ಕವನಗಳು

ವಿಧ: ಕವನ
March 10, 2024
ದೂರನು ತಂದರು ನಾರೀ ಮಣಿಗಳು ಕೇಳುತ ಸುಮ್ಮನೆ ಹೇಗಿರಲಿ ಅವರುಗಳೆದುರಲಿ ನಿನ್ನನು ಬೈದೆನು ಮುನಿಸನು ಕಳೆಯುವ ನಿಟ್ಟಿನಲಿ   ನನ್ನಯ ಮುದ್ದಿನ ಕಂದನ ಜರೆವೆನೆ ಅರಿಯೆಯ ಮಾತೆಯ ಮನಸನ್ನು ಮುನಿಸನು ತೊರೆಯುತ ನಸುನಗು ಹೊಮ್ಮಲಿ ಈತರ ಕೋಪವು ಸಾಕಿನ್ನು   ಮಡಿಲಲಿ ಕೂರಿಸಿ ಮುದ್ದಿಸಿ ನಿನ್ನನು ನೀಡುವೆ ಸುಮಧುರ ನವನೀತ ಕೂತಿರು ಇಲ್ಲಿಯೆ ಅಲ್ಲಿಹ ಗುಮ್ಮನು ಬರುವನು ಮಕ್ಕಳ ಹಿಡಿವಾತ   ಅಣ್ಣನ ಜೊತೆಯಲಿ ಆಡುತ ಬಳಲಿದೆ ಎಲ್ಲಿಗೆ ಹೋದನು ಬಲರಾಮ ಇಬ್ಬರು ಜೊತೆಯಲಿ ಬೆಣ್ಣೆಯ ಮೆಲ್ಲಿರಿ ಸುಮ್ಮನೆ ಕುಳಿತಿರಿ…
ವಿಧ: ಕವನ
March 09, 2024
ಎಂಥ ಚಂದ ಕ್ಷೇತ್ರವಿಲ್ಲಿ ಎನಿತು ಸುಂದರ ಮರೆತು ಹೋದೆ ನನ್ನ ನಾನೆ ಶಿಶಿಲೇಶ್ವರ||ಪ||   ಪುಣ್ಯನಾಡು ಹರನು ಇಲ್ಲಿ ಆಗಿ ಉದ್ಭವ ನಂಬಿದವರ ಬಿಡದೆ ಪೊರೆವ ಶಿಶಿಲೇಶ್ವರ ಭಕ್ತಿಯಲ್ಲಿ ಬರುವ ಮಂದಿ ಅರುಹೆ ಕಷ್ಟವ ಕಳೆದುಬಿಡುವ ಒಲವಿನಿಂದ ದೇವ ಈಶ್ವರ||   ಕಪಿಲ ನದಿಗೆ ತಾಗಿದಂತೆ ದಿವ್ಯ ದೇಗುಲ ಗುಡಿಯ ಸುತ್ತ ಹಸಿರು ಸಿರಿಯ ಭವ್ಯ ವರ್ತುಲ ಮತ್ಸ್ಯ ತೀರ್ಥ ಮತ್ಸ್ಯ ರಾಶಿ ಮನವ ಸೆಳೆವುದು ತಿನಿಸು ಕೊಡಲು ತಿನ್ನಲದನು ನೃತ್ಯಗೈವುದು||   ಕಾಣುತಿಹುದು ಗುಡ್ಡ ಬೆಟ್ಟ ಸೆಳೆದು ಮೈಮನ ಬೆಟ್ಟವನ್ನು…
ವಿಧ: ಕವನ
March 08, 2024
ಕೆಲವೊಮ್ಮೆ ಅನಿಸುವುದು ನಿನಗೆಷ್ಟು ಕರವೋ ಏಕ ಕಾಲಕ್ಕೆ ಅದೆಷ್ಟು ಕಾರ್ಯ ನೀ ಮುಗಿಸಿಬಿಡುವೆ   ಕೆಲವೊಮ್ಮೆ ಅನಿಸುವುದು ನಿನಗೆಷ್ಟು ಸಹನೆ ಒತ್ತಡದ ನಡುವಲ್ಲಿಯೂ ನೀ ಶಾಂತ ವದನೆ   ಕೆಲವೊಮ್ಮೆ ಅನಿಸುವುದು ನೀನೊಂದು ಯಂತ್ರ ಕೆಲಸ ಮುಗಿಸುವುದೇ ನಿನ್ನೊಳಗಿನ ಮಂತ್ರ   ಕೆಲವೊಮ್ಮೆ ಅನಿಸುವುದು ನೀನೆಂತಹ ತ್ಯಾಗಿ ನಿನಗುಳಿಸದೇ ಈವೆ ಹಸಿವಿರದಂತೆ ತೇಗಿ   ಕೆಲವೊಮ್ಮೆ ಅನಿಸುವುದು ನೀನೆಂತಹ ಸ್ವಾರ್ಥಿ ನೀ ಹಡೆದ ಮಕ್ಕಳೇ ಗೆಲಲೆಂಬ ಪ್ರೀತಿ   ಗಂಡ,ಮನೆ,ಮಕ್ಕಳನು ಜತನಗೊಳಿಸುವ ರೀತಿ ಅದಕಾಗಿ ನಿನಗುಂಟು…
ವಿಧ: ಕವನ
March 08, 2024
ಸವಾಲುಗಳ ಮೆಟ್ಟಿ ನಿಂತ ಧೀರೆಯಿವಳು ಹಾದಿಯ ಕಲ್ಲುಮುಳ್ಳುಗಳ ಕ್ರಮಿಸಿದವಳು ಸವಾಲೆಸೆದ ಬಾಯಿಗಳಿಗೆ ಉತ್ತರ ನೀಡಿದವಳು ಹೀಯಾಳಿಸಿ ವ್ಯಂಗ್ಯವಾಡಿದ ಮುಖಗಳ ಬೆವರಿಳಿಸಿದವಳು   ಸಂಸಾರ ದುಡಿಮೆ ಸರಿದೂಗಿಸಿ ಸೈ ಅನಿಸಿದವಳು ಬೆದರದೆ ಬೆಚ್ಚದೆ ಜಗ್ಗದೆ ಸೆಟೆದು ನಿಂತವಳು ಗಂಡುಬೀರಿ ಎಂದವರಿಗೆ ಛೀಮಾರಿ ಹಾಕಿದವಳು ಸ್ವಾಭಿಮಾನ ಮನದ ಗುಡಿಗೆ ಕೈಯಿಕ್ಕಿದರೆ ಜೋಕೆ ಎಂದವಳು   ಕರುಳ ಕುಡಿಗಳ ಬೆಳೆಸಿ ಸನ್ಮಾರ್ಗದಲಿ ನಡೆಸಿದ ಮಾತೆಯಿವಳು ಹಿರಿಯರನು ಗೌರವಿಸಿ ಉಪಚರಿಸಿದ ಸಂಸ್ಕಾರೆಯಿವಳು ಮಗಳು ಸೋದರಿ ತಾಯಿ…
ವಿಧ: ಕವನ
March 07, 2024
ನಂದನ ಕಂದನ ಚಂದವ ಕಾಣಲು ಕಣ್ಣುಗಳೆರಡು ಸಾಲದಿದೆ ಹೊಳೆಯುವ ನಯನವು ಮಿನುಗುವ ತಾರೆಯೊ ಅಧರದಿ ಮೂಡಿದೆ ತುಂಟನಗೆ   ಕೊರಳಲಿ ಕೌಸ್ತುಭ ಹಾರವ ಧರಿಸಿದ ಮುರಳಿಯ ಹಿಡಿದಿಹ ಕರದಲ್ಲಿ ಭಕ್ತರಿಗೀತರ ದರ್ಶನವೀಯಲು ಸೇರಿದನೇನೂ ನಭದಲ್ಲಿ?   ಕೃಷ್ಣನು ಜೀಕಲು ಬಯಸಿಹನೇನು ಚಂದಿರನಾದನೆ ಉಯ್ಯಾಲೆ ಲೋಕದ ಸೂತ್ರವ ಹಿಡಿದಿಹ ದೇವನು ಕಾಣುವುದೆಲ್ಲವು ಹರಿಲೀಲೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ: ಶ್ರೀ ಸತೀಶ್ ಎಲೆಸಾರವರ ವಾಲ್ನಿಂದ 
ವಿಧ: ಕವನ
March 06, 2024
ಕಪ್ಪೆಯೋಟದ ಹಾಗೆ ಜೀವನ ! * ಕಾಡುಗಳ ಗೆಳೆತನ ನಾಡಿಗೆ ಶುಭದಿನ ! * ಬೆಪ್ಪು ಕೈಯ ಎತ್ತಿದ ಕೂಡಲೇ ದೇಶ ಅತ್ತಿತು, ನಾಡು ಬರಿದಾಯಿತು ! * ಕಣ್ಣ ನೀರಿನ ಹನಿ ಕೆಳಗೆ ಬಿದ್ದಾಗಲೇ ಬೆಲೆ ! * ಮಾತಿಲ್ಲ ಕತೆಯಿಲ್ಲ ನಿದಿರೆಗೆ ಜನ ಜಾರಿದಾಗಲೆಲ್ಲ ! * ಮಂಗಳೂರಿನ ಗೋಳಿಬಜೆ ತಿಂದಾಗಲೇ ಭಲೆ ಭಲೆ ! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
March 05, 2024
ಬೇಯ್ಲೀಕೇನು ಇಟ್ಟೇಯವ್ವ ಒಲೆಯ ಮ್ಯಾಗೆ ಅಕ್ಕೀ ತುಂಬಿ ಇಟ್ಟೇಯೇನು ಪಾತ್ರೇನಾಗೆ   ಊಟಕ್ಕೆಂದು ಬಂದಾರೇನು ಹಸಿವಿನಾಗೆ ತಟ್ಟೇ ಇಟ್ಕೊಂಡ್ ಕೂತವ್ರೇನು ಸಾಲಿನಾಗೆ   ಸೌದೆ ತುಂಡು ಇಟ್ಟೇಯಲ್ಲ ಒಲೆಯ ಒಳಗೆ ಏನು ಯೋಚ್ನೆ, ಉರಿಯ ಹಚ್ಚು ಉರಿಸು ಕಟ್ಗೆ   ರೇಷ್ಮೆ ಲಂಗ ಕೆಂಪು ರವಿಕೆ ಯಾಕ ಈಗ? ಮಲ್ಲೆ ಮಾಲೆ ಇಟ್ಟೆಯಲ್ಲೆ ತುರುಬಿನಾಗ   ನೋಡಕಂತ ಬರ್ತಾನೇನು ಪ್ಯಾಟೆ ಹುಡುಗ ನಿನ್ನ ನೋಡಿ ಹೇಳ್ತಾನವನು ಬಾರೆ ಬೇಗ|| -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ  
ವಿಧ: ಕವನ
March 04, 2024
ಕುಪಿತವಿದ್ದರೂ ಸರಿ, ಮನಃ ನೋಯಿಸಲಾದರೂ ಆಗಮಿಸು; ಆಗಮಿಸು: ನನ್ನ ಪುನಃ ಬಿಟ್ಟು ಹೋಗಲಾದರೂ ಆಗಮಿಸು;    ಯಾರ್ಯಾರಿಗೆ ವಿಷದಪಡಿಸುವುದು, ವಿಂಗಡನೆಯ ಕಾರಣವನು; ನೀ ಕುಪಿತವಿದ್ದರೂ ಸರಿ, ಕಾಲಮಾನಕ್ಕಾಗಿಯಾದರೂ ಆಗಮಿಸು!   ಈಕ್ಷಣವರೆಗೆ ಭ್ರಮಾಧೀನತೆಯುಳ್ಳ ಮನಕೆವಿದೆ ಉಮೇದುಗಳು, ಈ ಕಟ್ಟುಕಡೆಯ ದೀವಿಗೆಗಳನ್ನ ಆರಿಸಲಾದರೂ ಆಗಮಿಸು!        ಕೆಲವಧಿಯಿಂದ ವಂಚಿತವಿದ್ದೇನೆ ನಾ ಆಕ್ರಂದದ ಉತ್ಕರ್ಷತೆಯಿಂದ; ಏ ಮನಶ್ಶಾಂತಿಯ ಚೈತನ್ಯವೇ, ನನ್ನ ರೋದಿಸಲಾದರೂ ಆಗಮಿಸು;   ನನ್ನ ವಾತ್ಸಲ್ಯದ ಪ್ರತಿಷ್ಠೆ…
ವಿಧ: ಕವನ
March 03, 2024
ಅಪರೂಪದ ಅತಿ ಸುಂದರ ಹಿತವಾಗಿದೆ ಈ ಸಂಜೆ ಜೊತೆಯಾಗಿಯೆ ಇರೆ ಪ್ರೇಯಸಿ ಅದ ನೋಡುತ ನಾ ನಿಂದೆ||ಪ||   ಹೊನ್ನಿನ ಬಣ್ಣದ ಸೆರಗನು ಚಾಚಿದೆ ಶರಧಿಯು ಸೂರ್ಯನ ಸ್ವಾಗತಕೆ ಕಡಲಿಗೆ ಒಲಿಯುತ ನೇಸರ ಇಳಿದರೆ ಅಗಲಿಕೆ ಚಿಂತೆಯು ಆಗಸಕೆ   ಚಿಲಿಪಿಲಿಗುಟ್ಟುವ ಹಕ್ಕಿಗಳಾತುರ ಗೂಡನು ಸೇರುವ ತವಕದಲಿ ಸೂರ್ಯನು ಮುಳುಗಲು ಈ ದಿನ ಮುಗಿಯಿತು ಕತ್ತಲು ಬರಲಿದೆ ಜೊತೆಯಲ್ಲಿ   ಹಸಿರಿನ ಗಿಡಮರ ರೋಧಿಸ ತೊಡಗಿರೆ ದಿನಕರ ನೀಡುವ ವಾಗ್ದಾನ ಇರುಳಿದು ಕಳೆಯಲಿ ಮರಳುವೆ ಗಗನಕೆ ತೊರೆಯಿರಿ ಮನಸಿನ ಅನುಮಾನ||   -ಪೆರ್ಮುಖ…
ವಿಧ: ಕವನ
March 02, 2024
ಓ..ಲಲ್ಲೂ ರಾಮ ಬರುವನಂತೆ ಬಾರೊ ಸಖಾ ನಾವೆಲ್ಲಾ ಹೋಗೋಣ ಅಯೋಧ್ಯಾ ನಗರಕ!   ನೆನಪಿಸುತ್ತಿದೆ ಅಂದಿನ ಶ್ರೀ ರಾಮನ ವೈಭವ ಬನ್ನಿರೆಲ್ಲ ನೋಡಿ ಆನಂದಿಸೋಣ ಸಂಭ್ರಮ!   ಎಲ್ಲ ಶತಮಾನಗಳಲೂ ನಿನ್ನದು ದುರ್ದೈವವೇ ಪಿತನ ಹಿತಕೆ-ಕೈಕೆ ದುರಾಸೆಗೆ ಬಲಿಯಾದೆಯಾ?   ಜಾನಕಿಯ ಜೊತೆ ಹದಿನಾಲ್ಕು ವರ್ಷ ವನವಾಸ ಭರತಗೆ ಸಿಂಹಾಸನವ ಕೊಟ್ಟು ಪಟ್ಟೆ ಸಂತೋಷ!   ಅಲ್ಪನ ಮಾತಿಗಂಜಿ ಸೀತಾ ಮಾತೆಯ ತ್ಯಾಗ ಆಯಿತೇ ಲವ-ಕುಶರ ಪುತ್ರ ಶೋಕ ವಿಯೋಗ!   ಓ ಮರ್ಯಾದಾ ಪುರುಷೋತ್ತಮಾ ಶ್ರೀರಾಮ ನಿನ್ನ ಆದರ್ಶಗಳಿಂದಲೇ ನೀನು…