ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 28, 2024
ವೃತ್ತಿಯಲ್ಲಿ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಈಗ ನಿವೃತ್ತಿ ಜೀವನವನ್ನು ಅನುಭವಿಸುತ್ತಿರುವ ರತ್ನಾ ಕೆ ಭಟ್ ತಲಂಜೇರಿ (ರತ್ನಕ್ಕ) ಇವರು ಬರೆದ ಗಝಲ್ ಗಳ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. “ಗಝಲ್ ಬರವಣಿಗೆಯಲ್ಲಿ ನುರಿತವಳು ನಾನಲ್ಲ" ಎಂದು ಪ್ರಾಮಾಣಿಕವಾಗಿಯೇ ಹೇಳುವ ರತ್ನಕ್ಕ ಇದುವರೆಗೆ ಬರೆದ ಗಝಲ್ ಗಳನ್ನೆಲ್ಲಾ ಸೇರಿಸಿ ಸಂಕಲನದ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಇವರ ಸಹೋದರ ಹಾಗೂ ಸಾಹಿತಿ ಹಾ ಮ ಸತೀಶ ಮತ್ತು ಕಥಾಬಿಂದು ಪ್ರಕಾಶನದ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 26, 2024
ಜೂಲ್ಸ್ ವೆರ್ನ್, ಫ್ರೆಂಚ್ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವವರಲ್ಲಿ ಪ್ರಮುಖರು. ಇವರ ’ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ತ್’ ಎಂಬ ರೋಚಕವಾದ ಕೃತಿಯ ಸಂಗ್ರಹಾನುವಾಗಿದೆ ಈ ಕೃತಿ. ಇದನ್ನು ಎಂ. ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿ ಮೊದಲು ಪ್ರಕಟವಾದದ್ದು ೧೯೭೯ರಲ್ಲಿ. ಆಗ ಅದನ್ನು ಪ್ರಕಾಶಿಸಿದ್ದು ಬೆಂಗಳೂರಿನ ಜಗತ್ ಸಾಹಿತ್ಯ ಮಾಲೆ ಇವರು. ಈಗ ಕನ್ನಡ ಅನುವಾದ ಸಾಹಿತ್ಯ ಅಕಾಡೆಮಿಯವರು ಮರು ಮುದ್ರಣ ಮಾಡಿದ್ದಾರೆ. ಈ ಬಗ್ಗೆ ಈ ಮಾಲಿಕೆಯ ಪ್ರಧಾನ…
ಲೇಖಕರು: Kavitha Mahesh
ವಿಧ: ರುಚಿ
February 25, 2024
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿಮೆಣಸಿನ ಕಾಯಿ, ಈರುಳ್ಳಿ, ಟೊಮ್ಯಾಟೋ, ದೊಣ್ಣೆ ಮೆಣಸಿನಕಾಯಿಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣಕ್ಕೆ ಶುಂಠಿ ತುರಿ, ಜೀರಿಗೆ ಹುಡಿ, ಹುಣಸೆ ರಸ, ನಿಂಬೆ ರಸ, ಸಕ್ಕರೆ, ಉಪ್ಪು, ಚಾಟ್ ಮಸಾಲೆ ಹಾಕಿ ಕಲಕಿ ಒಲೆಯಿಂದ ಇಳಿಸಿರಿ. ಈ ಮಿಶ್ರಣಕ್ಕೆ ಇಡ್ಲಿ ತುಂಡುಗಳು, ಖಾರಾ ಸೇವ್, ಬೂಂದಿ ಕಾಳು, ಹಾಕಿ ಚೆನ್ನಾಗಿ ಕಲಕಿ. ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪುಗಳಿಂದ ಅಲಂಕರಿಸಿ, ರುಚಿಯಾದ ಇಡ್ಲಿ ಚಾಟ್ ತಿನ್ನಿ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 23, 2024
'ಮುದ್ರಾ ಪ್ರವೇಶ' ಎಂಬ ಕೃತಿಯು ಯೋಗಮುದ್ರಾ ವಿಜ್ಞಾನವನ್ನು, ಮುದ್ರೆಗಳನ್ನು ಅಭ್ಯಸಿಸುವ ಕ್ರಮವನ್ನು ಬಣ್ಣಿಸಿರುವ ಕೃತಿ. ಸಾಮಾನ್ಯ ಓದುಗನಿಗೂ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ ಕೆ ರಂಗರಾಜ ಅಯ್ಯಂಗಾರ್ ಇವರು. ಈ ಕೃತಿಯಲ್ಲಿ ಅಧ್ಯಾತ್ಮಿಕ ಮುದ್ರೆಗಳು, ಶಾಸ್ತ್ರೀಯ ಹಾಗೂ ಪೂಜಾ ಮುದ್ರೆಗಳು, ಶ್ರೀ ಗಾಯತ್ರೀ ಮುದ್ರೆಗಳು, ಚೈತನ್ಯದಾಯೀ ಮುದ್ರೆಗಳು, ದೇವತಾ ಮುದ್ರೆಗಳು, ಚಿಕಿತ್ಸಾ ಮುದ್ರೆಗಳು, ಹಠಯೋಗ ಮುದ್ರೆಗಳು, ನರ್ತನ ಮುದ್ರೆಗಳು, ತಪ್ತ ಮುದ್ರೆಗಳು ಇತ್ಯಾದಿಗಳ ಬಗ್ಗೆ ಸವಿವರ ಹಾಗೂ…
ಲೇಖಕರು: kmurthys
ವಿಧ: ಬ್ಲಾಗ್ ಬರಹ
February 23, 2024
ನಗನಾಣ್ಯ ಇರಲೇನು ಝಣಝಣಣ ಎನ್ನುತಲಿ ನಗೆಯು ಇಲ್ಲದಿರೆ ಜೀವನವು ಭಣಭಣವು | ಬಗೆಬಗೆಯ ಚಿಂತೆಗಳ ಹಗುರದಲಿ ತೇಲಿಸುವ ನಗೆ ಎಂದಿಗೂ ಇರಲಿ ಪರಮಾತ್ಮನೆ ||  
ಲೇಖಕರು: kpbolumbu
ವಿಧ: ಬ್ಲಾಗ್ ಬರಹ
February 22, 2024
ಜಗದ ಕನ್ನಡಿಯೊಳಾ ತೋರಿಕೆಯನಿರಗೊಡುತ ತನ್ನೊಳಿರವಿನ ನಿಜವ ತೋರ್ದಡಿಯ ಪೊಡಮಡುತ | ನಿದಿರೆಯಿಂದೆಚ್ಚರಿತು ತನ್ನಿರವಿನಚ್ಚರಿಯ ತಾನು ತಾನರಿಯೆ ಬಗೆಯ ತೋರ್ದಡಿಯ ಪೊಡಮಡುತ || ೧ ||   ಮೊಳಕೆಯೊಳಗಣ ಆ ಮುಗುಳುಗಳು ಬಿರಿವಡೆದು ತನ್ನೊಳಚ್ಚರಿಯನಿರಗೊಟ್ಟಡಿಯ ಪೊಡಮಡುತ | ದೇಶಕಾಲಗಳದೀ ತೋರಿಕೆಯನಣಿಗೊಳಿಸಿ ನಿರ್ವಿಕಲ್ಪವ ಮಾರ್ಪಡಿಪಡಿಯ ಪೊಡಮಡುತ || ೨ ||   ಮಿಡಿತವದೊಂದರಿಂದೀಯಿದರನಳಗೊಳಿಸಿ ಈಯಿದದೆಂಬುದನರಿಯಗೊಟ್ಟಡಿಯ ಪೊಡಮಡುತ | ನಿಜದರಿವನಿರಗೊಡುತ ಇಳೆಯೊಳಾ ಪರಮವನು ಮರುವಾರಿ ಬಾರಗೊಡದಡಿಯ …
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
February 21, 2024
ಛಂದ ಪುಸ್ತಕ 2009ನೇ ಸಾಲಿನ ಬಹುಮಾನ ಪಡೆದ ಕಥಾಸಂಕಲನ ಇದು. ಕಥಾಸ್ಪರ್ಧೆಯ ತೀರ್ಪುಗಾರರಾದ ಅಮರೇಶ ನುಗಡೋಣಿ ಹತ್ತಾರು ಕತೆಗಾರರ ಸುಮಾರು 100 ಕತೆಗಳನ್ನು ಓದಿ, ಇದನ್ನು ಆಯ್ಕೆ ಮಾಡಿದ್ದಾರೆ. "ತೀರ್ಪುಗಾರರ ಮಾತಿ”ನಲ್ಲಿ ಅವರು ಹೀಗೆ ಬರೆದಿದ್ದಾರೆ: “ಈ ಸಂಕಲನದಲ್ಲಿ ಹನ್ನೆರಡು ಕಥೆಗಳಿವೆ. ಹತ್ತು ವರ್ಷಗಳ ಅವಧಿಯಲ್ಲಿ ಈ ಕಥೆಗಳು ರಚನೆಯಾಗಿವೆ. ಸಂದೀಪ ನಾಯಕರ ಕಥೆಗಳು ಸಮಾನತೆಯನ್ನು ಕಾಯ್ದುಕೊಂಡಿವೆ. ಪಾತ್ರಗಳ ಸೃಷ್ಟಿಯಲ್ಲಾಗಲಿ, ಸನ್ನಿವೇಶಗಳ ನಿರ್ಮಾಣದಲ್ಲಾಗಲಿ, ಉದ್ಭವಿಸುವ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 21, 2024
ಜಯಶ್ರೀ ಕದ್ರಿಯವರ ನೂತನ ಕವನ ಸಂಕಲನ ‘ಕೇಳಿಸದ ಸದ್ದುಗಳು'ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಯತ್ರಿಯಾದ ಎಂ ಆರ್ ಕಮಲ. ಅವರ ಪ್ರಕಾರ “ಜಯಶ್ರೀ ಕದ್ರಿಯವರಿಗೆ ಕವಿತೆಯೆನ್ನುವುದು ತುದಿ ಬೆರಳಿಗಂಟಿದ ಪರಾಗ. ಹೂವಿನ ಘಮಲು. ರಾಗವೊಂದನ್ನು ಜೀವದಲ್ಲಿ ಮೆಲ್ಲನೆ ಅರಳಿಸುವ ಸೋಜಿಗ. ಒಳಗಿನ ಕುದಿತ,ಇರಿತಗಳಿಂದ ಬಿಡುಗಡೆಯನ್ನು ಪಡೆವ ಹಾದಿ. ನಿಶ್ಯಬ್ಧಕ್ಕೆ ಶಬ್ಧವನ್ನು ತುಂಬುವ, ಭಾವಕ್ಕೆ ಪದಗಳನ್ನು ನೇಯುವ ಬೆಡಗು. ಲೆಕ್ಕವಿಡದೆ ಕತ್ತಲಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 19, 2024
ವಿವಿದ ಲೇಖಕರಿಂದ ಬರೆಯಲ್ಪಟ್ಟ ಚೈನಾ ಮತ್ತು ಜಪಾನ್ ದೇಶದ ಪ್ರಸಿದ್ಧ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಅನುವಾದಕರಾದ ನೀಲತ್ತಹಳ್ಳಿ ಕಸ್ತೂರಿ ಇವರು. ಈ ಪುಸ್ತಕವನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ಹೊರತಂದಿದ್ದಾರೆ. ಈ ಕೃತಿಯಲ್ಲಿ ೮ ಕಥೆಗಳಿವೆ.  ಮೊದಲ ಕಥೆ ಹಾನನ ಅಕೃತ್ಯ ಇದರ ಮೂಲ ಲೇಖಕರು ಷಿಗೆ ನಯೋಯ. ಇವರು ಆಧುನಿಕ ಜಪಾನಿನ ಅತಿ ಪ್ರಮುಖ ಹಾಗೂ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬರು. ಅವರ ಬರಹಗಳಲ್ಲಿ ಅಸಾಧಾರಣವಾದ ಒಂದು ಚೆಲುವು ಹಾಗೂ ಸೂಕ್ಷ್ಮ ದೃಷ್ಟಿಗಳ…
ಲೇಖಕರು: Kavitha Mahesh
ವಿಧ: ರುಚಿ
February 18, 2024
ಮೈದಾಹಿಟ್ಟು, ಅರಸಿನ, ಮೆಣಸಿನ ಹುಡಿ, ಜೀರಿಗೆ, ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸಬೇಕು. ಅದಕ್ಕೆ ಹಿಟ್ಟಿನ ಮಿಶ್ರಣದಲ್ಲಿ ಬಾಳೆಕಾಯಿಗಳನ್ನು ಅದ್ದಿ ಬೋಂಡಾದಂತೆ ಕರಿಯಬೇಕು. ಈಗ ರುಚಿ ರುಚಿಯಾದ ಬಾಳೆಕಾಯಿ ಕಬಾಬ್ ಸವಿಯಲು ಸಿದ್ಧ. ಸಾಸ್ ಅಥವಾ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.