ಸ್ಟೇಟಸ್ ಕತೆಗಳು (ಭಾಗ ೯೩೪)- ಪ್ರಶ್ನೋತ್ತರ

ಗಡಿಯಾರದ ಮುಳ್ಳುಗಳು ಆ ಪರಿಧಿಯ ಒಳಗಡೆ ಅದೆಷ್ಟು ಬಾರಿ ಸುತ್ತಿದೆಯೋ ಗೊತ್ತಿಲ್ಲ. ಮನೆಯಲ್ಲಿರುವ ಒಂದಷ್ಟು ಕ್ಯಾಲೆಂಡರ್ ಗಳು ಬದಲಾದರೂ ವಯಸ್ಸಿನ ಅಂತರ ಹೆಚ್ಚಾದರೂ ಕೂಡ ನಿನಗಿನ್ನು ಈ ಜಗತ್ತಿನ ಮುಖದ ಪರಿಚಯವೇ ಆಗಿಲ್ಲ ಅಂದುಕೊಳ್ಳುತ್ತೇನೆ .ಇದು ನಿನಗರ್ಥವಾಗದ ಜಗತ್ತು. ಒಂದು ಸಲ ಹಾಗಂದು ಕೊಂಡ್ರೆ ಇನ್ನೊಂದು ಸಲ ಹಾಗಿರುವುದೇ ಇಲ್ಲ.

Image

ಮಳ್ಳಿ ಮಳ್ಳಿ ಅಂದೀರಾ, ಇದು ಹೆಮ್ಮಿಂಚುಳ್ಳಿ !

ತರಬೇತಿಗೆ ಅಂತ ಬೆಂಗಳೂರಿಗೆ ಹೋಗಿದ್ದೆ. ತರಬೇತಿ ಮುಗಿಸಿ ರೈಲಿನಲ್ಲಿ ಮರಳಿ ಬಂದೆ. ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಇಳಿದೆ. ರೈಲ್ವೇ ನಿಲ್ದಾಣದಿಂದ ಬಸ್ ನಿಲ್ದಾಣ ಒಂದು ಕಿಲೋಮೀಟರ್ ದೂರ. ಬೆಳಗ್ಗಿನ ಹವೆಯೂ ತಂಪಾಗಿ ಹಿತವಾಗಿತ್ತು. ನಡೆದುಕೊಂಡೇ ಬಸ್ ಸ್ಟಾಂಡ್ ಕಡೆಗೆ ಹೊರಟೆ. ಸ್ವಲ್ಪ ದೂರ ಬಂದರೆ ಮಹಾಲಿಂಗೇಶ್ವರ ದೇವರ ದೇವಸ್ಥಾನ ಮತ್ತು ಜಾತ್ರೆ ನಡೆಯುವ ಗದ್ದೆ ಕಾಣಸಿಗುತ್ತದೆ.

Image

ಕಾಡು ಕಾಡ್ತು

ಪುಸ್ತಕದ ಲೇಖಕ/ಕವಿಯ ಹೆಸರು
ರೇಖಾ ಹೆಗಡೆ ಬಾಳೇಸರ
ಪ್ರಕಾಶಕರು
ಬಹುರೂಪಿ ಪ್ರಕಾಶನ, ಸಂಜಯ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ: ೨೦೨೩

ಕಾಡು ಕಾಡ್ತು’ ರೇಖಾ ಹೆಗಡೆಯವರು ಕಾಡಿನ ಅನುಭವಗಳ ಕುರಿತು ಬರೆದ ಕೃತಿಯಾಗಿದೆ. ಇದಕ್ಕೆ ಅವರದ್ದೇ ಮುನ್ನುಡಿ ಬರಹವಿದೆ: ಅಡವಿಯೆಂದರೆ ಅದೇನು ಹುಚ್ಚೋ.. ನನ್ನ ಬಾಲ್ಯ, ಹದಿಹರೆಯ ದಿನಗಳಲ್ಲಿ ಪುಸ್ತಕಗಳನ್ನು ಬಿಟ್ಟರೆ ನಾನು ಅತಿಹೆಚ್ಚು ಪ್ರೀತಿಸಿದ್ದು ಅಡವಿಯನ್ನು ಮುಗಿಲಿಗೆ ಏಣಿ ಚಾಚುವ ಸಾಗವಾನಿ, ಮತ್ತಿ, ಹೆದ್ದೇಗ, ಬೀಟೆ ಮರಗಳು, ಗಾಳಿ ಬೀಸಿದಾಗೆಲ್ಲ.

ಜ್ಞಾನದ ಮಿತಿಯ ಅರಿವಿದ್ದರೆ ಒಳ್ಳೆಯದು…!

ಮಹರ್ಷಿಗಳೇ, ನಮ್ಮ ಸಂಸಾರದಲ್ಲಿ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಜಗಳ. ಅದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಬದುಕುವ ಆಸೆ ಉಳಿದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.

Image

ಸ್ಟೇಟಸ್ ಕತೆಗಳು (ಭಾಗ ೯೩೩)- ಆಸೆಗಳು

ಆ ತಂಪು ನೆಲದ ಮೇಲೆ ಬೆಳೆದ ಪುಟ್ಟ ಗಿಡಗಳ ತುದಿಯಲ್ಲಿ ಮಿನುಗುವ ಹೂವುಗಳಿಗೆಲ್ಲ ತಾವೊಂದು ಮಾಲೆಯೊಳಗೆ ಸೇರಿ ಒಬ್ಬನ ಹಾರವಾಗಬೇಕು ಅಂತ ಆಸೆ .ದುಂಬಿಗಳೆಲ್ಲ ಬಂದು ರಸವ ಹೀರುವುದರಿಂದ, ಇನ್ನೊಂದಷ್ಟು ಪ್ರಖರ ಕಾಂತಿಯಿಂದ ಹೂವುಗಳು ಬೆಳಗುತಿವೆ. ಒಬ್ಬೊಬ್ಬರು ಸೇರಿಕೊಂಡು ಸುಂದರ ರೂಪ ಧರಿಸಿ ಒಬ್ಬ ಸತ್ಪ್ರಜೆಯ ಕೊರಳಿಗೆ ಏರುವ ಆಸೆ.

Image

ಸರಳದಿಂದ ಸಂಕೀರ್ಣ ಎಂಬುವುದು ಸುಳ್ಳು !

ನಾವು ಒಂದು ವಸ್ತುವಿನ ಉತ್ಪಾದನೆಗೆ ಹೊರಡುತ್ತೇವೆ ಎಂದು ಇಟ್ಟುಕೊಳ್ಳೋಣ. ಮೊದಲು ಅದರ ಬಿಡಿ ಭಾಗಗಳನ್ನು ಸಂಗ್ರಹಿಸಿಕೊಳ್ಳುತ್ತೇವೆ. ಅದರ ನಟ್, ಬೋಲ್ಟ್, ಇಂಜಿನ್, ಫ್ಯಾನ್ ಹೀಗೆ. ಅವುಗಳನ್ನು ಜೋಡಿಸಿದಾಗ ನಿಮ್ಮ ಕನಸಿನ ವಿಮಾನ ಸಿದ್ಧಗೊಳ್ಳತ್ತದೆ. ಜೀವಿಗಳಲ್ಲಿ ಪುನರುತ್ಪಾದನೆಯನ್ನು ತೆಗೆದುಕೊಂಡರೆ ಹೀಗಾಗುವುದಿಲ್ಲ. ಕೋಶ ತನಗೆ ಬೇಕಾದ ಎಲ್ಲಾ ತಯಾರಿಗಳನ್ನು ಮುಂಚಿತವಾಗಿ ಮಾಡಿಕೊಳ್ಳುತ್ತದೆ.

Image

ಮಿನಿ ಕತೆ - ಜಾನೆ ದೋ

"ನೀವು ಮಾತ್ರ ಬದಲಾಗಬೇಡಿ. ನನ್ನ ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಬಾರದು. ನೀವು ಬೇಕು" ಎಂದಳು ತ್ರಿವೇಣಿ. ಅವಳು ತನ್ನ ಮೇಲಿಟ್ಟಿದ್ದ ಪ್ರೀತಿಯನ್ನು ಕಂಡು ಸಂತೋಷ ಪಟ್ಟ ಪವನ್, ತ್ರಿವೇಣಿಯನ್ನು ಮನಸಾರೆ ಮೆಚ್ಚಿದ್ದ.

Image