ದಪ್ಪ ಅವಲಕ್ಕಿ ಒಗ್ಗರಣೆ

ದಪ್ಪ ಅವಲಕ್ಕಿ ಒಗ್ಗರಣೆ

ಬೇಕಿರುವ ಸಾಮಗ್ರಿ

ದಪ್ಪ ಅವಲಕ್ಕಿ ೧ ಕಪ್, ಟೊಮೆಟೋ ೧ , ನೀರುಳ್ಳಿ ೧, ಒಣ ಮೆಣಸು ೨-೩, ಅರಸಿನ ಹುಡಿ ಅರ್ಧ ಚಮಚ, ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ ತಲಾ ೧ ಸಣ್ಣ ಚಮಚ, ರುಚಿಗೆ ಉಪ್ಪು, ಎಣ್ಣೆ, ಕರಿಬೇವಿನ ಸೊಪ್ಪು, ಖಾರ ಬೇಕಿದ್ದಲ್ಲಿ ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು

 

ತಯಾರಿಸುವ ವಿಧಾನ

ಮೊದಲಿಗೆ ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಬೌಲ್ ನಲ್ಲಿ ಹಾಕಿಡಿ. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾದ ಬಳಿಕ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ,ಕರಿಬೇವಿನ ಸೊಪ್ಪು, ಜೀರಿಗೆ, ಒಣಮೆಣಸು, ಸಣ್ಣದಾಗಿ ಕತ್ತರಿಸಿದ ನೀರುಳ್ಳಿ ಹಾಕಿ. ನೀರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಅದಕ್ಕೆ ದಪ್ಪ ಅವಲಕ್ಕಿ, ಟೋಮೇಟೋ, ಅರಸಿನ ಹುಡಿಯನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಬೇಯಲು ಬಿಡಿ. ಬೆಂದ ನಂತರ ತಕತ್ತರಿಸಿದ ಕೊತ್ತಂಬರಿಸೊಪ್ಪನ್ನು ಹಾಕಿ. ಬಿಸಿ ಬಿಸಿಯಾಗಿ ತಿನ್ನಿರಿ. (ಜಾಸ್ತಿ ಖಾರ ಬೇಕಿದ್ದಲ್ಲಿ ಸ್ವಲ್ಪ ಮೆಣಸಿನ ಹುಡಿಯನ್ನು ಸೇರಿಸಬಹುದು, ಸ್ವಲ್ಪ ಸಿಹಿ ಬೇಕಿದ್ದಲ್ಲಿ ಸಕ್ಕರೆ ಸೇರಿಸಬಹುದು)