ಯೋಗ ಮತ್ತು ಧ್ಯಾನಗಳಿಂದ ಆರೋಗ್ಯ

ಯೋಗ ಮತ್ತು ಧ್ಯಾನಗಳಿಂದ ಆರೋಗ್ಯ

ಇಂದಿನ ಆಧುನಿಕ ಜಗತ್ತಿನ ಈ ಒತ್ತಡದ ವಾತಾವರಣದಲ್ಲಿ ನೆಮ್ಮದಿ, ಶಾಂತಿ, ಎನ್ನುವುದು ಬಹುತೇಕರ ಪಾಲಿಗೆ ಮರೀಚಿಕೆ ಯಾಗಿದೆ. ನೆಮ್ಮದಿ ಪಡೆಯ ಬೇಕಾದರೆ, ದೈವ ಚಿಂತನೆ ಅಗತ್ಯವಾಗಿ ಬೇಕು. ಆಧ್ಯಾತ್ಮಿಕ ಚಿಂತನೆಗಳ ಸಾರದಲ್ಲಿ ಮುಳುಗಬೇಕು. ಹಿಂದಿನ ಕಾಲದಲ್ಲಿ ಆತ್ಮೋಧ್ದಾರಕ್ಕಾಗಿ ತಪಸ್ಸು ಮಾಡಲು ಯೋಗ, ಧ್ಯಾನಾಸಕ್ತರಾಗಲು ಮನೆ - ಮಠ ಬಿಟ್ಟು ಕಾಡಿಗೆ ತೆರಳುತ್ತಿದ್ದರು.

ಇಲ್ಲಿ ಧ್ಯಾನವೆಂದರೆ ಬೇರೆ-ಬೇರೆ  ರೀತಿಯಲ್ಲಿರುವುದು. ಶಾರೀರಿಕವಾದ ಧ್ಯಾನ ಮತ್ತು ಆಂತರಿಕವಾದ ಧ್ಯಾನ ಶಾರೀರಿಕವಾದ ಧ್ಯಾನವು ಯೋಗಾಸನವಾಗಿದೆ. ಈ ಯೋಗವು ಶಾರೀರಿಕವಾಗಿ, ಆರೋಗ್ಯವನ್ನು ತಂದುಕೊಡುವುದು.

ಇದಕ್ಕೆ ಶಾರೀರಿಕ ಯೋಗವೆಂದೂ, ಆಂತರಿಕ ಧ್ಯಾನ ಇದಕ್ಕೆ ತಪಸ್ಸು ಎನ್ನುವರು. ಇದಕ್ಕಾಗಿ ಹಿಂದೆ, ಮನೆ - ಮಠ ಬಿಟ್ಟು ದೂರ ಹೋಗಿ ಕಠಿಣವಾದ ತಪಸ್ಸು ಮಾಡುತ್ತಿದ್ದರು. ಇವರಿಗೆ ಹಠಯೋಗಿಗಳು ಎನ್ನುವರು. ಇದನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ.

ಸಂಸಾರದಲ್ಲಿ ಇದ್ದುಕೊಂಡೇ ಯೋಗ- ಧ್ಯಾನದಲ್ಲಿರುವುದಕ್ಕೆ ಸಹಜ ರಾಜಯೋಗ ಎನ್ನುವರು. ಈ ರಾಜಯೋಗವನ್ನು ಯಾರು ಬೇಕಾದರೂ ಮಾಡಬಹುದು. ಅವರವರ ಶಕ್ತಿಗೆ ಅನುಸಾರವಾಗಿ, ಸಿದ್ದಿಯಾಗುವುದು. ಎಲ್ಲವೂ ಪೂರ್ವ ಜನ್ಮದ ಸುಕೃತ ಫಲದಂತೆ. ಇದನ್ನು ಮಾಡಲು ಸಂಸಾರವನ್ನು ಬಿಡಬೇಕೆಂದಿಲ್ಲ. ಯಾವುದನ್ನೂ ಬಿಡದೇ ಉತ್ತಮ ಮಾರ್ಗದಲ್ಲಿ ನಡೆಯುತ್ತಾ ಸದಾ ಪರಮಾತ್ಮನ ನೆನಪಿನಲ್ಲಿರುವುದು ಎಂದು ಇದಕ್ಕೆ ಸಹಜ ರಾಜಯೋಗವೆಂದು ಹೇಳುವುದು.

ಅಂದರೆ, ಗೃಹಸ್ಥರಾಗಿ ಇದ್ದುಕೊಂಡು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿರುವಂತೆ ಕರ್ಮದ ಫಲವನ್ನು ಅವನಿಗೆ ಒಪ್ಪಿಸಿ ನಿರ್ಲಿಪ್ತರಾಗಿರುವುದು.

ಚಿತ್ರ : ಇಂಟರ್ನೆಟ್ ಸಂಗ್ರಹ

(ಸಾರ ಸಂಗ್ರಹ)