ಪುಸ್ತಕ ಪರಿಚಯ

April 07, 2023
ಕೆಲ ದಿನಗಳ ಹಿಂದಷ್ಟೇ ಬಂದು ನನ್ನ ಕೈ ಸೇರಿದ 2023 ನೇ ಸಾಲಿನ 'ಈ ಹೊತ್ತಿಗೆ' ಪ್ರಶಸ್ತಿ ಪಡೆದ ಕೃತಿ ವಿನಾಯಕ ಅರಳಸುರಳಿ ಅವರ "ಮರ ಹತ್ತದ ಮೀನು" ಕಥಾ ಸಂಕಲನವನ್ನು ಇಂದು ಓದಿ ಮುಗಿಸಿದೆ. ಅದರ ಕುರಿತಾಗಿ ನನ್ನ ಒಂದಿಷ್ಟು ಅನಿಸಿಕೆಗಳು ಹೀಗಿದೆ... ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರಾದ ಎ.ಆರ್ ಮಣಿಕಾಂತ್ ಸರ್ ಅವರ ಮುನ್ನುಡಿ, ಈ ಹೊತ್ತಿಗೆಯ ಪರಿಚಯ ಮತ್ತು ಅದು ನಡೆಸಿಕೊಂಡು ಬರುತ್ತಿರುವ ಸಾರ್ಥಕ ಕಾರ್ಯಗಳು, ಈ ಕಥಾ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ತೀರ್ಪುಗಾರರ ನುಡಿಗಳು, ನಂತರ…
ಲೇಖಕರು: Ashwin Rao K P
April 06, 2023
ಪ್ರತೀ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಜೆಟ್ ಮಂಡನೆ ಮಾಡುತ್ತವೆ. ಬಹಳಷ್ಟು ಜನ ಸಾಮಾನ್ಯರಿಗೆ ಈ ಬಜೆಟ್ ಅನ್ನು ಅರ್ಥೈಸುವುದೇ ಒಂದು ಸವಾಲ್. ಈ ಬಜೆಟ್ ಬಗ್ಗೆ ಕೆಲವು ಪ್ರಾಥಮಿಕ ಮಾಹಿತಿಗಳನ್ನು ನೀಡಲು ಟಿ ಆರ್ ಚಂದ್ರಶೇಖರ್ ಇವರು ಒಂದು ಪುಸ್ತಕವನ್ನು ಹೊರತಂದಿದ್ದಾರೆ. “ನಮ್ಮ ಆರ್ಥಿಕತೆಯ ಅಭಿವೃದ್ಧಿಯನ್ನು ನಿರ್ಧರಿಸುವ ಒಂದು ಸಾಧನವೆಂದರೆ ವಾರ್ಷಿಕ ಬಜೆಟ್‌, ಬಜೆಟ್ಟಿನ ಬಗ್ಗೆ ಸಾರ್ವಜನಿಕರು ಸಿವಿಲ್ ಸೊಸೈಟಿ ಅರ್ಥ ಮಾಡಿಕೊಳ್ಳಬೇಕಾದುದು ಅಗತ್ಯ. ಬಜೆಟ್ ಜನಪರವಾಗಿದೆಯೋ ಅಥವಾ…
ಲೇಖಕರು: Ashwin Rao K P
April 04, 2023
ಉಲ್ಲಾಸವಾಗಿ, ಸಂತೋಷವಾಗಿರಲು ಯಾರಿಗೆ ತಾನೇ ಆಸೆಯಿರೋದಿಲ್ಲ? ಕೆಲವೊಂದು ಸರಳ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಎಲ್ಲರೂ ಉಲ್ಲಾಸಮಯ ಜೀವನವನ್ನು ಅನುಭವಿಸಲು ಸಾಧ್ಯವಿದೆ ಎನ್ನುತ್ತಾರೆ ‘ಉಲ್ಲಾಸಕ್ಕೆ ದಾರಿ ನೂರಾರು' ಕೃತಿಯ ಲೇಖಕರಾದ ಅಡ್ಡೂರು ಕೃಷ್ಣ ರಾವ್ ಇವರು. ಕೃಷ್ಣ ರಾವ್ ಇವರು ಈಗಾಗಲೇ ತಮ್ಮ 'ಮನಸ್ಸಿನ ಮ್ಯಾಜಿಕ್' ನಂತಹ ಮನೋವೈಜ್ಞಾನಿಕ ಕೃತಿಯ ಮೂಲಕ ಓದುಗರ ಮನ ಗೆದ್ದವರು. ಬರವಣಿಗೆ ಮತ್ತು ಸಂಘಟನೆಯ ಹಾದಿಯಲ್ಲಿ ಬಹುದೂರ ಸಾಗಿ ಬಂದಿರುವ ಶ್ರೀಯುತರು ನಿವೃತ್ತ…
April 02, 2023
ಶಾರದಾ ಮೂರ್ತಿ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಪಲಾಯನ ಮತ್ತು ಇತರ ಕಥೆಗಳು' ಕೃತಿ. ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಶಾರದಾ ಮೂರ್ತಿ ಅವರ ಕೃತಿಯ ಕುರಿತು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ... ಶಾರದಾ ಮೂರ್ತಿಯವರ ಪಲಾಯನ ಕಥಾ ಸಂಕಲನ ಆಶಾಡದ ತುಂತುರು ಮಳೆಯ ತಂಪಿನೊಂದಿಗೆ ಲೋಕಾರ್ಪಣೆಯಾಯಿತು. ಕಥೆಗಳನ್ನು ಓದಿದಾಗ ಶಾರದ ಅವರಲ್ಲಿದ್ದ ಲೇಖಕಿ ಪ್ರಬುಧ್ಧಳಾಗಿದ್ದಾಳೆ. ಇಂತಹ ಅನೇಖ ಸಂಕಲನಗಳು ಅವರಿಂದ ಹೊರಬಂದು ಜನ ಮನ್ನಣೆ ಗಳಿಸುವುದೆಂದು ಅವರ ಮೊದಲ ಕಥೆಯ ಶೀರ್ಷಿಕೆ 'ನಂಬಿಕೆ'…
ಲೇಖಕರು: Ashwin Rao K P
April 01, 2023
ಸು. ರುದ್ರಮೂರ್ತಿ ಶಾಸ್ತ್ರಿಯವರು ಬರೆದ ‘ಮಹೇಶ್ವರಿ’ ಎಂಬ ಕಾದಂಬರಿಗೆ ಆಧಾರವಾದ ಶೂದ್ರಕನ ಸಂಸ್ಕೃತ ನಾಟಕ 'ಮೃಚ್ಛಕಟಿಕ' ಬಹಳ ಪ್ರಸಿದ್ಧವಾದ ಕೃತಿ. ಅದರಲ್ಲಿ ವಸಂತಸೇನೆ ಮತ್ತು ಚಾರುದತ್ತರ ಪ್ರೇಮ ಕಥೆಯೇ ಪ್ರಧಾನವಾದರೂ, ಪರೋಕ್ಷವಾಗಿ ರಾಜಕೀಯ ದುರಾಡಳಿತದ ಒಂದು ಎಳೆ ಗುಪ್ತಗಾಮಿನಿಯಾಗಿದೆ. ಆ ಅಂಶಕ್ಕೆ ಈ ಕಾದಂಬರಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎನ್ನುತ್ತಾರೆ ಲೇಖಕರು. ರುದ್ರಮೂರ್ತಿ ಶಾಸ್ತ್ರಿಯವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ ಇಲ್ಲಿ ನೀಡಲಾಗಿವೆ.…
March 31, 2023
ಇದ್ದವರಿಗಿಂತ ಇಲ್ಲದವರೇ ತಮಗೆ ಮಾಡಿದ ಸಹಾಯವನ್ನ ನೆನಪಿಡುತ್ತಾರೆ ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ತೀರಿಸುತ್ತಾರೆ. ಇದು ಲೋಕದ ನಿಯಮ ಶಾಂತವ್ವ ಈ ನಿಯಮಕ್ಕೆ ಹೊರತಾಗಿರಲಿಲ್ಲ. ಇಂತಹ ಅನೇಕ ಆದರ್ಶ ನುಡಿಗಳನ್ನು ಕಾದಂಬರಿಯ ಉದ್ದಕ್ಕೂ ನೋಡಬಹುದು. "ಮಕ್ಕಳು ಓದಿದ ಟೀಚರ್ ಡೈರಿ" ಒಮ್ಮೇಲೆ ಓದಿಸಿಕೊಂಡು ಹೋಗುವ ಕಾದಂಬರಿ. ವೈ ಜಿ ಭಗವತಿಯವರು ನವರಸಗಳನ್ನು ಬೆರೆಸಿ ಹೆಣೆದ ಮಕ್ಕಳ ಕಾದಂಬರಿ ಇದಾಗಿದೆ. ಈ ಕಾದಂಬರಿಯೂ ಸಮನ್ವಯ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಇದರಲ್ಲಿ ಬರುವ ಪ್ರತಿಯೊಂದು…