ಸಂಪಿಗೆಯೊ? ಮಲ್ಲಿಗೆಯೊ?

ರೈಲು ಬೆಳಿಗ್ಗೆ 8 ಗಂಟೆಗೆ ಊರಿಗೆ ಬಂದು ಸೇರಲಿತ್ತು. ಊರಿನ ಖ್ಯಾತ ನಾಯಕ ಮೋಹನದಾಸ್ ಅವರು ರಾಜಧಾನಿಯಿಂದ ವಾಪಸ್ಸು ಬರಲಿದ್ದರು. ಎಲ್ಲರಿಗೂ ಕುತೂಹಲ! ಇಂದು ಅವರ ಕೊರಳಿನಲ್ಲಿ ಯಾವ ಹೂವಿನ ಹಾರ ಇರುತ್ತದೆ? ಸಂಪಿಗೆಯೇ? ಮಲ್ಲಿಗೆಯೇ?

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೮) - ಅಂಬಿಕಾತನಯದತ್ತ

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ ೧೮೯೬ರ ಜನವರಿ ೩೧ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (೧೯೧೮) ಪದವಿ ಪಡೆದರು.

Image

ಕೂಡುಮನೆ

ಪುಸ್ತಕದ ಲೇಖಕ/ಕವಿಯ ಹೆಸರು
ರಾಧಾಕೃಷ್ಣ ಕಲ್ಚಾರ್
ಪ್ರಕಾಶಕರು
ಗಾಯತ್ರೀ ಪ್ರಕಾಶನ, ಅನಂತ ಪ್ರಕಾಶ, ಕಿನ್ನಿಗೋಳಿ-೫೭೪೧೫೦
ಪುಸ್ತಕದ ಬೆಲೆ
ರೂ. ೭೦.೦೦, ಮುದ್ರಣ: ೨೦೨೩.

ಲೇಖಕ, ತಾಳಮದ್ದಳೆ ಅರ್ಥಧಾರಿ, ಉಪನ್ಯಾಸಕ ಹೀಗೆ ಹಲವು ಮುಖಗಳಿಂದ ಪ್ರಸಿದ್ಧರಾಗಿರುವವರು ರಾಧಾಕೃಷ್ಣ ಕಲ್ಚಾರ್. ಅವರ ಹಲವು ಕೃತಿಗಳು ಈಗಾಗಲೇ ಪ್ರಕಟವಾಗಿದ್ದು ಜನಪ್ರಿಯತೆ ಗಳಿಸಿವೆ. ತನ್ನದೇ ಆದ ಓದುಗರನ್ನು ಪಡೆದುಕೊಂಡ ಕಲ್ಚಾರ್ ಅವರು ಅಂಕಣಕಾರರಾಗಿಯೂ ಜನಪ್ರಿಯರು. ‘ಕೂಡುಮನೆ' ಎಂಬ ಈ ಪುಟ್ಟ ಕಾದಂಬರಿ ಸುಮಾರು ಮೂರು ದಶಕಗಳ ಹಿಂದೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿತ್ತು.

ಯುಗಾದಿ ಸಾಹಿತ್ಯ ಮತ್ತು ನಮ್ಮ ವ್ಯಕ್ತಿತ್ವದ ಗಟ್ಟಿತನ...

ಸಾಮಾಜಿಕ ಜಾಲತಾಣಗಳ  ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ  ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ‌ ಸಂದರ್ಭದಲ್ಲಿ ರಚಿತವಾಗುವ‌ ಶುಭಾಶಯಗಳು - ಸಂದೇಶಗಳು - ಹಿತನುಡಿಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ - ಸ್ಪೂರ್ತಿದಾಯಕ.

Image

ಸ್ಟೇಟಸ್ ಕತೆಗಳು (ಭಾಗ ೯೩೧)- ಕದ್ದ ನೋಟ

ಮುಖವನ್ನ ನಾಲ್ಕು ಸಲ ಸೋಪು ಹಾಕಿ ತಿಕ್ಕಿಕೊಂಡಿದ್ದೇನೆ. ಮೂರು ಬಗೆಯ ಫೇಸ್ ವಾಶ್ ಬಳಸಿದ್ದೇನೆ, ಇವೆಲ್ಲವನ್ನೂ ಹಾಕಿಕೊಳ್ಳುವುದಕ್ಕೆ ಕಾರಣವೂ ಇದೆ. ಇವತ್ತು ಬೆಳಗ್ಗೆ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಾ ಇದ್ದೆ. ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಮೂರು ಹುಡುಗಿಯರಲ್ಲಿ ಒಬ್ಬಳು ನನ್ನನ್ನ ಗಮನಿಸ್ತಾ ಇದ್ದಳು. ನಾನು  ಮೊದಲಷ್ಟು ಗಮನಿಸಿರಲಿಲ್ಲ.

Image

ಚುನಾವಣ ಅಕ್ರಮಗಳು ರಾಜ್ಯಕ್ಕೆ ಭೂಷಣವಲ್ಲ

ದೇಶದ ಹದಿನೇಳನೆ ಲೋಕಸಭೆಗೆ ಸಂಸದರನ್ನು ಆಯ್ಕೆ ಮಾಡಿ ಕಳಿಸಲು ರಾಜ್ಯದಲ್ಲಿ ಚುನಾವಣೆ ಕಾವು ಪಡೆದುಕೊಂಡಿದೆ. ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತನ್ನು ಆರಂಭಿಸಿದ್ದಾರೆ. ಚುನಾವಣೆಯನ್ನು ‘ಪ್ರಜಾಪ್ರಭುತ್ವದ ಹಬ್ಬ; ಎಂದು ಕರೆಯಲಾಗುತ್ತದೆ. ಈ ಹಬ್ಬದ ಸಂಭ್ರಮ ಎಷ್ಟು ಜೋರಾಗಿದೆಯೋ ಅದಕ್ಕಿಂತಲೂ ಹತ್ತಾರುಪಟ್ಟು ಚುನಾವಣ ಅಕ್ರಮಗಳು ಸದ್ದು ಮಾಡುತ್ತಿವೆ.

Image

ಹುಡುಕಾಟ

ಜೀವನವು ಹುಡುಕಾಟದ ಆಡುಂಬೊಲ. ಪ್ರತಿಯೊಬ್ಬರೂ ಹುಡುಕಾಡುತ್ತಲೇ ಇರುವರು. ಹುಡುಕಾಟಕ್ಕೆ ಅಂತ್ಯವಿಲ್ಲ. ಉಸಿರಿರುವ ತನಕವೂ ಹುಡುಕಾಟ, ಕೈಗೆಟುಕದಾದಾಗ ತಡಕಾಟ ಸಹಜ. ವಿವಾಹಕ್ಕೆ ಹೆತ್ತವರು ಗಂಡು ಯಾ ಹೆಣ್ಣುಗಳನ್ನು ಹುಡುಕಾಡುತ್ತಾರೆ.

Image

ನಳಂದಾ - ಆಕ್ರಮಣಕಾರರಿಂದ ನಾಶವಾದ ಭಾರತದ ಜಾಗತಿಕ ವಿದ್ಯಾಕೇಂದ್ರ

ನಳಂದಾದ ಹೆಸರು ಕೇಳದವರಾರು? ಭಾರತದ ಜಗತ್ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ನಳಂದಾದಲ್ಲಿ ಈಗ ಉಳಿದಿರುವುದು ಕೆಂಪು ಬಣ್ಣದ ಭವ್ಯ ಕಟ್ಟಡಗಳು ಮಾತ್ರ.

ಆಕ್ಸ್-ಫರ್ಡ್ ವಿಶ್ವವಿದ್ಯಾಲಯವು ಸ್ಥಾಪನೆಯಾಗುವ ಐನೂರು ವರುಷಗಳ ಮುಂಚೆಯೇ ನಳಂದಾ ವಿಶ್ವವಿದ್ಯಾಲಯದಲ್ಲಿ 90 ಲಕ್ಷ ಪುಸ್ತಕಗಳ ಬೃಹತ್ ಗ್ರಂಥಾಲಯವಿತ್ತು. ಪೂರ್ವ ಮತ್ತು ಮಧ್ಯ ಏಷ್ಯಾದ ವಿವಿಧ ದೇಶಗಳಿಂದ ಆಗಮಿಸಿದ್ದ 10,000 ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡುತ್ತಿದ್ದರು. ಔಷಧಿ ಶಾಸ್ತ್ರ, ತರ್ಕ ಶಾಸ್ತ್ರ, ಗಣಿತ ಮತ್ತು ಬೌದ್ಧ ಮತ ತತ್ವಗಳನ್ನು ಆಗಿನ ಕಾಲದ ಶ್ರೇಷ್ಠ ವಿದ್ವಾಂಸರಿಂದ ಅವರು ಅಲ್ಲಿ ಕಲಿಯುತ್ತಿದ್ದರು. ಬೌದ್ಧರ ಧಾರ್ಮಿಕ ಗುರು ದಲೈ ಲಾಮಾ "ನಮ್ಮ (ಬೌದ್ಧರ) ಎಲ್ಲ ಜ್ನಾನವೂ ಬಂದಿರುವುದು ನಳಂದಾದಿಂದ” ಎಂದೊಮ್ಮೆ ಹೇಳಿದ್ದಾರೆ.

Image