ಮನಸ್ಸಿನ ಪರಿಣಾಮ

ಇಂದು ಮನಸ್ಸಿನ ಪರಿಣಾಮದ ಬಗ್ಗೆ ತಿಳಿದುಕೊಳ್ಳೋಣ. ಪತಂಜಲಿ ಮಹರ್ಷಿಯ ಯೋಗ ಸೂತ್ರದ ಮೂರನೇ ಪಾದ ಸೂತ್ರ 9, 10 ಮತ್ತು 11 ಅದರಲ್ಲಿ ವಿವರಿಸಿದೆ. ಮನಸ್ಸು ಚಲನಶೀಲ. ಪ್ರತಿಕ್ಷಣ ಮನಸ್ಸು ಚಲಿಸುತ್ತದೆ. ಇದರಿಂದಾಗಿ ನಮಗೆ ವಸ್ತುಗಳ ಜ್ಞಾನ ಮತ್ತು ಅನುಭವ ಉಂಟಾಗುತ್ತದೆ. ಈ ರೀತಿ ಚಲನೆ ಇರುವುದರಿಂದ ನಮ್ಮಲ್ಲಿ ಅನೇಕ ಭಾವನೆ, ಕಲ್ಪನೆ ಮತ್ತು ಬಯಕೆ ಉಂಟಾಗುತ್ತದೆ.

Image

ಮಂಕುತಿಮ್ಮನ ಕಗ್ಗದಲ್ಲಿ ದೇವರ ಪರಿಕಲ್ಪನೆ

ಮಾನ್ಯ ಡಿ.ವಿ. ಗುಂಡಪ್ಪನವರ “ಮಂಕುತಿಮ್ಮನ ಕಗ್ಗ" ಬದುಕಿನ ಹಲವು ಪ್ರಶ್ನೆಗಳಿಗೆ ಅಧ್ಯಾತ್ಮದ ನೆಲೆಯಲ್ಲಿ ಉತ್ತರಗಳನ್ನು ಒಳಗೊಂಡಿರುವ ಕನ್ನಡದ ಜ್ಞಾನದ ಖಜಾನೆ.

ಮನುಷ್ಯನನ್ನು ಯಾವಾಗಲೂ ಕಾಡುವ ನಿಗೂಢ ಪ್ರಶ್ನೆ: ದೇವರು ಇದ್ದಾನೆಯೇ? ಎಂಬುದು. ದೇವರು ಇದ್ದಾನೆ ಎನ್ನುವವರು ಆಸ್ತಿಕರು. ದೇವರು ಇಲ್ಲ ಎನ್ನುವವರು ನಾಸ್ತಿಕರು. ಈ ಎರಡೂ ವರ್ಗದವರಿಗೆ ಅದು ಅವರವರ ನಂಬಿಕೆ.

ಈ ಹಿನ್ನೆಲೆಯಲ್ಲಿ, “ಮಂಕುತಿಮ್ಮನ ಕಗ್ಗ”ದ ಹಲವು ಮುಕ್ತಕಗಳು ದೇವರ ಬಗ್ಗೆ ಡಿ.ವಿ.ಜಿ.ಯವರ ನಿಲುವನ್ನು ಸೂಚಿಸುವ ಪರಿ ಅನನ್ಯ. ಮೊದಲ ಐದು ಮುಕ್ತಕಗಳು ದೇವರ ಕುರಿತಾದ ಅವರ ಮನೋಧರ್ಮಕ್ಕೆ ಕನ್ನಡಿ ಹಿಡಿಯುತ್ತವೆ.

Image

ದಾಳಿಂಬೆ ಹಣ್ಣಿನ ನೋಟ ಚೆನ್ನಾಗಿದ್ದರೆ ಮಾತ್ರ ಬೆಲೆ !

ಈ ದಾಳಿಂಬೆ ಹಣ್ಣು ಉಚಿತವಾಗಿ ಕೊಟ್ಟರೂ ಗಿರಾಕಿ ಇಲ್ಲ. ಯಾಕೆ? ನೋಟ ಚೆನ್ನಾಗಿಲ್ಲದಿದ್ದರೂ ಹಣ್ಣು ಚೆನ್ನಾಗಿರುತ್ತದೆ. ಇಲ್ಲಿ ತೋರಿಸಿದ ದಾಳಿಂಬೆ ಹಣ್ಣು ನೋಡಲು ಆಕರ್ಷಕವಾಗಿಲ್ಲ. ಹಾಗಾಗಿ ಉಚಿತವಾಗಿ ಕೊಟ್ಟರೂ ಕೊಳ್ಳುವುದಕ್ಕೆ ಗಿರಾಕಿ ಇಲ್ಲ. ಇದನ್ನು ಹಣ್ಣು ಮಾರುವ ಅಂಗಡಿ, ಸೂಪರ್ ಮಾರ್ಕೆಟ್ ನಲ್ಲಿ ಮಾರಲಿಕ್ಕಾಗುವುದಿಲ್ಲ. ಇದನ್ನು ರೈತರ ಹೊಲದಿಂದ ಕೊಳ್ಳುವವರೂ ಇಲ್ಲ.

Image

ಪರೀಕ್ಷೆ ಬಗ್ಗೆ ಅನಗತ್ಯ ಒತ್ತಡ ಸಲ್ಲದು

ರಾಜ್ಯದಲ್ಲಿ ಮೊನ್ನೆಯಷ್ಟೇ ಪಿಯುಸಿ ಪರೀಕ್ಷೆ ಮುಗಿದಿದೆ. ನಿನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದೆ. ಪರೀಕ್ಷೆಯ ಮೊದಲ ದಿನವೇ ಬೆಳಿಗ್ಗೆ ಶಿವಮೊಗ್ಗ ಜಿಲ್ಲೆಯ ಪರೀಕ್ಷಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಎದುರಾಗಿದೆ.

Image

ಮಂಗನ ಕೈಯಲ್ಲಿ ಮಾಣಿಕ್ಯವಾದ ಇತಿಹಾಸ...

ಇತಿಹಾಸ - ಮಂಗನ ಕೈಯಲ್ಲಿ ಮಾಣಿಕ್ಯ ಎಂದು ಗಾದೆ ಮಾತು.... ನಿಜವಾಗುವ ಮುನ್ನ… ಸದ್ದು ಮಾಡುತ್ತಿರುವ ಚಲನಚಿತ್ರಗಳೆಂಬ ಭ್ರಮಾಲೋಕದ ಪೊರೆ ಕಳಚುವ ಸಮಯ. ದಯವಿಟ್ಟು ಒಂದು ನೆನಪಿಡಿ. ಯಾವುದೇ ಪೌರಾಣಿಕ, ಐತಿಹಾಸಿಕ ಅಥವಾ ವರ್ತಮಾನದ ಸಾಧಕರ ಜೀವನ ಗಾಥೆಯನ್ನು ಅಥವಾ ಘಟನೆಗಳನ್ನು ದೃಶ್ಯ ಮಾಧ್ಯಮದಲ್ಲಿ ಪರಿಪೂರ್ಣವಾಗಿ ಹಿಡಿದಿಡುವುದು ಸಾಧ್ಯವಾಗುವುದಿಲ್ಲ ಅಥವಾ ತುಂಬಾ ಕಷ್ಟ.

Image

ಸ್ಟೇಟಸ್ ಕತೆಗಳು (ಭಾಗ ೯೧೬)- ನೋಟ

ಹೆಜ್ಜೆಗಳನ್ನ ಗಮನಿಸ್ತಾ ಇದ್ದಾನೆ, ತಾಳಕ್ಕೆ ತಕ್ಕ ಹಾಗೆ ಕುಣಿಯುವ ತನ್ನಪ್ಪನ ಹೆಜ್ಜೆಗಳನ್ನ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದಾನೆ.

Image

ನೆನಪುಗಳನ್ನು ಬಿತ್ತಿ ಮರೆಯಾದ ಮಾಣಿಕ್ಯ (ಭಾಗ 2)

ಸಚಿನ್ ಕೇವಲ ಅದ್ಭುತ ಪ್ರತಿಭೆ ಮಾತ್ರವಾಗಿರಲಿಲ್ಲ. ಅವನೊಬ್ಬ ಸ್ವಾಭಿಮಾನಿಯಾಗಿದ್ದ. ತನಗಾಗಿ ಎಂದಿಗೂ ಇತರರ ಮುಂದೆ ಕೈ ಚಾಚುತ್ತಿರಲಿಲ್ಲ. ತನಗಿರುವ ಮಾರಕ ಕ್ಯಾನ್ಸರ್ ಬಗ್ಗೆ ಮತ್ತೊಬ್ಬರಲ್ಲಿ ಹೇಳಿ ಸಿಂಪಥಿ ಗಿಟ್ಟಿಸಿಕೊಳ್ಳುವ ಜಾಯಮಾನವೂ ಅವನದ್ದಲ್ಲ. ಚಂದ್ರಶೇಖರ್ ಸರ್ ಗೆ ಅತನ ಮೇಲೆ ಎಲ್ಲಿಲ್ಲದ ಪ್ರೀತಿ. ಸಚಿನ್ ಬಗ್ಗೆ ಸದಾ ಯೋಚಿಸುತ್ತಿದ್ದ ಅವರು, ಸಚಿನ್ ಗೆ ಏನು ಕೇಳಿದರೂ ಕೊಡಲು ಸಿದ್ಧರಿದ್ದರು.

Image