ಪುಸ್ತಕ ಪರಿಚಯ

ಲೇಖಕರು: Ashwin Rao K P
February 09, 2024
‘ಭಾವಾಂಬುಧಿ' ಎನ್ನುವ ಅಪರೂಪದ ಷಟ್ಪದಿ ಸಂಕಲನವನ್ನು ರಚಿಸಿದ್ದಾರೆ ಚನ್ನಕೇಶವ ಜಿ ಲಾಳನಕಟ್ಟಿ. ಇವರ ಬಗ್ಗೆ ಹಾಗೂ ಈ ಕೃತಿಯ ಬಗ್ಗೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ. ಮಲ್ಲಾರೆಡ್ಡಿಯವರು. ಇವರು ತಮ್ಮ ಬೆನ್ನುಡಿಯಲ್ಲಿ “ಕನ್ನಡ ಸಾಹಿತ್ಯ ಪರಂಪರೆಗೆ ಸುಮಾರು ೨೦೦೦ ವರ್ಷಗಳ ಸಮೃದ್ಧ ಇತಿಹಾಸವಿದ್ದು, ಕಾವ್ಯ ರಚನೆಯಲ್ಲಿ ಬೇರೆ ಬೇರೆ ಭಾಷೆಗಳಿಗಿಂತ ಉತ್ತಮ ಕಾವ್ಯವನ್ನು ರಚಿಸಿದ ಹೆಮ್ಮೆ ನಮ್ಮದಾಗಿದೆ. ಹಳೆಗನ್ನಡ, ಪೂರ್ವಕನ್ನಡ, ನಡುಗನ್ನಡ…
ಲೇಖಕರು: Ashwin Rao K P
February 07, 2024
ಉದಯೋನ್ಮುಖ ಕಥೆಗಾರ ಸತೀಶ್ ಶೆಟ್ಟಿ ಅವರ ನೂತನ ಕೃತಿ ‘ಕೊನೆಯ ಎರಡು ಎಸೆತಗಳು'. ಈ ಕೃತಿಗೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಹಿರಿಯ ಪತ್ರಕರ್ತರಾದ ಸತೀಶ್ ಚಪ್ಪರಿಕೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಸಾಲುಗಳು -” ಅಜ್ಜ ನೆಟ್ಟ ಹಲಸಿನ ಮರ' ಓದಿ, ಈಗ ‘ಕೊನೆಯ ಎರಡು ಎಸೆತಗಳು' ಕೃತಿಯನ್ನು ಓದಿದರೆ, ಕಥೆಗಾರ ಸತೀಶ್ ಶೆಟ್ಟಿ ವಕ್ವಾಡಿ ಹೊರಟ ಹಾದಿಯ ಜಾಡು ಹಿಡಿಯಬಹುದು. ಅದರಲ್ಲಂತೂ ಅವರದೇ ಊರಿನ, ಕುಂದಾಪುರ ಭಾಷೆಯ ಪೂರ್ಣ ಪರಿಚಯ ಇರುವ ನನಗೆ ಸತೀಶರ ನಡೆ…
ಲೇಖಕರು: Ashwin Rao K P
February 05, 2024
ಅಲ್ಬೇನಿಯಾ ದೇಶದ ಖ್ಯಾತ ಸಾಹಿತಿ ಮಿಲ್ಲೊಶ್ ಜೆರ್ಜ್ ನಿಕೊಲ್ಲಾ ಇವರ ಕಾವ್ಯನಾಮವೇ ಮಿಜೆನಿ. ಇವರು ಬರೆದದ್ದು ಅಲ್ಬೇನಿಯಾ ಭಾಷೆಯಲ್ಲಿ. ಇವರು ಬರೆದ ಪುಟ್ಟ ಕಥೆಗಳ ಸಂಗ್ರಹವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂ ನಂಜುಂಡ ಸ್ವಾಮಿ ಇವರು. ಅಲ್ಬೇನಿಯಾ ಭಾಷೆಯನ್ನು ಅಲ್ಬೇನಿಯಾ ದೇಶದೊಂದಿಗೆ ಅದರ ನೆರೆಯ ದೇಶಗಳಾದ ಕೊಸೊವೊ, ಗ್ರೀಸ್ ಮತ್ತು ಮೆಸೆಡೊನಿಯಾದಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಈ ಭಾಷೆಯು ಇಂಡೋ ಯುರೋಪಿಯನ್ ಭಾಷಾ ಪಂಗಡಕ್ಕೆ ಸೇರಿದೆ. ಅಲ್ಬೇನಿಯಾ ಭಾಷೆಯಲ್ಲಿ ಮೊದಲ ಪುಸ್ತಕವು…
ಲೇಖಕರು: Ashwin Rao K P
February 02, 2024
ಇಮ್ಮಡಿ ಮಡಿಲು’ ಕೆ.ಎನ್. ಗಣೇಶಯ್ಯ ಅವರ ಕಥಾಸಂಕಲನ. ಕ್ರಿ.ಶ. ಏಳನೇ ಶತಮಾನದಲ್ಲಿ ಚಾಲುಕ್ಯರ ಬಾದಾಮಿಯನ್ನು ಗೆದ್ದ ಪಲ್ಲವರ ಸೇನಾಧಿಪತಿ, ಅಲ್ಲಿನ ಅರಮನೆಯಿಂದ ತನ್ನ ರಾಜನಿಗೆ ಅಭಿಮಾನದಿಂದ ಕಳುಹಿಸಿದ ಎರಡು 'ರತ್ನ'ಗಳು ಕೊನೆಗೆ ಆತನಿಗೇ ಮುಳುವಾಗುತ್ತವೆ. ಆ ರತ್ನಗಳಿಂದಾಗಿ ತನ್ನ ಬದುಕಿನ ಕರಾಳ ರಹಸ್ಯವೊಂದರ ಪರಿಚಯವಾದಾಗ, ಸೇನಾಧಿಪತಿ, ಬಾದಾಮಿಯಿಂದಲೇ ತಂದ ಗಣೇಶನ ಮೂರ್ತಿಯಲ್ಲಿ ಮೊರೆ ಹೋಗಿ, ಸನ್ಯಾಸ ಜೀವನ ಸಾಗಿಸುತ್ತಾನೆ. ಆತನಿಗೆ ನೆಮ್ಮದಿ, ಶಾಂತಿ ನೀಡಿದ ಅದೇ ಗಣಪತಿ ಮೂರ್ತಿ, ಸಾವಿರ…
ಲೇಖಕರು: Ashwin Rao K P
January 31, 2024
ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ಹೊರತಂದ ರೂಸಿ ಎಂ ಲಾಲಾ ಅವರ ಕೃತಿಯೇ ‘ಜೀವಕೋಶಗಳ ಸಂಭ್ರಮಾಚರಣೆ' ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಪಿ.ಎಸ್.ಶಂಕರ್ ಇವರು. ಈ ಕೃತಿಯು ಕ್ಯಾನ್ಸರ್ ಮೇಲೆ ವಿಜಯ ಸಾಧಿಸಿದ ಲೇಖಕರ ಅನುಭವದ ಸಾರ. ಕೃತಿಕಾರ ರೂಸಿ ಎಮ್ ಲಾಲಾ ಅವರ ಬಗ್ಗೆ ಬರೆದು ಅವರ ಮುಂದಿನ ಜೀವನಕ್ಕೆ ಶುಭ ಕೋರಿದ್ದಾರೆ ಟಾಟಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ಗಂತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಎಸ್ ಎಚ್ ಅದ್ವಾನಿಯವರು. ಅವರು ತಮ್ಮ ಶುಭಾಶಯದಲ್ಲಿ…
ಲೇಖಕರು: Ashwin Rao K P
January 29, 2024
ಡಿ ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಕವಿತೆಗಳ ಸಂಗ್ರಹ ‘ವಿಷಾದಗಾಥೆ'. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕ, ಕಥೆಗಾರ ಎಸ್. ದಿವಾಕರ್. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿರುವ ಭಾವನೆಗಳ ಆಯ್ದ ಭಾಗ ಇಲ್ಲಿದೆ... “ಅರಿಸ್ಟಾಟಲನ ಪ್ರಕಾರರೂಪಕವೇ ಕಾವ್ಯದ ಬುನಾದಿ. ಒಂದು ವಸ್ತುವನ್ನು ಅಥವಾ ಭಾವವನ್ನು ಇನ್ನಾವುದೋ ವಸ್ತುವಾಗಿ ಅಥವಾ ಭಾವವಾಗಿ ನೋಡದೆ ಹೋದರೆ ನಿಜಕ್ಕೂ ಹೊಸದೇನನ್ನೂ ಕಾಣಿಸಲಾಗದು. ಗೆಳೆಯ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಈ ‘ವಿಷಾದ…