ಕೊಳ್ಳೇಗಾಲದ ಕತ್ತಿ ಹಬ್ಬ !

ಕೊಳ್ಳೇಗಾಲದ ಕತ್ತಿ ಹಬ್ಬ !

ಕೊಳ್ಳೇಗಾಲದಲ್ಲಿ ಶ್ರೀ ರಾಮಲಿಂಗ ಚೌಡೇಶ್ವರಿ
ಕತ್ತಿ ಹಬ್ಬ ದಿನಾಂಕ 22-1-15 ರಿಂದ
1-2ಡ-15 ರವರೆಗೆ ನಡೆಯಲಿದೆ.ಇದನ್ನು
ಶ್ರೀ ಮದ್ದೇವಾಂಗ ಕುಲಭಾಂದವರು
ಆಚರಿಸುತ್ತಾರೆ ಹಿಂದೆ 1951,1962,1982,
1999 ರಲ್ಲಿ ಆಚರಿಸಲಾಗಿತ್ತು. ದೇವಲ
ಮಹರ್ಷಿಗಳು ದೇವ,ದೇವತೆ ಗಳಿಗೆ
ವಸ್ತ್ರಗಳನ್ನು ನೇಯ್ದು ಕೊಡುತ್ತಿದ್ದರಂತೆ.
ರಾಕ್ಷಸರು ದೇವತೆಗಳನ್ನು ವಸ್ತ್ರಹೀನ
ರನ್ನಾಗಿ ಮಾಡಲು ದೇವಲ ಮಹರ್ಷಿ
ಗಳಿಂದ ಹತ್ತಿಯನ್ನು ಕಸಿದುಕೊಂಡರಂ ತೆ.
ಆಗ ಶಿವ,ಪಾರ್ವತಿಯರ ಮೊರೆ ಹೋಗಲು
ಅವರು ದೇವಲ ಮಹರ್ಷಿಗಳಿಗೆ
ಕತ್ತಿಯನ್ನು ಕೊಟ್ಟರಂತೆ. ರಾಕ್ಷರನನ್ನು ಸೋಲಿಸಿ
ವಸ್ತ್ರವನ್ನು ದೇವತೆಗಳಿಗೆ ದೇವಲಮಹಷ್ಷಿಗಳು
ಕೊಟ್ಟರಂತೆ. ಈ ಹಿನ್ನಲೆಯಲ್ಲಿ ಕತ್ತಿ ಹಬ್ಬ
ನಡೆಯುತ್ತಿದೆ. ದಿನಾಂಕ 26-1-15 ರಂದು ಅಲಗು
ಸೇವೆ ಕೊಳ್ಳೇಗಾಲದ ರಾಜಬೀದಿಗಳಲ್ಲಿ
ನಡೆಯಲಿದೆ. ದಿನಾಂಕ 27-1-15 ರಂದು
ಚಂದ್ರ ಮಂಡಲ ರಥೋತ್ಸವವಿದ್ದು ಅಂದು
ಸಹ ಅಲಗು ಸೇವೆ ಇದೆ. ಆಸಕ್ತರು ನೋಡಲು ಬನ್ನಿ.
-ನಾನಾ.ಕೊಳ್ಳೇಗಾಲ !

.