ಎಲ್ಲ ಪುಟಗಳು

ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
May 03, 2006
ಹೊಸ ಮುಗುಳ್ನಗೆಯೊಂದಿಗೆ ಬಂದಿರುವ ಸಂಪದ ಚೆನ್ನಾಗಿದೆ. ಸಂಪದದ ಮೊದಲ ಆವೃತ್ತಿಗೆ ನನ್ನ ಮನಸ್ಸು ಹೊಂದಿಕೊಂಡುಬಿಟ್ಟಿದೆಯಾದ್ದರಿಂದ ಸ್ವಲ್ಪ ಕಷ್ಟವೆನ್ನಿಸಿತು. ಆದರೂ ಪರ್ವಾಗಿಲ್ಲ. ಹೊಸ ಆವೃತ್ತಿ ಆಕರ್ಷಕವಾಗಿ ಕಣ್ಣಿಗೆ ತಂಪಾಗಿ ಕಾಣುತ್ತಿದೆ. ಕನ್ನಡದ ಕೈಂಕರ್ಯ ಇನ್ನೂ ಹೆಚ್ಚು ಬಲಯುತವಾಗಿ ಮುಂದುವರೆಯಲಿ. ನಾನು ಒಬ್ಬ ವೃತ್ತಿಪರ ಚಿತ್ರವಿನ್ಯಾಸಕಾರ. ನೀವು ಮಾಡುತ್ತಿರುವ ಭುವನೇಶ್ವರಿಯ ಸೇವೆಯಲ್ಲಿ ಪಾಲ್ಗೊಳ್ಳಲು ನನಗೇದರೂ ಅವಕಾಶವಿದೆಯೇ? ಎನಗಿಂತ ಕಿರಿಯರಿಲ್ಲ ರಘುನಂದನ
ಲೇಖಕರು: ನಿರ್ವಹಣೆ
ವಿಧ: Basic page
April 26, 2006
ಈ ಪುಟವನ್ನು ೩, ಮೇ, ೨೦೧೭ ರಂತೆ ಆರ್ಕೈವ್ ಮಾಡಲಾಗಿದೆ. ಈ ಪುಟದ ಹೊಸ ಆವೃತ್ತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.    ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ. ಕನ್ನಡದಲ್ಲಿ ಬರೆಯಿರಿ - (ಯೂನಿಕೋಡ್ ಬಳಸಿ ಕನ್ನಡ ಲಿಪಿಯಲ್ಲಿ ಬರೆಯಿರಿ). ಲೇಖನಗಳಲ್ಲಿ ಸಂವಹನ ಮತ್ತು ವ್ಯಾಕರಣಗಳೆರಡನ್ನೂ ಸಾಧ್ಯವಾದಷ್ಟು ಗಂಭೀರವಾಗಿ ಪರಿಗಣಿಸಿ ಬರೆಯಿರಿ. ನಿಮ್ಮ ಬರಹ ಅಥವಾ ಪ್ರತಿಕ್ರಿಯೆಗಳು ಹೊಸ ಸಂವಾದವನ್ನು ತೆರೆಯುವಂತಿರುವುದು ಉತ್ತಮ. ಹಾಗೆಂದು…
ಲೇಖಕರು: shreekant.mishrikoti
ವಿಧ: ಚರ್ಚೆಯ ವಿಷಯ
April 26, 2006
ಬೆಳ್ದಿಂಗಳು ಮತ್ತು ಕರ್ದಿಂಗಳು ನನಗೆ ಗೊತ್ತಿರ್ಲಿಲ್ಲ ; ನಿಮಗೆ ? ಬೆಳದಿಂಗಳು ಶುಕ್ಲಪಕ್ಷಕ್ಕೆ ಕನ್ನಡ ಪದ ; ಕರ್ದಿಂಗಳು ಕೃಷ್ಣಪಕ್ಷಕ್ಕೆ ! ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಕರ್ದಿಂಗಳು ಪ್ರಯೋಗ ಇದೆಯಂತೆ! ಬೆಳದಿಂಗಳು ಚಂದ್ರನ ಬೆಳಕಾಗಿ ಅರ್ಥಾಂತರ ಹೊಂದಿ ಕರ್ದಿಂಗಳು ಮಾಯವಾಗಿದೆಯಂತೆ!
ಲೇಖಕರು: shreekant.mishrikoti
ವಿಧ: Basic page
April 25, 2006
ಅಮೇರಿಕದ ಅಧ್ಯಕ್ಷ ಅಬ್ರಹಾಮ್ ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರದ ಕೆಲವು ಭಾಗ. ಎಲ್ಲ ಮನುಷ್ಯರೂ ನೀತಿವಂತರಲ್ಲ ಮತ್ತು ಸತ್ಯಾಚರಣೆ ಉಳ್ಳವರಲ್ಲ ಎಂದು ಅವನು ಕಲಿಯಬೇಕು . ಆದರೆ ಪ್ರತಿಯೊಬ್ಬ ದುಷ್ಟನಿಗೂ ಪ್ರತಿಯಾಗಿ ಗುಣಶಾಲಿ ನಾಯಕನಿರುತ್ತಾನೆ , ಪ್ರತಿಯೊಬ್ಬ ಸ್ವಾರ್ಥಿ ರಾಜಕಾರಣಿಗೂ ಪ್ರತಿಯಾಗಿ ಆದರ್ಶಗಳಿಗೆ ತನ್ನನ್ನು ಸಮರ್ಪಿಸಿಕೊಂಡ ಜನನಾಯಕನೊಬ್ಬನಿರುತ್ತಾನೆ ಎಂಬುದನ್ನು ಅವನಿಗೆ ಕಲಿಸಿ. ಶತ್ರುಗಳಿರುವಂತೆಯೇ ಮಿತ್ರರೂ ಇರುತ್ತಾರೆ ಎಂಬುದನ್ನು ಅವನಿಗೆ ಕಲಿಸಿ .…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 25, 2006
ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ 'ಆರ್ಯ'ರವರು ಬರೆದ 'ಭಾಷೆ, ಧರ್ಮ, ದೇಶ ಮುಂತಾದ ಗಡಿಗಳನ್ನು ನಯಗೊಳಿಸಿದ' ಒಂದು ಕಥೆ ಇದೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ. ಕ್ರಿಸ್ಟಲ್ ರೀಡಿಂಗ್ , ಟಾರಟ್ ಕಾರ್ಡ್ , ಕಾಲಗಣನೆ ಕುರಿತ ಲೇಖನಗಳು ಇಲ್ಲಿವೆ. ಮುಖ್ಯವಾಗಿ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿನ ಶಿಕ್ಷಣ , ವೈದ್ಯಕೀಯ , ಕೈಗಾರಿಕೋದ್ಯಮ , ಪ್ರವಾಸೋದ್ಯಮ, ಬ್ಯಾಂಕಿಂಗ್ ರಂಗಗಳಲ್ಲಿನ ಅದ್ಭುತ ಸಾಧನೆಗಳ ಬಗ್ಗೆ ಸ್ವಲ್ಪ ಹೆಚ್ಚೇ ಅನಿಸುವಷ್ಟು ( ೧೦೦ ಪುಟ !!) ಇದೆ. ಸೆಲ್…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 25, 2006
ಸದ್ಯದಲ್ಲಿ ಜನರು ಬರೆಯುತ್ತಿರುವ ಕವನಗಳ ಕುರಿತು ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ ಒಂದು ಕವಿತೆ ಇದೆ, ಸುಮತೀಂದ್ರ ನಾಡಿಗರದು . ಕವನ ಬರೆವ ಹವ್ಯಾಸವುಳ್ಳವರು ತಪ್ಪದೇ ಗಮನಿಸಬೇಕು . ಅಲ್ಲಿಯ ಕೆಲವು ಸಾಲುಗಳು ಹೀಗಿವೆ . ಗಳಿಗೆಗಳಿಗೆಯೂ ಹುಟ್ಟುತ್ತಾವೆ ಅಸಂಖ್ಯ ಕವಿತೆಗಳು ಅಲ್ಪಾಯುಷಿಗಳಿದ್ದಲ್ಲಿ ಜನನ ಸಂಖ್ಯೆಯು ಜಾಸ್ತಿ . ಉಪಮಾನ ರೂಪಕ, ಸಂಕೇತ, ಛಂದಸ್ಸು ಇವುಗಳಿಗೆ ಗೊತ್ತಿಲ್ಲ ನೋಡಿ ನಕ್ಕಿರಬಹುದು , ಕುವೆಂಪು ಬೇಂದ್ರೆ .. ... ದಾವಾಗ್ನಿ ಬಡಬಾಗ್ನಿ ಎರಡೂ ಒಂದೇ…
ಲೇಖಕರು: venkatesh
ವಿಧ: Basic page
April 24, 2006
ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * ! ಸಾರಾಂಷ : ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ ಕ್ರಾಂತಿ,' ಹತ್ತಿಯ ನೂಲು ತಯಾರಿಸಲು ಸೃಶ್ಟಿಸಿದ 'ಸ್ಪಿನ್ನಿಂಗ್ ಜೆನ್ನಿ,' ಯಿಂದಲೇ ಆರಂಭವಾಗಿರುವುದು, ಎಲ್ಲರಿಗೂ ತಿಳಿದ ಸಂಗತಿ. ! ಹತ್ತಿ ಬೆಳೆಯ ಗುಣ ಸಂವರ್ಧನೆಯಲ್ಲಿ ಅನೇಕಾನೇಕ 'ತಳಿ ತಾಂತ್ರಿಕತೆ' ಗಳ ಚಾರಿತ್ರ್ಯಿಕ ಹಿನ್ನೆಲೆಗಳನ್ನು ಗಮನಿದರೆ, ಈ ಬೆಳೆಯ ಗುಣ ಸಂವರ್ಧನೆಗೆ ವಿಶ್ವದಾದ್ಯಂತ ನಡೆಸಿದ '…
ಲೇಖಕರು: vijayaraghavan
ವಿಧ: ಬ್ಲಾಗ್ ಬರಹ
April 23, 2006
ನನ್ನ ಕನಸಿನಲ್ಲಿ ಅನಂತಮೂರ್ತಿ ಅನಂತಮೂರ್ತಿ ರಾಜ್ಯ ಸಭೆಯ ಚುನಾವಣೆಗೆ ಸ್ಪರ್ಧಿಸಿದ್ದರಲ್ಲ, ಆಗ ನನಗೊಂದು ಕನಸು ಬಿತ್ತು.ಅವರು ಕೋಲಾರದ ಟೇಕಲ್‌ ರೋಡಿನ ಮೂಲೆಯೊಂದರಲ್ಲಿ, ನಮ್ಮ ಮನೆಯ ಹತ್ತಿರವೇ ಒಂದು ದಿನಸಿ ಅಂಗಡಿ ತೆರೆದಿದ್ದರು.ನನಗೋ ಆ ದೇಶ, ಈ ದೇಶ ಸುತ್ತಿ ಸಾಹಿತ್ಯ, ಸಂಸ್ಕೃತಿ ಮಾತಾಡಿ ಬರೆದುಕೊಂಡಿರುವ ಅನಂತಮೂರ್ತಿ ಇದೇಕೆ ಹೀಗೆ ಮಾಡಿದರು ಅಂತ ಕುತೂಹಲ. ಪಾಪ,ಜಾಗತೀಕರಣದ ವ್ಯಾಪಾರದ ವಿಚಾರ ಮಾತ್ರ ಮಾತಾಡಿ ಗೊತ್ತಿರುವ ಅನಂತಮೂರ್ತಿ ಇಲ್ಲಿ ಏನು ವ್ಯಾಪಾರ ಮಾಡುತ್ತಾರೆ? ಟೋಪಿ…
ಲೇಖಕರು: venkatesh
ವಿಧ: Basic page
April 23, 2006
ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು ! ಈ ತಿಂಗಳ ೨೪ ರಂದು ಡಾ. ರ್‍ಆಜ್ ಕುಮಾರ್ ಹುಟ್ಟಿದಹಬ್ಬ. ೭೭ ವರ್ಷಗಳು ತುಂಬಿ ೭೮ ಕ್ಕೆ ಕಾಲಿರಿಸುತ್ತಾರೆ. ಕನ್ನಡದ ಕೋಟಿ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಅವರು ನಟ ರಾಜ್ ಆಗಿ ಮೆರೆದ ವರ್ಷಗಳು ಅನನ್ಯ. ಅವರೀಗ ಭೌತಿಕವಾಗಿ ಕಾಣಿಸದಿದ್ದರೂ ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ! ಆ ಕ್ಷಣಗಳನ್ನು ಸ್ಮರಿಸಲು ಬರೆದ ಭಾವಪೂರ್ಣ 'ಶ್ರಧ್ಧಾಂಜಲಿ' ಇದು. ಪಾರ್ಕಿನೊಳು ಕುಳಿತೆದ್ದೆ ಥಟ್ಟನು ಲಿಯಿತು ಮನವು…
ಲೇಖಕರು: ಶ್ರೀನಿಧಿ
ವಿಧ: ಚರ್ಚೆಯ ವಿಷಯ
April 23, 2006
ಹಾಲು ಚೆಲ್ಲಿದಂತಿದ್ದ ವಿಶಾಲವಾದ ಅಂಗಳ. ತಾಯಿಯ ನೀಲಿ ಸೀರೆಯ ಹಿಂದೆ ಅಡಗಿಕೊಳ್ಳುವ ಮುದ್ದು ಮಗುವಿನಂತೆ ಕಾರ್ಮೋಡಗಳಡೆಯಿಂದ ಬೆಳದಿಂಗಳನ್ನು ಚೆಲ್ಲುತ್ತಿರುವ ಹುಣ್ಣಿಮೆ ಚಂದ್ರ. ಈ ಸನ್ನಿವೇಶದಲ್ಲಿ ನನಗೇ ಗೊತ್ತಿಲ್ಲದಂತೆ ನನ್ನ ಕಿವಿ-ಮನಸ್ಸುಗಳನ್ನು ಅವಳು ಸೂರೆಗೊಂಡಳು. ನಂತರ ತಿಳಿಯಿತು ಅವಲ ಹೆಸರು ಸುಚರಿತ್ರಾ ಎಂದು. ಇದೇನಿದು ಯಾವುದೋ ಪ್ರೇಮಕಥೆ ಅಂದ್ಕೋಬೇಡಿ ಮತ್ತೆ. ಹಿಂದಿನ ತಿಂಗಳು ಸಂಜಯ್ ಸುಬ್ರಮಣ್ಯಂ ಅವರ ಕಛೇರಿಯಲ್ಲಿ ಕೇಳಿದ ರಾಗ. ವಿಶೇಷ ಏನು ಅಂತಿರಾ?? ಇದನ್ನು ನಾನು ಮುಂಚೆ…