ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 24, 2023
ಇದು ಕೂಡ archive.org ತಾಣದಲ್ಲಿದೆ. ಇದರಲ್ಲಿ ನಾನು ಗಮನಿಸಿದ ವಿಷಯಗಳು ಮೂರು ..  ೧) ಗಂಗಾ ನದಿಯನ್ನು ಸ್ವರ್ಗದಿಂದ ಭಗೀರಥನು ಭೂಮಿಗೆ ಇಳಿಸಿದ ಬಗ್ಗೆ ಪುರಾಣಗಳಲ್ಲಿ ಕೇಳಿದ್ದೇವೆ. ಆದರೆ ಈ ಗಂಗಾ ನದಿಯ ಉಗಮ ಸ್ಥಾನದಲ್ಲಿ ಹುಟ್ಟಿದ ಅನೇಕ ನದಿಗಳು ಭಾರತದತ್ತ ಹರಿಯದೆ ಇತರ ದೇಶಗಳಲ್ಲಿ ಹರಿಯುತ್ತವಂತೆ,  ಆದರೆ ಒಂದು ನದಿಯು ಭಾರತದತ್ತ ಹರಿದು ಗಂಗಾ ನದಿ ಆಗಿ ಉತ್ತರ ಭಾರತದ ಜೀವ ನಾಡಿಯಾಗಿದೆ. ಆ ನದಿಯು ಭಾರತದ ಕಡೆ ಹರಿಯಲು ಮಾನವ ಪ್ರಯತ್ನವೇ ಕಾರಣ ಎಂಬುದು ಆ ಸ್ಥಳವನ್ನು ನೋಡಿದರೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 22, 2023
ನನ್ನ ಹಿಂದಿನ post ನಲ್ಲಿ ಈ ಮಾಸಪತ್ರಿಕೆಯ ಬಗ್ಗೆ ಬರೆದಿದ್ದೇನೆ. ಅದರ ಜನವರಿ 1962ರ ಸಂಚಿಕೆಯೂ ಅಂತರ್ಜಾಲದಲ್ಲಿ ಇದೆ. ಅಲ್ಲಿ ನನಗೆ ಇಷ್ಟವಾದ ಐದು ವಾಕ್ಯಗಳು - ನಿತ್ಯವೂ ಬೆಳಗಿನಲ್ಲಿ ಎದ್ದ ಕೂಡಲೇ ಮುಖ ತೊಳೆದುಕೊಳ್ಳು ವಂತೆ ಮನಸ್ಸನ್ನು ಸ್ವಚ್ಛಮಾಡಿ ಕೊಳ್ಳುವುದೂ ನಿನ್ನ ಕರ್ತವ್ಯವಲ್ಲವೇ? ನೀನು ನಿನ್ನ ಸ್ಥಿತಿ ಸುಧಾರಿಸಿ ಕೊಳ್ಳುವ ಪ್ರಯತ್ನ ಮಾಡದೇ ಕೃತಿ ಸುಧಾರಿಸುವ ಪ್ರಯತ್ನ ಮಾತು. ಕೃತಿ ಸುಧಾರಿಸಿದಾಗ ಪರಿ ಸ್ಥಿತಿ ತಾನೇ ಸುಧಾರಿಸುತ್ತಿದೆ. ಮಹತ್ವದ ಹೊಣೆಗಾರಿಕೆ ಕಾರ್ಯದಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 22, 2023
ನಕ್ಕರೆ ಅದೇ ಸ್ವರ್ಗ ! ನಗಬೇಕು, ನಗೆ ಬೇಕು ಬರಡು ಬದುಕಿನಲ್ಲಿ ! ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿಮದ್ದು ಇನ್ನೊಂದಿಲ್ಲ ! ಈ ಧಾವಂತದ ದಿನಗಳಲ್ಲಿ  ನಗುವನ್ನು ಮರೆಯುವಂತೆಯೇ ಇಲ್ಲ. ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ ‘ನಗೆ ತುಂತುರು' ತುಣುಕುಗಳನ್ನು ರಚಿಸಿರುವ ಶ್ರೀ ಎಸ್ ಎನ್ ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಖ್ಯಾತ ನಗೆ ಬರಹಗಾರರು, ಕಚಗುಳಿಯಾಡಿಸಿ ನಗಿಸುವಂಥ ಈ ತುಣುಕುಗಳಿಗೆ ಶ್ರೀ ಹರಿಣಿ ಸೊಗಸಾದ ಚಿತ್ರ ರಚಿಸಿದ್ದಾರೆ. ನಿಮ್ಮ ನಗು ಬರಿಯ ಮುಗುಳಿನಲ್ಲಿ…
ಲೇಖಕರು: Kavitha Mahesh
ವಿಧ: ರುಚಿ
December 22, 2023
ತುರಿದ ಬೀಟ್ ರೂಟ್, ಅರ್ಧ ಕಪ್ ಹಾಲು, ಬಾದಾಮಿ ಚೂರು, ಸಕ್ಕರೆ, ಐಸ್ ತುಂಡು ಹಾಕಿ ಮಿಕ್ಸಿಯಲ್ಲಿ ಒಂದು ಸುತ್ತು ತಿರುಗಿಸಿ ನಂತರ ಉಳಿದ ಹಾಲನ್ನು ಹಾಕಿ ಸರಿಯಾಗಿ ಬೆರೆಸಿ ಗ್ಲಾಸಿಗೆ ಹಾಕಿ ಸವಿಯಿರಿ. ಈ ಪಾನೀಯದಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ. ಇದು ಆರೋಗ್ಯದಾಯಕ ಮತ್ತು ಉತ್ತಮ ಪಾನೀಯವಾಗಿದೆ.  
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 20, 2023
ಎಸ್.ಕೆ. ಮಂಜುನಾಥ್ ಅವರ 'ಗಾಳಿಯ ಎದೆಸೀಳಿ ಹೊರಟ ಹಕ್ಕಿ' ಎಂಬ ಈ ೭೬ ಪುಟಗಳ ಪುಟ್ಟ ಕವನ ಸಂಕಲನದಲ್ಲಿ ನಲವತ್ತೆರಡು ಕವಿತೆಗಳಿವೆ. ಹಿರಿಯ ಲೇಖಕ ಮಹಾದೇವ ಶಂಕನಪುರ ಅವರು ಕವಿ ಎಸ್.ಕೆ. ಮಂಜುನಾಥ್ ಅವರ ಕವನ ಸಂಕಲನ ‘ಗಾಳಿಯ ಎದೆಸೀಳಿ ಹೊರಟ ಹಕ್ಕಿ’ ಗೆ ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ.... “ಕವಿ ಎಸ್.ಕೆ. ಮಂಜುನಾಥ್ ಈಗಾಗಲೇ 'ಎದೆಗಿಲಕಿ' ಸಂಕಲನದ ಮೂಲಕ ಕಾವ್ಯಕ್ಷೇತ್ರದಲ್ಲಿ ಕೃಷಿ ಮಾಡಿದವರು, ಕನ್ನಡ ಕಾವ್ಯಲೋಕದಲ್ಲಿ ತಮ್ಮದೇ ವಿಶಿಷ್ಟ ಹೆಜ್ಜೆಗುರುತುಗಳನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 18, 2023
ಸದಾನಂದ ಎನ್ ಪಾಟೀಲ್ ಅವರು ನಿರೂಪಿಸಿರುವ “ಸತ್ಯಾಗ್ರಹಿ" ಎನ್ನುವ ಕೃತಿಯು ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಸಮರ್ಪಿಸಿದ ಅಭಿನಂದನಾ ಗ್ರಂಥ. ಹುಲ್ಲೂರು ಗ್ರಾಮದ ಶ್ರೀ ಸಂಗನಬಸಯ್ಯ ಹಿರೇಮಠ ಅವರ ಮಗ ಶ್ರೀ ಕೇದಾರಲಿಂಗಯ್ಯ ಅವರು ಪ್ರಾರಂಭದಿಂದಲೂ ಬಡವರ ಪರವಾದ, ರೈತರ ಪರವಾದ, ನ್ಯಾಯದ ಪರವಾದ, ಹೋರಾಟಗಳನ್ನು ಮಾಡುತ್ತಲೆ ಬೆಳೆದವರು ಎನ್ನುವುದು ಕೃತಿಗೆ ಮುನ್ನುಡಿಯನ್ನು ಬರೆದ ಪ್ರೊ. ಎಚ್.ಟಿ. ಪೋತೆ ಅವರ ಮಾತು. ಅವರು ಬರೆದ ಮುನ್ನುಡಿಯ ಆಯ್ದ ನುಡಿಗಳು ಇಲ್ಲಿವೆ… “ಶ್ರೀ ಕೇದಾರಲಿಂಗಯ್ಯ…
ಲೇಖಕರು: Kavitha Mahesh
ವಿಧ: ರುಚಿ
December 17, 2023
ಕಡಲೆ ಹಿಟ್ಟಿಗೆ ಅಚ್ಚ ಖಾರದ ಹುಡಿ, ಬೇಕಿಂಗ್ ಪೌಡರ್, ಓಂಕಾಳು, ಇಂಗು, ಬೆಣ್ಣೆ, ಉಪ್ಪು ಮೊದಲಾದ ಎಲ್ಲಾ ವಸ್ತುಗಳನ್ನು ಸೇರಿಸಿ ಗಟ್ಟಿಯಾಗಿ ಕಲಸಿಡಿ. ಚಕ್ಕುಲಿ ಒರಳಿಗೆ ಖಾರಾ ಸೇವ್ ನ ಬಿಲ್ಲೆ ಹಾಕಿ ಮಿಶ್ರಣವನ್ನು ತುಂಬಿ ಕಾದ ಎಣ್ಣೆಯಲ್ಲಿ ಕರಿದು ತೆಗೆದರೆ ರುಚಿಯಾದ ಖಾರಾ ಸೇವ್ ರೆಡಿ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 15, 2023
ಉದಯೋನ್ಮುಖ ಲೇಖಕರಾದ ಮಂಜಯ್ಯ ದೇವರಮನಿ ಇವರು ತನ್ನ ನೂತನ ಕೃತಿ “ಬಿಟ್ಟು ಬಂದಳ್ಳಿಯ ನೆನಪುಗಳು” ಯಲ್ಲಿ ತಮ್ಮ ಊರಿನ ನೆನಪುಗಳನ್ನು ಕೆದಕಲು ಹೊರಟಿದ್ದಾರೆ. ಗ್ರಾಮೀಣ ಬದುಕು ಆಧುನಿಕತೆಯತ್ತ ವಾಲುತ್ತಿದೆ ಎನ್ನುವ ಲೇಖಕರು ತಮ್ಮ ಕೃತಿಗೆ ಬರೆದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು...  “ಚಿಕ್ಕಯ್ಯ ಊರಿನಿಂದ ಬಂದಿದ್ದರು. ತಿಂಗಳಿಗೋ ಆರು ತಿಂಗಳಿಗೋ ಏನಾದರೂ ಒಂದು ಕೆಲಸದ ನಿಮಿತ್ತ ಬೆನ್ನೂರಿಗೆ ಬರುತ್ತಿರುತ್ತಾರೆ. ಜಮೀನಿನ ಕಾಗದಪತ್ರ ಮಾಡಿಸಲೋ... ದನದ ವ್ಯಾಪಾರಕ್ಕೋ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 13, 2023
ಈಗಾಗಲೇ ‘ಬದುಕ ಬದಲಿಸುವ ಕತೆಗಳು' ಪುಸ್ತಕದ ಮೊದಲನೇ ಭಾಗ ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿರುವ ಕತೆಗಳು ನಮ್ಮ ಬದುಕಿನ ಕತೆಗಳಂತೆಯೇ ಇವೆ ಎಂಬ ಅಭಿಮಾನದಿಂದ ಕೊಂಡು ಓದಿದವರು ಅದರ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದರು. ಡಾ. ಶಶಿಕಿರಣ್ ಶೆಟ್ಟಿ ಅವರ ‘ಬದುಕ ಬದಲಿಸುವ ಕತೆಗಳು' ಕೃತಿಯ ಎರಡನೇ ಭಾಗ ಇತ್ತೀಚೆಗೆ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ೬೦ ಕತೆಗಳಿದ್ದರೆ, ಎರಡನೇ ಭಾಗದಲ್ಲಿ ೧೦೪ ಕತೆಗಳಿವೆ. ಭಾವನಾತ್ಮಕ ರೀತಿಯ ಕತೆಗಳನ್ನು ಓದುವವರಿಗೆ ಸುಗ್ಗಿಯೇ ಸರಿ.  ಹಿಂದಿನ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 11, 2023
‘ವೇಶ್ಯೆ’ ಎಂಬ ಪದವನ್ನು ಕೇಳಿದೊಡನೆಯೇ ಬಹಳಷ್ಟು ಮಂದಿ ಅಸಹ್ಯಕರ ಭಾವವನ್ನು ಮೂಡಿಸಿಕೊಳ್ಳುತ್ತಾರೆ. ಒಂದು ಹೆಣ್ಣು ವೇಶ್ಯೆಯಾಗಲು ನೂರಾರು ಕಾರಣಗಳು ಸಿಗುತ್ತವೆ. ಬಡತನ, ಅನಕ್ಷರತೆ, ಪ್ರೇಮ ವೈಫಲ್ಯ, ಬಲವಂತ, ಶೋಕಿ ಜೀವನದ ಆಸೆ, ಕಾಮದ ಹಂಬಲ, ಸುಲಭದಲ್ಲಿ ಸಿಗುವ ಹಣ, ದೊಡ್ದ ವ್ಯಕ್ತಿಗಳ ಸಂಪರ್ಕ ಹೀಗೆ ಹತ್ತು ಹಲವಾರು ಕಾರಣಗಳು ಸಿಕ್ಕೇ ಸಿಗುತ್ತವೆ. ನಮ್ಮ ಸಮಾಜ ವೇಶ್ಯಾವೃತ್ತಿಯನ್ನು ಅತ್ಯಂತ ಕೀಳು ಕೆಲಸವೆಂದು ಹೇಳಿಕೊಂಡರೂ, ಶತಶತಮಾನಗಳಿಂದಲೂ ಇದು ಇನ್ನೂ ನಿವಾರಣೆಯಾಗದೇ ಮುಂದುವರಿದುಕೊಂಡು…