ಮಾಡಬಾರದ ಮತ್ತು ಮಾಡಬೇಕಾದ ಕೆಲಸ

ಪತಂಜಲಿ ಮಹರ್ಷಿ ಆತ್ಮಜ್ಞಾನ ಆಗುವುದಕ್ಕೆ ಕೈವಲ್ಯ ಎಂದರು. ಅದಕ್ಕೆ ಇನ್ನೊಂದು ಹೆಸರು ಆನ. ಆತ್ಮ ಜ್ಞಾನ ಪಡೆಯುವ ಉಪಾಯಗಳಿಗೆ ಆನೋಪಾಯ ಎಂದು ಕರೆದರು. ಬೌದ್ಧ ಧರ್ಮೀಯರು ಇದಕ್ಕೆ ಬುದ್ಧ ಎನ್ನುವರು. ಅಂದರೆ ತನ್ನನ್ನು ತಾನು ಅರಿಯುವುದು ಎಂದರ್ಥ. ಅದರಲ್ಲಿ ಸಂತೋಷ ಪಡೆಯಬೇಕಾದರೆ, ಮಾಡಬಾರದ ಕೆಲಸ ಮತ್ತು ಮಾಡಬೇಕಾದ ಕೆಲಸಗಳ ಬಗ್ಗೆ ಹೇಳಿದ್ದಾರೆ. ನಾವು ಯೋಗಿಯಾಗಿ ಬಾಳಬೇಕು.

Image

ಮತದಾನದ ಸಮಯದಲ್ಲಿ ವಿವಿ ಪ್ಯಾಟ್ ನ ಉಪಯೋಗವೇನು?

ಕೆಲವು ದಶಕಗಳ ಹಿಂದೆ ಮತದಾನ ಎಂದರೆ ಪೇಪರ್ ಒಂದರಲ್ಲಿ ಮುದ್ರಿಸಿದ ಮತ ಪತ್ರ, ಅದರಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು ಮತ್ತು ಚಿನ್ಹೆ. ನಮ್ಮ ಆಯ್ಕೆಯನ್ನು ನಮೂದಿಸಲು ಒಂದು ಶಾಯಿಯಲ್ಲಿ ಅದ್ದಿದ ಮರದ ತುಂಡು. ಅದನ್ನು ಅಭ್ಯರ್ಥಿಯ ಚಿನ್ಹೆಯ ಮೇಲೆ ಒತ್ತಿದರೆ ಮತದಾನ ಮುಗಿಯಿತು. ನಂತರ ಆ ಮತಪತ್ರವನ್ನು ಒಂದು ಮತ ಪೆಟ್ಟಿಗೆ (ಬ್ಯಾಲೆಟ್ ಬಾಕ್ಸ್) ಯೊಳಗೆ ಹಾಕಬೇಕು.

Image

ಜಾತಿವ್ಯಾಧಿ ಚಿಕಿತ್ಸಕ ಡಾ। ಪದ್ಮನಾಭನ್ ಪಲ್ಪು

ಪುಸ್ತಕದ ಲೇಖಕ/ಕವಿಯ ಹೆಸರು
ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ
ಪ್ರಕಾಶಕರು
ಸನ್ಮತಿ ಚಿಂತನ, ಮೂಡುಬೆಳ್ಳೆ, ಕಾಪು ತಾಲೂಕು, ಉಡುಪಿ - ೪೭೬ ೧೨೦
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೨೨

ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರೂ ಆಗಿರುವ ಪತ್ರಕರ್ತ ಅಶ್ವಿನ್ ಲಾರೆನ್ಸ್ ಇವರು ಬರೆದ ಪುಟ್ಟ, ಆದರೆ ಅಪರೂಪದ ಅದ್ಭುತ ವ್ಯಕ್ತಿಯ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ ‘ಜಾತಿವ್ಯಾಧಿ ಚಿಕಿತ್ಸಕ ಡಾ. ಪದ್ಮನಾಭನ್ ಪಲ್ಪು’. ಈ ಕೃತಿಗೆ ಮಾಹಿತಿಪೂರ್ಣವಾದ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಶ್ರೀರಾಮ ದಿವಾಣರು.

ಈ ಚೌಕಾಸಿ ಸರಿಯೇ…?

ಆಕೆ ಉಪಯೋಗಿಸುವ ಮೊಬೈಲ್‌ ಬೆಲೆ 30000 ಕ್ಕೂ ಹೆಚ್ಚು, ಆಕೆ ಕೈಯಲ್ಲಿ ಹಿಡಿದು ಓಡಾಡುವ  ವ್ಯಾನಿಟಿ ಬ್ಯಾಗ್ ಬೆಲೆ ಸುಮಾರು 5೦00 ದಷ್ಟು, ಆಕೆಯ ಬ್ಯೂಟಿ ಪಾರ್ಲರ್ ಖರ್ಚು ತಿಂಗಳಿಗೆ 5000 ವಾಗುತ್ತದೆ, ಆಕೆ ಓಡಾಡುವ ಕಾರಿನ ಬೆಲೆ 8-10 ಲಕ್ಷಗಳು, ಆಕೆಯ ಗಂಡ ಒಬ್ಬ ಬಿಸಿನೆಸ್ ಮನ್, ಆತ ಓಡಾಡುವುದು 50 ಲಕ್ಷದ ಕಾರಿನಲ್ಲಿ, ಪ್ರತಿಷ್ಟಿತ ಕ್ಲಬ್ ನ ಸದಸ್ಯನಾದ ಆತನ ತಿಂಗಳ ಸಾಮಾನ್ಯ

Image

ಸ್ಟೇಟಸ್ ಕತೆಗಳು (ಭಾಗ ೯೩೬)- ಹೇಳಿದಂತೆ ಮಾಡ

ಅವನೊಬ್ಬ ಅದ್ಭುತ ಪರಿಸರ ಪ್ರೇಮಿ. ತನ್ನ ಮನೆಯ ಸುತ್ತಮುತ್ತ ವಿವಿಧ ರೀತಿಯ ಗಿಡಗಳನ್ನು ಬೆಳೆಸಿದವ, ಪ್ರತಿದಿನವೂ ತಾ ಮಾಡುವ ಕೆಲಸವನ್ನ ತನ್ನ ಮೊಬೈಲ್ ನಲ್ಲಿ, ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳಲ್ಲಿ ಈ ವಿಚಾರಗಳನ್ನು ಹರಡುತ್ತಿದ್ದವ. ಸಿಕ್ಕಿದ ಕಡೆಗಳೆಲ್ಲ ಕಡೆ ಹೋಗಿ ಪರಿಸರನ್ನ ಉಳಿಸುವುದರ ಬಗ್ಗೆ ಮಾತುಗಳನ್ನಾಡುತ್ತಿದ್ದವ.

Image

ಇದು ಯಾರದ್ದೋ ಮನೆಯ ಕಥೆಯಲ್ಲ! ಇದು ಆತ್ಮಕಥೆ !

ನಮ್ಮ ಮನೆ 'ಚಿತ್ರಕೂಟ'ದ ಗೃಹಪ್ರವೇಶದ ದಿನ 'ಶ್ರೀ ರಾಮ ನವಮಿ'. ದಿನಾಂಕ 10-04-2022. ಸಂಪ್ರದಾಯದಂತೆ ತುಳಸೀ ಕಟ್ಟೆಯಲ್ಲಿ ತುಳಸೀಗಿಡ ನೆಟ್ಟು ಪುರೋಹಿತರ ನಿರ್ದೇಶನದಂತೆ "ತುಳಸೀ ಪೂಜೆ" ಮಾಡಿದೆವು. ನಂತರದ ದಿನಗಳಲ್ಲಿ ಆ ತುಳಸೀ ಗಿಡ ಚೆನ್ನಾಗಿ - ಹುಲುಸಾಗಿ - ಸೊಂಪಾಗಿ ಬೆಳೆಯಿತು. ಚಿತ್ರಕೂಟಕ್ಕೆ ಬಂದವರೆಲ್ಲಾ ತುಳಸೀ ಗಿಡ ನೋಡಿ "ವಾವ್" ಅಂದರು!

Image

ಬದುಕು ರೂಪಿಸುವ ಗಟ್ಟಿ ನಿರ್ಧಾರಗಳು

ಪಿಯುಸಿ ಫಲಿತಾಂಶ ಈಗಷ್ಟೆ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ ನಿರ್ಣಾಯಕವಲ್ಲ. ಆದರೆ ವಿದ್ಯಾರ್ಥಿಯ ಭವಿಷ್ಯಕ್ಕೆ ಒಂದು ದಿಕ್ಕನ್ನು ತೋರುವಲ್ಲಿ ಅದು ಬಹುಮುಖ್ಯ ಪಾತ್ರ ವಹಿಸುವುದು ನಿಸ್ಸಂಶಯ. ಆ ನಿಟ್ಟಿನಲ್ಲಿ ಈ ಫಲಿತಾಂಶ ಪೋಷಕರಿಗೆ ತಮ್ಮ ಮಕ್ಕಳ ಮುಂದಿನ ಹಾದಿಯನ್ನು ನಿರ್ಧರಿಸಲು ಪೂರಕ ಪಾತ್ರ ವಹಿಸುತ್ತದೆ.

Image

ಜೋಳದ ಸ್ಪೆಷಲ್ ರೊಟ್ಟಿ

Image

ಒಂದು ಪಾತ್ರೆಗೆ ಎಲ್ಲ ಹಿಟ್ಟಿನ ಜೊತೆಗೆ ತುರಿದ ಸೌತೇಕಾಯಿ, ಹಸಿ ಮೆಣಸಿನಕಾಯಿ ಪೇಸ್ಟ್, ಅರಶಿನ ಹುಡಿ, ಇಂಗು, ಉಪ್ಪು, ಕೊತ್ತಂಬರಿ ಸೊಪ್ಪು ಇವೆಲ್ಲವನ್ನು ಬೆರೆಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿ. ೫ ನಿಮಿಷ ಬಿಟ್ಟು ಕೈಯಿಂದ ತಟ್ಟಿ ರೊಟ್ಟಿ ಮಾಡಿ ಎರಡು ಬದಿ ಕೆಂಪಗೆ ಬೇಯಿಸಿದರೆ ಬಿಸಿ ಬಿಸಿ ರೊಟ್ಟಿ ಸಿದ್ಧ.

ಬೇಕಿರುವ ಸಾಮಗ್ರಿ

ಮೆಕ್ಕೆ ಜೋಳದ ಹಿಟ್ಟು - ೧ ಕಪ್, ಗೋಧಿ ಹಿಟ್ಟು - ೧ ಕಪ್, ಕಡಲೆ ಹಿಟ್ಟು - ೧ ಕಪ್, ಬಿಳಿ ಜೋಳದ ಹಿಟ್ಟು - ೧ ಕಪ್, ತುರಿದ ಸೌತೇ ಕಾಯಿ - ೨ ಕಪ್, ಹಸಿ ಮೆಣಸಿನಕಾಯಿ ಪೇಸ್ಟ್ - ರುಚಿಗೆ ತಕ್ಕಷ್ಟು, ಎಣ್ಣೆ - ಅರ್ಧ ಚಮಚ, ಅರಶಿನ, ಇಂಗು - ಚಿಟಿಕೆಯಷ್ಟು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿಸೊಪ್ಪು