ಒಂದು ಹಾಡು ಮತ್ತು ಒಬ್ಬ ಪ್ರಧಾನಿ

ಒಂದು ಹಾಡು ಮತ್ತು ಒಬ್ಬ ಪ್ರಧಾನಿ

 

ನನ್ನ ಹಾಡುಗಳ ಸಂಗ್ರಹವನ್ನು ನೋಡುತ್ತಿದ್ದಾಗ ಅದರಲ್ಲಿ Hello , Rajiv Gandhi  ಎಂಬ ಹೆಸರಿನ ಇಂಗ್ಲೀಷ್ ಹಾಡು ಸಿಕ್ಕಿತು. 

ಅದು ರೇಮೋ ಫರ್ನಾಂಡಿಸ್ಎಂಬ fusion ಸಂಗೀತಗಾರ  1991 ರಲ್ಲಿ ಬರೆದು ಸಂಗೀತ ಸಂಯೋಜಿಸಿ  ಹಾಡಿದ ಹಾಡು.  

ಮೊದಲು ಕನ್ನಡದಲ್ಲಿ  ಅನುವಾದ , ನಂತರ ಇಂಗ್ಲೀಷ್ ಮೂಲ . ಯಾಕಂದರೆ ಕನ್ನಡಕ್ಕೆ ತಾನೆ ಮೊದಲ ಮಣೆ ?. 

 

ಹಲೋ ರಾಜೀವ್ ಗಾಂಧಿ, ನಿನಗೆ ದೇಶದ ಅತ್ಯುನ್ನತ ಸ್ಥಾನದಲ್ಲಿದ್ದಾಗ ಹೇಗನಿಸಿತು ?

ದೇಶದ ಆಡಳಿತ ಸೂತ್ರಗಳನ್ನು 
ಮುಂದುವರಿಕೆಯ ಸಂಕೋಲೆಗಳು
ನಿನ್ನ ಕೈಗೆ 
ಒತ್ತಾಯದಿಂದ ಹಾಕಿದಾಗ ಏನನಿಸಿತು ?
ಅವರು ನಿನ್ನನ್ನು ಒತ್ತಾಯದಿಂದ ಪಟ್ಟಕ್ಕೆ 
ತಳ್ಳಬಾರದಿತ್ತು ಎಂದೆನಿಸಿತೇ
ಅವರು ನಿನ್ನನ್ನು ನಿನ್ನ ಪಾಡಿಗೆ
 ಸಾಮಾನ್ಯ ಮನುಷ್ಯನಾಗಿರಲು 
ಬಿಡಬೇಕಿತ್ತು ಎಂದನಿಸಿತೇ?

ಆದರೆ ಈಗ ತುಂಬಾ ತಡವಾಗಿದೆ, 
ಆದರೆ ನಿನ್ನ .ತಾಯಿನಾಡಿಗೆ 
ನಿನ್ನದೊಂದು ಕರ್ತವ್ಯವಿದೆ 
ಎಂದು ನಂಬಿದೆ, 
ಈ ಬಗ್ಗೆ ನಮಗೆ ಕೆಡುಕೆನಿಸುತ್ತದೆ. 

ಆದರೆ ಈಗ ತುಂಬಾ ತಡವಾಗಿದೆ, 
ಆದರೆ ನಿನ್ನ ತಾಯಿಗೆ 
ನಿನ್ನದೊಂದು ಕರ್ತವ್ಯವಿದೆ 
ಎಂದು ನಂಬಿದೆ, 
ಈ ಬಗ್ಗೆ ನಮಗೆ ಕೆಡುಕೆನಿಸುತ್ತದೆ. 

ಆದರೆ ನಿನಗೆ ಹೇಳಬಯಸುವೆ
ಜೀವನದ  ನದಿಯು ಮುಂದೆ ಹರಿಯುತ್ತದೆ
ಮತ್ತು
 ನಾಟಕ ಮುಂದುವರಿಯುತ್ತದೆ

ಪ್ರಧಾನಮಂತ್ರಿಗಳು ಬರುತ್ತಾರೆ ,
ಪ್ರಧಾನ ಮಂತ್ರಿಗಳು ಹೋಗುತ್ತಾರೆ.
ಕೆಲವರು ನಮ್ಮನ್ನು ಮೇಲಕ್ಕೆ ತೆಗೆದುಕೊಂಡು ಹೋಗುತ್ತಾರೆ
ಮತ್ತೆ ಕೆಲವರು ಕೆಳಕ್ಕೆ.
ಮುಖಂಡರಿಗೆ ಒಂದು ಆರಂಭ ಇರುತ್ತದೆ,
ಒಂದು ಅಂತ್ಯ ಕೂಡ ಇರುತ್ತದೆ

ಆದರೆ ಈ ಬಾರಿ ಮಾತ್ರ 
ನಮಗೆ ಅನಿಸುತ್ತಿದೆ
ನಾವು ಒಬ್ಬ ಗೆಳೆಯನನ್ನು ಕಳೆದುಕೊಂಡೆವು ಅಂತ

ಅವರು ನಿನ್ನನ್ನು ಒತ್ತಾಯದಿಂದ ಪಟ್ಟಕ್ಕೆ 
ತಳ್ಳಬಾರದಿತ್ತು ಎಂದೆನಿಸಿತೇ?
ಅವರು ನಿನ್ನನ್ನು ನಿನ್ನ ಪಾಡಿಗೆ
 ಎಲುಬು ಮಾಂಸಗಳ ಮನುಷ್ಯನಾಗಿರಲು 
ಬಿಡಬೇಕಿತ್ತು ಎಂದೆನಿಸಿತೇ?

ಇಂಗ್ಲಿಷ್ ನಲ್ಲಿ  :-
Hello , Rajiv Gandhi ,  
how did you feel upon  the top of the nation.?

Did you like holding the reigns 
thrust upon you 
by the chains  of continuation
Oh , did you wish , they hadn't push you 
Upon the throne

Did you wish they'd left you alone
to be an ordinary mortal
of your own

But now  it's too late 
And It is a pity 
But you did believe
You had a duty 
towards your mother land 

Yes , It is too late .
And It is a pity 
But you did believe
You had a duty  
  towards your mother 

But telling you
Life moves along
Just like the phoenix, we know
The show  goes on .

Prime ministers come 
Prime ministers go
Some take us high 
Some take us low
Leaders have a beginning
Leaders have an end

 

This time we can't help  feeling ,
that we have lost a friend

did you wish , they hadn't push you 
Upon the throne
Did you wish they'd left you alone
to be an ordinary mortal of flesh and bone. 
..flesh and bone
..flesh and bone. 

ರಾಜೀವ ಗಾಂಧಿ ಈ ದೇಶದ ಪ್ರಧಾನಿ ಆಗಿದ್ದವರು. ಸಾಮಾನ್ಯವಾಗಿ ಪ್ರತಿ ವರುಷ  ಪತ್ರಿಕೆಗಳಲ್ಲಿ ಸಂಪ್ರದಾಯದಂತೆ ಸರಕಾರದ ಜಾಹೀರಾತುಗಳು, ಕಾಂಗ್ರೆಸ್ ಪಕ್ಷದ ವತಿಯಿಂದ ಜಾಹಿರಾತುಗಳು ಕಾಣುತ್ತಿದ್ದವು. ಈ ಸಲ ಏಕೋ ಕಾಣಲಿಲ್ಲ. ಈಗಿನ ಪೀಳಿಗೆಯವರಿಗೆ ಅವರ ಬಗ್ಗೆ ಗೊತ್ತಿರಲಿಕ್ಕಿಲ್ಲ.  ನನ್ನ ಸರೀಕದವರನ್ನು  ಮೇ 21 ರ ವಿಶೇಷ ಏನು ಅಂತ ಕೇಳಿ ನೋಡಿದೆ- ಸುಮಾರು 50 ಜನರಲ್ಲಿ ನಾಲ್ಪರು ಅದು ರಾಜೀವ್ ಗಾಂಧಿಯವರು ಹತ್ಯೆಯಾದ ದಿನ ಅಂತ ಸರಿಯಾಗಿ ಹೇಳಿದರು. ಒಬ್ಬರು- ನನಗಿಂತ ಕೊಂಚ ಕಿರಿಯರು , ಮತ್ತು ಇನ್ನಿಬ್ಬರು - ನನ್ನ ಸರೀಕದವರು - ನನಗೇ ಕೇಳಿದರು. ಉಳಿದವರದು  ಏನೊಂದೂ ಪ್ರತಿಕ್ರಿಯೆ ದೊರೆಯಲಿಲ್ಲ.  ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎಂಬ ಉಕ್ತಿಯೇ ಇದೆಯಲ್ಲ?

Rating
Average: 3 (6 votes)