ಕಾ.ವೀ.ಕೃಷ್ಣದಾಸ್ ಅವರ ಹನಿಗಳು

ಕಾ.ವೀ.ಕೃಷ್ಣದಾಸ್ ಅವರ ಹನಿಗಳು

ಕವನ

*ಅಮ್ಮ*

ಹೊತ್ತು

ಹೆತ್ತವಳು

ಹೊತ್ತಗೆ!

ಕಾಲ 

ಮಿಂಚಿತು

ಗೊತ್ತಾಗುವ

ಹೊತ್ತಿಗೆ!

***

*ಹಾಯ್ಕು*

ದಯಾಮಯನ

ನೆರಳಲ್ಲೂ ಜಗತ್ತು

ದಯನೀಯವೇ!

***

*ಉರಿ*

ಬೆಳಗಲು

ದೀಪದ ಬತ್ತಿ 

ಉರಿಯಬೇಕು!

ಕೆಲವರಿಗೆ

ಬದುಕಲು

ಊರೇ ಹೊತ್ತಿ

ಉರಿಯಬೇಕು!!

***

*ಹಾಯ್ಕು*

ಹೆಗಲ ಕೊಡಿ

ಹೊಗಳಿ; ಕಾಪಾಡಲಿ

ಮುಳುಗದಂತೆ!

***

*ರುಬಾಯಿ*

ಟೀಕಿಸಿದರೊ ಪೀಡಿಸಿದರೊ ಅವರು ಗಮನ ಕೊಡಲಿಲ್ಲ|

ಜರೆದರೊ ಬರೆದರೊ

ಅವರದಕೆ ಭಯ ಪಡಲಿಲ್ಲ|

ಅವರದೇ ಲೋಕ ಅವರದೇ ಮಾಯಾಜಾಲ|

ಜುಟ್ಟು ಗಟ್ಟಿ ಹಿಡಿದರು ಬಿಟ್ಟು ಬಿಡಲಿಲ್ಲ|

***

*ರುಬಾಯಿ*

ತಪ್ಪುಗಳ ತಪ್ಪಿಯೂ ಹುಡುಕದಿರಿI

ಅಲ್ಲದ ಶಿಷ್ಯರಿಗೆ ತಿದ್ದುವ ಗುರುವಾಗದಿರಿ|

ಮೂಗಿನ ನೇರಕ್ಕೆ ಮಾಡಿದ್ದೇ ಸರಿಯಂತೆ|

ತಿದ್ದದಿರಿ ನೋಡಿಯೂ ಕುರುಡಾಗಿ ತೆಪ್ಪಗಿರಿ|

- *ಕಾ.ವೀ.ಕೃಷ್ಣದಾಸ್* ಕೊಂಚಾಡಿ

 

ಚಿತ್ರ್