಾಗೂ ಭವ್ಯವಾವಿವೆ !
ಕನ್ನಡದಲ್ಲಿ ಇಂತಹ ವ್ಯಂಗ್ಯ ಚಿತ್ರಗಲು ಕಣ್ಣಿಗೆ ಹಬ್ಬ; ಮನಸ್ಸಿಗೆ ತಂಪು !

- ಕೃಪೆ : ಅವರ ಆಲ್ಬಮ್ ನಿಂದ.

Taxonomy upgrade extras: 

ಎಸ್. ಕೆ. ನಾಡಿಗರ ಮತ್ತೊಂದು ಉತ್ತಮ ಕರ್ಟೂನ್

ಎಸ್ . ಕೆ. ನಾಡಿಗ್ ಮತ್ತೊಂದು ಉತ್ತಮ ಕಾರ್ಟೂನ್ ನನ್ನು ಕೊಟ್ಟಿದ್ದಾರೆ. ಶಿವಮೊಗ್ಗೆಯ ಪ್ರತಿಭೆಗಳಿಗೆ ಕೊನೆಯಿಲ್ಲ, ಮೊದಲಿಲ್ಲ ! ನಮ್ಮ ಹರಿ ಪ್ರಸಾದ್ ನಾಡಿಗರೇನು ಕಡಿಮೆಯೇ ?

Taxonomy upgrade extras: 

ಈ ವ್ಯಂಗ್ಯಚಿತ್ರ ಚೆನ್ನಾಗಿದೆ.

ಉದಯವಾಣಿಯಲ್ಲಿ ಪ್ರಕಟವಾಗಿರುವ ವ್ಯಂಗ್ಯ- ಚಿತ್ರ ನಿಜವಾಗಿಯೂ ಚೆನ್ನಾಗಿದೆ. ಅದನ್ನು ಸರಿಯಾಗಿ ಜನರಿಗೆ ತೋರಿಸಿರೆ, ಅವರು ಓದಿ ಅದರ ಗುಣಮಟ್ಟ ವನ್ನು ನಿರ್ಧರಿಸುತ್ತಾರೆ. ಹಾಗೂ ಚೆನ್ನಾಗಿದ್ದರೆ ಮೆಚ್ಚುತ್ತಾರೆ ಕೂಡ.
ಈಗ ಜನಗಿಗೆ ಬೇಕಾಗಿರುವುದು ಹೊಸತನ. ಏನಾದರೂ ಹೊಸತು.

Taxonomy upgrade extras: 

ವ್ಯತ್ಯಾಸ

ಕೆಲವರು ಈ ವ್ಯಂಗ್ಯಚಿತ್ರವನ್ನು/ ಅದರ ತಾಣವನ್ನು ಮುಂಚೆ ನೋಡಿರಬಹುದು. ಬಹಳ ಸಾಮಾನ್ಯ ಎಂದು ಕಾಣಿಸುವ ಅನೇಕ ವಿಷಯಗಳನ್ನು ವಿಚಿತ್ರವಾಗಿ ನಗು ಬರಿಸುವಂತೆ ತೋರಿಸುವ ತಾಣ. ಕೆಲವೊಮ್ಮೆ ಇಲ್ಲಿ ಇರುವ ಕೆಲವು ವ್ಯಂಗ್ಯಚಿತ್ರಗಳನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ತಲೆ ಉಪಯೋಗಿಸಲೂ ಬೇಕಾಗುತ್ತದೆ.

ಉದಾ : Poisson

Taxonomy upgrade extras: 

ಸಿಂಬಿಯೋಸಿಸ್ ಪುಣೆ, ತನ್ನ ವಿಶ್ವಭವನದ ಪ್ರಾಂಗಣದಲ್ಲಿ ಕಾಮನ್ ಮ್ಯಾನ್ ನ ಪುತಳಿ ಅನಾವರಣ ಮಾಡಿ ಗೌರವಿಸಿತ್ತು.

*ಆರ್ ಕೆ. ಲಕ್ಷ್ಮಣರ 'Comman man' ನ ಕಂಚಿನ ವಿಗ್ರಹ, ಪುಣೆಯ 'Symbiosis Institute', ನ 'symbiosis Vishvabhavan building' ಮುಂಭಾಗದಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಎತ್ತರ ೮ ಅಡಿಗಳು. ಲಕ್ಷ್ಮಣ್ ಮತ್ತು ಕಮಲಾ ಲಕ್ಷ್ಮಣ್ ಇದನ್ನು ಸಮರ್ಥಿಸಿ ತಮ್ಮ ಅನುಮತಿಯನ್ನು ಕೊಟ್ಟರು. ಆಗಿನ ರಾಷ್ಟ್ರಪತಿಗಳಾಗಿದ್ದ ಡಾ. ಕೆ. ಆರ್.

Taxonomy upgrade extras: 

"ಏರ್ ಡೆಕ್ಕನ್ " ತಮ್ಮ ಏರ್ಲೈನ್ಸ್ ಗೆ, "ಕಾಮನ್ ಮ್ಯಾನ್ "ಲೋಗೋ ಆರಿಸಿದ್ದಾರೆ.

* ಕ್ಯಾಪ್ಟನ್ ಗೋಪಿನಾಥ್, ತಮ್ಮ ಕಡಿಮೆ ಬಡ್ಜೆಟ್ ಏರ್ಲೈನ್ಸ್- "ಏರ್ ಡೆಕ್ಕನ್ " ಗೆ ಆರ್. ಕೆ. ಲಕ್ಷ್ಮಣ್ ರ ಕಾಮನ್ ಮ್ಯಾನ್ (ಸಾಮಾನ್ಯ ಮನುಷ್ಯ) ನನ್ನು ತಮ್ಮ ವಿಮಾನದ ಲಾಂಛನವನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಬಹುಶಃ ಅದು "ಕಾಮನ್ ಮ್ಯಾನ್ " ನ ಜನಪ್ರಿಯತೆಯ ಸಂದೇಶವೆಂದು ಬೇರೆ ಹೇಳಬೇಕಾಗಿಲ್ಲ !

Taxonomy upgrade extras: 

ಆರ್. ಕೆ. ಲಕ್ಷ್ಮಣ್ ರ 'ವ್ಯಂಗ್ಯಚಿತ್ರಾಂಕಣ' ಈಗ ಸಪ್ಪೆಯಾಗಿದೆ !

ನಾನೊಬ್ಬ ಲಕ್ಷ್ಮಣ್ ರ " ಫ್ಯಾನ್ " ಎಂದರೆ ಅಡ್ಡಿಯಿಲ್ಲ. ಏಕೆಂದರೆ ಬಹುಶಃ ೪೦ ವರ್ಷದ ನನ್ನ ಮುಂಬೈ ಜೀವನದಲ್ಲಿ ಅವರ ವ್ಯಂಗ್ಯ ಚಿತ್ರಾಂಕಣ ಮಾಡಿರುವ ಮೋಡಿ ಅನನ್ಯ !

Taxonomy upgrade extras: 

ಮುದ್ದು ರಾಜ ಮದ್ದು ರಾಜ ಒಡೆಯರ್ ಮತ್ತು ಅಗ್ನಿವರ್ಣ

ರಾಜನೆ೦ದರೆ ಭಾರೀ ಮಜ..ನಮ್ಮ ಮೈಸೂರಿನ ಅರಸರು ಯಾವಾಗಲೂ
ಮಾಡಲ್ ಗಳ ಸೆರಗಿನಲ್ಲಿಯೆ ಅವಿತು ಕೊ೦ಡು 'ನಾನೇ ಇನ್ನು ರಾಜ' ಅ೦ತ

Taxonomy upgrade extras: 

ಮಳೆ, ನೆರೆ, ಪರಿಹಾರ

ಸ್ವಲ್ಪ ಸೀರಿಯಸ್ ಆಗಿ ಕಾಣುವಂತೆ ಬರೆದದ್ದು. ಹ್ಯೂಮರ್ ಇಲ್ಲ, ಐರನಿ ಇದೆ. :)

ಎಂದಿನಂತೆ, ಸಂಪೂರ್ಣವಾಗಿ ಕಂಪ್ಯೂಟರಿನಲ್ಲಿಯೇ ಗೀಚಿದ್ದು...

Taxonomy upgrade extras: 

ಯಕ್ಷಪ್ರಶ್ನೆ equivalent!

[:http://sampada.net/node/532|ಈ ಪುಟ ನೋಡಿ]

ಇನ್ನು, ಚಿತ್ರದ ಬಗ್ಗೆ:
* ಸಂಪೂರ್ಣವಾಗಿ ಕಂಪ್ಯೂಟರಿನಲ್ಲಿಯೇ ಗೀಚಿದ್ದು. (ಲಿನಕ್ಸ್ ನಲ್ಲಿ ಇಂಕ್ ಸ್ಕೇಪ್ ಅನ್ನೋ ತಂತ್ರಾಂಶವೊಂದಿದೆ, ಅದನ್ನುಪಯೋಗಿಸಿ ಬರೆದದ್ದು)

Taxonomy upgrade extras: 

ನೋಡಿ ಸ್ವಾಮಿ ನಾವಿರೋದು ಹೀಗೆ...

೨೦೦೩ ರಲ್ಲಿ ಬರೆದದ್ದು. ಆಗ ನನ್ನ ಬಳಿ ಸ್ಕ್ಯಾನರ್ ಇರಲಿಲ್ಲ. ಸ್ನೇಹಿತನೊಬ್ಬನ ಮನೆಯಲ್ಲಿ ಸರ್ಕಸ್ ಮಾಡಿ ಸ್ಕ್ಯಾನ್ ಮಾಡಿದ್ದಾದ್ದರಿಂದ ನೀಲಿ ಬಣ್ಣದ ರೇಖೆಗಳೂ ಚಿತ್ರದೊಡನೆ ಸೇರಿಕೊಂಡು ಬಿಟ್ಟಿವೆ.

Taxonomy upgrade extras: 
Subscribe to ವ್ಯಂಗಚಿತ್ರಗಳು