Log out ಹೇಗೆ?

To prevent automated spam submissions leave this field empty.

‘ಸಂಪದ’ದ ಹೊಸ ವಿನ್ಯಾಸ ಅನುಕೂಲಕರವಾಗಿದೆ ಎಂದೆನ್ನಿಸುತ್ತದೆ. ಆದರೆ ಇದರಲ್ಲಿ ಈಗ logout ಮಾಡುವ ಸಾಧ್ಯತೆ ಇಲ್ಲವೇ? ಇದ್ದರೆ ಹೇಗೆ? ಬಹಳ ಹುಡುಕಿದರೂ ‘logout’ ಎಂದು high light ಮಾಡಿಸಿಕೊಂಡು ಪೋರ್ಟಲ್‌ನಿಂದ ಹೊರಬರುವ ಕ್ರಮವಂತೂ ನನ್ನ ಕಣ್ಣಿಗೆ ಬೀಳಲಿಲ್ಲ.


ಅಲ್ಲದೆ, ಈ ತೆರನ ಸಂಶಯಗಳು ಬಂದರೆ ಅದನ್ನು ಪರಿಹರಿಸಿಕೊಳ್ಳಲು ಯಾರನ್ನು ಹೇಗೆ ಸಂಪರ್ಕಿಸುವದು ಎಂದೂ ತಿಳಿಯುತ್ತಿಲ್ಲ. ಈಗ ನಾನು ಇಲ್ಲಿ ಬರೆಯುತ್ತಿರುವದು ಸರಿಅಯಾದ ಎಡೆಯಲ್ಲಿ ಅಲ್ಲವೆಂದು ನನಗೆ ಅನ್ನಿಸುತ್ತಿದೆ. ಆದರೆ ಬೇರೆ ಕ್ರಮವಿದ್ದರೆ ದಯೆಯಿಟ್ಟು ತಿಳಿಸುವದು.

ಪ್ರತಿಕ್ರಿಯೆಗಳು

"ಪ್ರಕಟಿಸಿ" ಎನ್ನುವಲ್ಲಿ ಕುಟುಕಿ.. ಆ ಪುಟದಲ್ಲಿ "ಲಾಗ್ ಔಟ್" ಇದೆ.. ನನಗೂ ಹೊಮ್ ಪೇಜ್ ನಲ್ಲಿ ಲಾಗ್ ಔಟ್ ಎಲ್ಲೂ ಸಿಕ್ಕಲಿಲ್ಲ..

ನಾನೂ ಗಮನಿಸಿರಲಿಲ್ಲ. ಈಗ ಮೇಲ್ಭಾಗದ ಬಲಮೂಲೆಯಲ್ಲಿ "ಲಾಗ್ ಔಟ್" ಕಾಣಿಸುತ್ತಿದೆಯಲ್ಲ? - ಕೇಶವ ಮೈಸೂರು

ನಿಮ್ಮ ಸಲಹೆಗಳನ್ನು ಹಾಗು ಪ್ರಶ್ನೆಗಳನ್ನು, ನಮಗೆ ಬರೆದು ತಿಳಿಸಿ. ನೀವು ಮೈಲ್ ಮಾಡಬೇಕಾದ ವಿಳಾಸ: mail@sampada.net

ಓಹೋ, ನನ್ನ ಹಾಗೇ ನೀವೂ ಹುಡುಕಿದ್ರಾ.. ಪ್ರತಿಕ್ರಿಯೆ ಎಲ್ಲಾ ಬರೆದಾದಾಗಲೇ ಮಧ್ಯರಾತ್ರಿ ಕಳೆದಾಗಿತ್ತು. ಮತ್ತೆ log out ಕೊಂಡಿಗಾಗಿ ಅರ್ಧ ಘಂಟೆ ಎಲ್ಲಾ ಕಡೆ ಮೂಲೆಮೂಲೆನೂ ಹುಡುಕಾಡಿದೆ. ಪ್ರಕಟಿಸಿ ಒಂದು ಬಿಟ್ಟು ಉಳಿದ ಎಲ್ಲಾ ಕಡೆ ಕ್ಲಿಕ್ ಮಾಡಿದೆ. ಬಹುಷಃ ಹೊಸ ವಿನ್ಯಾಸ ಇನ್ನೂ ಪೂರ್ತಿಯಾಗಿಲ್ಲ-ರಾತ್ರಿಯೂ ಅದರ ತಯಾರಿಯಲ್ಲಿದ್ದಾರೆ ಅಂದುಕೊಂಡೆ- ಹರಿಯವರ ಪ್ರತಿಕ್ರಿಯೆ ನೋಡಿದಾಗ ಅದು ನಿಜ ಎಂದು ಗೊತ್ತಾಯಿತು. ಈಗ profile ಪುಟದಲ್ಲಿ "ಸಂಪದ ಸೇರಿದ ತಾರೀಖು" ಹಾಗೂ "ಈ ಹಿಂದೆ ಕಂಡದ್ದು" ಅದಲು ಬದಲಾಗಿ ಪ್ರಕಟವಾಗುತ್ತಿದೆ. ಹೊಸ ವಿನ್ಯಾಸ ಚೆನ್ನಾಗಿದೆ. -ಗಣೇಶ.