ನಗೆ ಸಿಂಚನ

ಪುಸ್ತಕದ ಲೇಖಕ/ಕವಿಯ ಹೆಸರು
ಎನ್. ಯಜ್ಞನಾರಾಯಣ ಉಳ್ಳೂರ್
ಪ್ರಕಾಶಕರು
ಬೆನಕ ಪ್ರಕಾಶನ, ಕೋಟೇಶ್ವರ - ೫೭೬೨೨೨, ಕುಂದಾಪುರ
ಪುಸ್ತಕದ ಬೆಲೆ
ರೂ. ೩೫.೦೦, ಮುದ್ರಣ: ೨೦೦೭

ಕಳೆದ ಹಲವಾರು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಯಜ್ಞ ನಾರಾಯಣ ಉಳ್ಳೂರ್ ತಮ್ಮ ಬಿಡುವಿನ ವೇಳೆಯಲ್ಲಿ ಲೇಖನ, ಹಾಸ್ಯ ಲೇಖನಗಳನ್ನು ಬರೆಯುವ ಹವ್ಯಾಸ ಇರಿಸಿಕೊಂಡಿದ್ದಾರೆ. ಈಗಾಗಲೇ ಹಲವು ಹಾಸ್ಯ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವುದು ಹೆಚ್ಚು ಅಪಾಯಕಾರಿ?

ಭ್ರಷ್ಟಾಚಾರವೋ, ವಂಶಾಡಳಿತವೋ, ಜಾತಿ ವ್ಯವಸ್ಥೆಯೋ, ಕೋಮು ದ್ರುವೀಕರಣವೋ, ಹಣ ಬಲವೋ, ತೋಳ್ಬಲವೋ, ಭಾಷಾ ಪ್ರಾಬಲ್ಯವೋ, ಜನಾಂಗೀಯ ವಿಭಜನೆಯೋ ಅಥವಾ ಸರ್ವಾಧಿಕಾರವೋ?

Image

ಸ್ಪರ್ಧೆ

ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಅವಕಾಶ ನೀಡುವ ಉದ್ದೇಶದಲ್ಲಿ ಸ್ಪರ್ಧೆಗಳು ಜರಗುತ್ತವೆ. ಬಹುಮಾನಗಳು, ಹುದ್ದೆಗಳು, ಪ್ರಶಸ್ತಿಗಳು, ಆಡಳಿತಾಧಿಕಾರ ಹೀಗೆ ಅನ್ಯಾನ್ಯ ಅವಕಾಶಗಳಿಗೆ ನಡೆಯುವ ಸ್ಪರ್ಧೆಗಳಲ್ಲಿ ಕೆಲವರು, ಕೆಲವೊಮ್ಮೆ ಒಬ್ಬರು ಅಥವಾ ಇಬ್ಬರು ಮಾತ್ರ ಗೆಲುವಿನ ನಗೆ ಬೀರಬಹುದಾದರೆ, ಸೋಲಿನ ಧಗೆ ಅನುಭವಿಸುವವರು ಹಲವರು ಎಂಬುದು ಖಚಿತ. ಆದರೆ ಸೋತವರಿಗೆ ಏನು ಲಾಭ? ಸೋಲು ಧಗೆಯೇ?

Image

ಸಡಿಲ ಮಾತುಗಳು ತರವಲ್ಲ

ಲೋಕಸಭಾ ಚುನಾವಣಾ ಕಣವು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕಾವೇರುತ್ತಿರುವಂತೆಯೇ ಕೆಲವು ರಾಜಕೀಯ ಮುಖಂಡರ ಸಡಿಲ ಮಾತುಗಳೂ ಹೆಚ್ಚುತ್ತಿರುವುದು ವಿಷಾದನೀಯ. ಚುನಾವಣೆಯಲ್ಲಿ ಗೆದ್ದರೆ ತಾವೇನು ಮಾಡಬಲ್ಲೆವು ಎಂಬ ಗುಣಾತ್ಮಕ ವಿಚಾರವನ್ನು ಮಂಡಿಸುವುದಕ್ಕಿಂತ ಹೆಚ್ಚಾಗಿ ಕೆಲವರು ತಮ್ಮ ವಿರೋಧಿಗಳನ್ನು ವೈಯಕ್ತಿಕವಾಗಿ ಟೀಕಿಸುವ ನಕಾರಾತ್ಮಕ ರಣತಂತ್ರಕ್ಕೆ ಜೋತುಬಿದ್ದಿರುವುದು ಸಲ್ಲದ ನಡವಳಿಕೆ.

Image

ಸ್ಟೇಟಸ್ ಕತೆಗಳು (ಭಾಗ ೯೧೮)- ದೊಡ್ಡವ

ಅವನು ಬೃಹದಾಕಾರದ ವ್ಯಕ್ತಿ. ದೊಡ್ಡ ದೊಡ್ದ ಬೆರಳುಗಳು, ದೊಡ್ಡದಾದ ತಲೆ, ನಾನವನ ಬಳಿ ನಿಂತರೆ ಆತನ ಮೊಣಕಾಲಿನ ಬಳಿಗೆ ಬರುತ್ತೇನೆ. ಜನ ಸೇರುವಲ್ಲಿಗೆ ಆತ ಬಂದೇ ಬರ್ತಾನೆ. ಆದರೆ ನಿಜ ವಿಷಯ ಏನು ಗೊತ್ತಾ ಆತನಿಗೆ ಸ್ವಂತವಾಗಿ ನಡೆದಾಡುವುದಕ್ಕೆ ಸಾಧ್ಯನೇ ಇಲ್ಲ. ಯಾರೋ ಅವನೊಳಗೆ ನಿಂತು ಆತನನ್ನು ನಡೆಸಬೇಕು. ಆತ ನಡೆಯುತ್ತಾ ಹೋಗುವಾಗ ಒಳಗೆ ನಿಂತವನನ್ನ ಯಾರೂ ನೋಡುವುದಿಲ್ಲ.

Image