ಒಂದು ಒಳ್ಳೆಯ ನುಡಿ - 27

ಒಂದು ಒಳ್ಳೆಯ ನುಡಿ - 27

*ನಮಗೆ ತುಂಬಾ ಸಂತೋಷವಾದ ಸಮಯದಲ್ಲಿ ನಾವು ಏನೇನೋ ಹೇಳಿಬಿಡುತ್ತೇವೆ. ಆಗ ನಾಲಿಗೆಯ ಮೇಲೆ ಹಿಡಿತ ಇರುವುದಿಲ್ಲ. ಆಗ ಯಾರಿಗೂ ನಾವು ಮಾತು ಕೊಡಬಾರದು. ಕೋಪ ಬಂದಾಗಲೂ ನಾಲಿಗೆ ಮೇಲೆ ಹಿಡಿತ ಇರುವುದಿಲ್ಲ.ಆಗ ಮಾತಿನ ಧಾಟಿ ತಾಳ ತಪ್ಪುತ್ತದೆ.ಆ ಸಂದರ್ಭದಲ್ಲೂ ನಾವು ಯಾರಿಗೂ ಮಾತು ಕೊಡಬಾರದು.

ವಿಪರೀತ ಬೇಸರ, ಮನಸ್ಸಿಗೆ ನೋವು, ದುಃಖವಾದಾಗ ಯಾವುದೇ ನಿರ್ಧಾರಕ್ಕೆ ಬರುವುದಾಗಲಿ, ತೆಗೆದುಕೊಳ್ಳುವುದಾಗಲಿ ಮಾಡಬಾರದು. ಎಲ್ಲಿಯಾದರೂ ಈ ಸಂದರ್ಭಗಳಲ್ಲಿ ನಿರ್ಧಾರ ಮಾಡಿದರೆ, ಪಡೆಯುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಹಾಗಾಗಿ ನಮ್ಮ ಹಿಡಿತದಲ್ಲಿ ನಾವಿರೋಣ

*ಉತ್ತಮ ಕುಲದಲ್ಲಿ ಹುಟ್ಟಿದ ಮಾತ್ರಕ್ಕೆ ಯಾರೂ ಒಳ್ಳೆಯವರು ಎನಿಸುವುದಿಲ್ಲ. ಶೀಲ ಎನ್ನುವ ಆಭರಣ ಅವನಲ್ಲಿದ್ದರೆ ಮಾತ್ರ ಶೋಭೆ ಆತನಿಗೆ.ಹೇಗೆ ಫಲವತ್ತಾದ ಭೂಮಿಯಲ್ಲಿ ಮುಳ್ಳಿನ ಪೊದೆಗಳು, ಕಳೆಗಿಡಗಳು ಇರುವುದೋ ಹಾಗೆ. ಫಲವತ್ತಾದ ಭೂಮಿಯನ್ನು ಹಾಳುಮಾಡಲು ಅವುಗಳೇ ಸಾಕು.

-ರತ್ನಾ ಭಟ್ ತಲಂಜೇರಿ