ಗಾಂಧೀ ಹತ್ಯೆ ಮತ್ತು ನಾನು

ಗಾಂಧೀ ಹತ್ಯೆ ಮತ್ತು ನಾನು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಗೋಪಾಲ ಗೋಡ್ಸೆ ಕನ್ನಡಕ್ಕೆ: ಮಾರ್ತಾಂಡ ಲಿಂಗೋ ಕುಲಕರ್ಣಿ
ಪ್ರಕಾಶಕರು
ಗೋಪಾಲ ಗೋಡ್ಸೆ, ೭೫೪/ ಸದಾಶಿವ ಪೇಠ, ಕುಮಠೇಕರ ಮಾರ್ಗ, ಪುಣೆ-೪೧೧ ೦೩೦
ಪುಸ್ತಕದ ಬೆಲೆ
ರೂ. ೯೦

ಭಾರತದ ಸ್ವಾತಂತ್ರ್ಯದ ನಂತರ ನಡೆದ ಅತ್ಯಂತ ದೊಡ್ಡ ದುರ್ಘಟನೆಯೆಂದರೆ ಮಹಾತ್ಮಾ ಗಾಂಧೀಜಿಯವರ ಹತ್ಯೆ. ಈ ಹತ್ಯೆಯನ್ನು ಮಾಡಿದರು ನಾಥೂರಾಮ ಗೋಡ್ಸೆ ಮತ್ತು ಅವರ ಸಂಗಡಿಗರು. ೧೯೪೮ರ ಜನವರಿ ೩೦ರಂದು ನಾಥೂರಾಮ ಗೋಡ್ಸೆ ಮಹಾತ್ಮರ ಹತ್ಯೆ ಮಾಡಿದ ನಂತರ ೧೫ ನವೆಂಬರ್ ೧೯೪೯ರಂದು ನ್ಯಾಯಾಲಯವು ಲಭ್ಯ ಸಾಕ್ಷ್ಯಾಧಾರಗಳ ಅಡಿಯಲ್ಲಿ ನಾಥೂರಾಮ ಗೋಡ್ಸೆ ಮತ್ತು ನಾರಾಯಣ ಆಪ್ಟೆಯವರನ್ನು ಅಂಬಾಲ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸಲಾಗುತ್ತೆ, ಈ ಹತ್ಯಾ ಕಾಂಡದಲ್ಲಿ ನಾಥೂರಾಮ ಗೋಡ್ಸೆಯ ಕಿರಿಯ ಸಹೋದರ ಗೋಪಾಲ ಗೋಡ್ಸೆಯೂ ಅಪರಾಧಿ ಎಂದು ನ್ಯಾಯಾಲಯವು ತೀರ್ಮಾನಿಸಿ ಅಜನ್ಮ ಗಡಿಪಾರಿನ ಶಿಕ್ಷೆಗೆ ಗುರಿ ಮಾಡುತ್ತದೆ. ೧೯೬೪ರಂದು ಶಿಕ್ಷೆ ಮುಗಿಸಿ ಹೊರಗೆ ಬಂದ ಇವರು ಗಾಂಧೀ ಹತ್ಯೆಯ ಹಿಂದಿನ ಕಾರಣಗಳು, ತೀರ್ಮಾನಗಳು ಇವುಗಳ ಬಗೆಗೆ ತಮ್ಮ ಅನಿಸಿಕೆಯನ್ನು ಬರೆದು ಪುಸ್ತಕ ರೂಪದಲ್ಲಿ ಮೊದಲು ಮರಾಠಿ (ಗಾಂಧಿ ಹತ್ಯಾ ಅಣಿ ಮಿ) ಯಲ್ಲಿ ಪ್ರಕಟವಾಗುತ್ತದೆ. ನಂತರ ಹಿಂದಿ (ಗಾಂಧಿ ವಧ್ ಔರ್ ಮೈ) ಯಲ್ಲಿ ಪ್ರಕಟವಾದ ಪುಸ್ತಕವನ್ನು ಮಾರ್ತಾಂಡ ಲಿಂಗೋ ಕುಲಕರ್ಣಿಯವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. 

ಇದರಲ್ಲಿ ಗೋಪಾಲ ಗೋಡ್ಸೆಯವರು ತಮ್ಮ ಅಣ್ಣ ನಾಥೂರಾಮ ಗೋಡ್ಸೆಯ ಬಗ್ಗೆ ಬರೆದಿದ್ದಾರೆ. ಗಾಂಧಿಯನ್ನು ಕೊಲ್ಲಲೇ ಬೇಕೆಂಬ ನಿರ್ಧಾರಕ್ಕೆ ಯಾಕೆ ಬರಬೇಕಾಯಿತು? ಎಂಬೆಲ್ಲ ವಿಷಯಗಳು ಒಳಗೊಂಡಿದೆ. ಗಾಂಧಿ ಹತ್ಯೆಯ ಸಂಚು ರೂಪಿಸಿದವರೆಲ್ಲರ ಅಪರೂಪದ ಛಾಯಾಚಿತ್ರಗಳು ಹಾಗೂ ನಾಥೂರಾಮ ಗೋಡ್ಸೆಯ ಅಂತಿಮ ಮರಣ ಪತ್ರ (ವಿಲ್) ವೂ ಇದರಲ್ಲಿ ಇದೆ. ಈ ಪುಸ್ತಕದ ಮಾರಾಟವನ್ನು ಹಿಂದೊಮ್ಮೆ ಪ್ರತಿಬಂಧಿಸಿದ್ದರು. ೨೦೦೪ರಲ್ಲಿ ಪ್ರಥಮ ಮುದ್ರಣ ಕಂಡಿದೆ.