ನಿಮ್ಮ ಕಂಪ್ಯೂಟರಿನಲ್ಲಿ ಬಳಕೆಯಲ್ಲಿರೋ Port ಗಳಾವುವು

ನಿಮ್ಮ ಕಂಪ್ಯೂಟರಿನಲ್ಲಿ ಬಳಕೆಯಲ್ಲಿರೋ Port ಗಳಾವುವು

ಲಿನಕ್ಸ್ ನಲ್ಲಿ ತಂತ್ರಾಂಶ ಅಭಿವೃದ್ದಿ ಪಡಿಸುವಾಗ ಕಂಪ್ಯೂಟರಿನಲ್ಲಿ ಯಾವ ಯಾವ Port ಗಳು ಈಗಾಗಲೇ ಬಳಕೆಯಲ್ಲಿವೆ ಅನ್ನೋದನ್ನ ತಿಳಿದುಕೋ ಬೇಕಾಗುತ್ತೆ.

ಇದು ತುಂಬಾ ಸುಲಭ. nmap ಅನ್ನೋ ಒಂದು ತಂತ್ರಾಂಶ ನಿಮ್ಮ ಈ ಕೆಲಸವನ್ನ ತುಂಬಾ ಸುಲಭ ಮಾಡುತ್ತೆ. ನೀವು ನಿಮ್ಮ ಕಂಪ್ಯೂಟರಿನಲ್ಲಿ ಇನ್ಸ್ಟಾಲ್ ಮಾಡ್ಕೊಂಡಿರೋ ಎಲ್ಲ ತಂತ್ರಾಂಶಗಳ ಕಾನ್ಫಿಗರೇಷನ್ ನೋಡ್ತಾ ಕೂರುವುದರ ಬದಲಿಗೆ nmap ಇನ್ಸ್ಟಾಲ್ ಮಾಡ್ಕೊಳ್ಳಿ.

System -> Administration -> Synaptic Package Manager ಬಳಸಿ ಅಥವಾ ಈ ಕೆಳಗೆ ಕೊಟ್ಟಿರುವ command ಬಳಸಿ nmap ಇನ್ಸ್ಟಾಲ್ ಮಾಡ್ಕೊಳ್ಳಿ.

# sudo aptitude install nmap

ಇದನ್ನ Terminal ಉಪಯೋಗಿಸೋದು ಕೂಡ ಸುಲಭ. TCP Port ಗಳನ್ನು ಕಂಡು ಹಿಡಿಯಲು

# sudo nmap -sT <ಕಂಪ್ಯೂಟರ್ ಹೆಸರು/IP Address>

UDP Port ಗಳಿಗೆ

# sudo nmap -sU <ಕಂಪ್ಯೂಟರ್ ಹೆಸರು/IP Address>

ಬಳಸಿ.

ಈ ಕಮ್ಯಾಂಡಿನ ಬಗ್ಗೆ ಹೆಚ್ಚಿನ ಮಾಹಿತಿಗೆ ಅದರ info ಅಥವಾ man ಪುಟ ನೋಡಿ.
#man nmap

#info nmap

ಸೂಚನೆ: #, ಇದು ನಿಮ್ಮ ಲಿನಕ್ಸ್ ಟರ್ಮಿನಲ್ ನಲ್ಲಿನ Shell ಪ್ರಾಮ್ಟ್.

Rating
No votes yet

Comments