ರಜನೀಶನ ಹುಡುಗಿಯರು

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ ೨೦೨೪

ಖ್ಯಾತ ಪತ್ರಕರ್ತ, ಲೇಖಕ ದಿ. ರವಿ ಬೆಳಗೆರೆ ಅವರ ನೂರನೇ ಪುಸ್ತಕದ ರೂಪದಲ್ಲಿ ‘ರಜನೀಶನ ಹುಡುಗಿಯರು' ಹೊರಬಂದಿದೆ. ಆಚಾರ್ಯ ರಜನೀಶ್ ಅಥವಾ ಭಗವಾನ್ ರಜನೀಶ್ ಅಥವಾ ಓಶೋ ರಜನೀಶ್ ಎಂಬ ವ್ಯಕ್ತಿ ೮೦-೯೦ ರ ದಶಕದಲ್ಲಿ ವಿಶ್ವದಾದ್ಯಂತ ಮಾಡಿದ ಮೋಡಿಗೆ ಸಾಟಿ ಇಲ್ಲ. ರಜನೀಶ್ ಆಶ್ರಮದಲ್ಲಿ ಯಾವುದಕ್ಕೂ ನಿರ್ಭಂಧವಿರಲಿಲ್ಲ. ಹುಡುಗಿಯರು, ಸ್ವಚ್ಛಂದ ಕಾಮ, ಡ್ರಗ್ಸ್, ಹಾಡು, ಸಂಗೀತ, ನೃತ್ಯ ಯಾವುದಕ್ಕೂ ನಿಷೇಧವಿರಲಿಲ್ಲ.

ವಿಶ್ವ ಗುಬ್ಬಚ್ಚಿ ದಿನ - ಮಾರ್ಚ್ 20...

ಒಂದು ಆಶ್ಚರ್ಯಕರ ಸಂಗತಿಯನ್ನು ಕೆಲವರು ಗಮನಿಸಿರಬೇಕು. ಅನೇಕ ಸಾಮಾಜಿಕ ಜಾಲತಾಣಗಳ ಸಾಮಾನ್ಯ ಜನ ಮತ್ತು ಪ್ರಾಣಿ, ಪಕ್ಷಿ, ಪರಿಸರ ಪ್ರೇಮಿಗಳು ಗುಬ್ಬಚ್ಚಿ ದಿನದಂದು ಭಾವುಕರಾಗಿ ಗುಬ್ಬಚ್ಚಿಯನ್ನು ನೆನೆಯುತ್ತಿದ್ದಾರೆ. ಹೆಚ್ಚು ಕಡಿಮೆ ವಿ ಮಿಸ್ ಯು ಗುಬ್ಬಚ್ಚಿ ಎಂದು ಗುಬ್ಬಚ್ಚಿಯ ಆ ಚಿಲಿಪಿಲಿ ಧ್ವನಿಯನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೯೧೨)- ಉಳಿದ ಕತೆ

ಸುಮ್ಮನೆ ಕುಳಿತಾಗ ಕೆದಕುವ ಕೆಲಸ ಬೇಡ, ಹೇಳದೆ ಉಳಿಯುವ ಹಲವು ಕಥೆಗಳು ಪ್ರತಿಯೊಬ್ಬರಲ್ಲೂ ಇರುತ್ತವೆ. ಎಲ್ಲವನ್ನು ಹೇಳುವುದಕ್ಕಾಗುವುದಿಲ್ಲ.

Image

ಇರುವುದೊಂದೇ ಭೂಮಿ !

‘ಹಸಿರೇ ಉಸಿರು’ ಎಂಬ ವಾಕ್ಯದಂತೆ ಹಸಿರಿಲ್ಲದೆ ಉಸಿರಾಡಲು ಗಾಳಿಯಿಲ್ಲ. ಗಾಳಿಯಿಲ್ಲದೆ ಮಾನವ ಸಂಕುಲಕ್ಕೆ ಮಾತ್ರವಲ್ಲದೆ ಸಕಲ ಜೀವಜಾಲಕ್ಕೂ ಉಸಿರಾಟವೂ ಇಲ್ಲ. ಹುಟ್ಟಿನಿಂದ ಸಾವಿನ ತನಕ ಮಾನವ ಸಂಕುಲಕ್ಕೆ ಸಸ್ಯಗಳು ಮತ್ತು ಪರಿಸರ ಬಹಳ ಮುಖ್ಯವೆನಿಸಿದೆ. ಮಾನವ ಸಂಕುಲಕ್ಕೂ ಹೊರತು ಸಕಲ ಜೀವಜಾಲಕ್ಕೂ ಇದು ಅತ್ಯವಶ್ಯಕ. ಇರುವುದೊಂದೇ ಭೂಮಿ ನಮಗೆ - ನಿಮಗೆ ಎಲ್ಲರಿಗಾಗಿ, ಆದರೆ ಈಗ ಭೂಮಿಯ ಪರಿಸ್ಥಿತಿ ಹೇಗಿದೆ?

Image

ಭಗವದ್ಗೀತೆ - ಬದುಕಿನ ಬೆಳಕು

ಕುರುಕ್ಷೇತ್ರದ ರಣಾಂಗಣ. ಪಾಂಡವರ ಮತ್ತು ಕೌರವರ ಸೈನ್ಯಗಳು ಮಹಾಯುದ್ಧಕ್ಕಾಗಿ ಮುಖಾಮುಖಿಯಾಗಿವೆ. ಆ ಸಂದರ್ಭದಲ್ಲಿ, ಅಪ್ರತಿಮವೀರ ಅರ್ಜುನ “ಭಗವಾನ್ ಶ್ರೀಕೃಷ್ಣ, ನನ್ನ ಕುಲದ ಹಿರಿಯರು, ಪೂಜ್ಯರು, ಗುರುಗಳು, ಬಂಧುಗಳು ಎದುರಿದ್ದಾರೆ. ನಾನು ಯುದ್ಧ ಮಾಡಲಾರೆ” ಎನ್ನುತ್ತಾನೆ.

ಆಗ ಅರ್ಜುನನಿಗೆ ಬದುಕಿನ ಪರಮಪಾಠವನ್ನು ಶ್ರೀಕೃಷ್ಣ ರಣರಂಗದಲ್ಲಿಯೇ ಉಪದೇಶಿಸುತ್ತಾನೆ. ಅವನ ಧರ್ಮ ಏನೆಂಬುದನ್ನು ಶ್ರೀಕೃಷ್ಣ ತಿಳಿಸುತ್ತಾನೆ. ಧರ್ಮದ ರಕ್ಷಣೆಗಾಗಿ ಅವನು ಅಧರ್ಮಿಗಳ ವಿರುದ್ಧ ಯುದ್ಧ ಮಾಡಲೇ ಬೇಕೆಂದು ವಿವರಿಸುತ್ತಾನೆ. ಇದುವೇ ಹದಿನೆಂಟು ಅಧ್ಯಾಯಗಳಲ್ಲಿರುವ “ಭಗವದ್ಗೀತೆ". ಇದರ ಸಾರವನ್ನು ತಿಳಿದುಕೊಳ್ಳೋಣ.

Image

ಗುಬ್ಬಚ್ಚಿಗಳು ಮರಳಿ ಬಂದವು !

ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ಕಳೆದ ಎರಡು ವರ್ಷಗಳ ಹಿಂದೆ ನಮ್ಮ ಮನೆಯ ಎದುರಲ್ಲಿ ಎರಡು ಗುಬ್ಬಚ್ಚಿಗಳು ಹಾರಾಟ ನಡೆಸಿದ್ದವು, ಅದನ್ನು ಕಂಡು ನನಗೆ ಬಹಳ ಖುಷಿ ಆಗಿತ್ತು. ಕಾರಣವೇನೆಂದರೆ, ನಾನಾ ಕಾರಣಗಳಿಂದ ಇತ್ತೀಚೆಗೆ ಗುಬ್ಬಿಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತಿವೆ.

Image

ಮರಗಳನ್ನೂ ನಾವು ಮಕ್ಕಳಂತೆ ಪೋಷಿಸೋಣ

ಕಳೆದ ಕೆಲವು ದಶಕಗಳಿಂದ ಈ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ‘ಕಾಡು ಎನ್ನುವುದು ಜೀವ ವೈವಿಧ್ಯತೆಯ ಬಹುದೊಡ್ದ ಆಗರ. ಕಾಡು ಸಮೃದ್ಧವಾಗಿದ್ದರೆ ಆ ವಲಯದಲ್ಲಿ ಮಳೆ ಪ್ರಮಾಣಕ್ಕೆ ಕೊರತೆಯಾಗದು. ಭೂ ಸವಕಳಿಯ ಸಮಸ್ಯೆ ಇರದು.

Image

ಕ್ರಿಕೆಟ್ ಜೂಜಿನ ಮಜಾ ನಾಳೆಯಿಂದ ಪ್ರಾರಂಭ…

ಸ್ವಲ್ಪ ಜಾಗೃತರಾಗಿ.. ಐ ಪಿ ಎಲ್ ಹಬ್ಬವೋ - ತಿಥಿಯೋ - ಶಾಪವೋ? ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ನಾಳೆಯಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್ ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು - ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು - ಬೆಟ್ಟಿಂಗ್ ಏಜೆಂಟುಗಳು ಮುಂತಾದ ಎಲ್ಲರಿಗೂ ಹಬ್ಬ.

Image