Section 49-O -- ಯಾರಿಗೂ ಮತಚಲಾಯಿಸುವುದಿಲ್ಲ ಎಂದು ಹೇಳುವ ಸಂವಿಧಾನಾತ್ಮಕ ಹಕ್ಕು

Section 49-O -- ಯಾರಿಗೂ ಮತಚಲಾಯಿಸುವುದಿಲ್ಲ ಎಂದು ಹೇಳುವ ಸಂವಿಧಾನಾತ್ಮಕ ಹಕ್ಕು

ಸಂಪದಿಗರಿಗೆಲ್ಲ ನಮಸ್ಕಾರ,

ಹೀಗೊಂದು ಮಾಹಿತಿ ಸಂವಿಧಾನದ Section 49-O ಬಗ್ಗೆ.

ನನ್ನ e-mail ಗೆ ಬಂದಿದ್ದು ಕನ್ನಡಕ್ಕೆ ಭಾಷಾಂತರಿಸಿದ್ದೇನೆ. ತಪ್ಪಿದ್ದಲ್ಲಿ ತಿದ್ದಬೇಕಾಗಿ ವಿನಂತಿ ಹಾಗು ಕ್ಷಮಿಸಿ.

ನಿಮಗಿದು ತಿಳಿದಿದೆಯೇ?

ನಮ್ಮ ಸಂವಿಧಾನದ 1969 Act, Section 49-O ರಲ್ಲಿ ತಿಳಿಸಿದಂತೆ, ಯಾವುದೇ ವ್ಯಕ್ತಿಯು ಮತಗಟ್ಟೆಗೆ ಹೋಗಿ ತನ್ನ ಗುರುತನ್ನು ದೃಡಪಡಿಸಿ, ತನ್ನ ಬೆರಳಿಗೆ ಇಂಕನ್ನು ಹಾಕಿಸಿಕೊಂಡು, ಮತಗಟ್ಟೆಯ ಅಧಿಕಾರಿಗೆ "ನಾನು ಯಾವ ಅಭ್ಯರ್ಥಿಗೂ ಮತ ಚಲಾಯಿಸಲು ಇಷ್ಟಪಡುವುದಿಲ್ಲ" ಎಂದು ತಿಳಿಸಿ ಬರಬಹುದು. ಹೌದು. ಈ ಅವಕಾಶ ನಮ್ಮ ಸಂವಿದಾನದಲ್ಲಿ ತಿಳಿಸಿರುವಂತೆ ನಮಗೆಲ್ಲರಿಗೂ ಇದೆ. ಆದರೆ ನಮ್ಮ ಜನನಾಯಕರೆನಿಸಿಕೊಂದವರು ಈ ವಿಷಯವನ್ನು ಇದುವರೆವಿಗೂ ಹೊರಗೆಡವಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಚುನಾವಣಾ ಆಯೋಗವೂ ಈ ವಿಷಯ ನಾಗರೀಕರಿಗೆ ತಿಳಿಸದಿರುವುದು.

ನಾವು ಏಕೆ ಮತಗಟ್ಟೆಗೆ ಹೋಗಿ "ಯಾರಿಗೂ ಮತಚಲಾಯಿಸುವುದಿಲ್ಲ" ಎಂದು ಹೇಳಬೇಕು?

ಏಕೆಂದರೆ ಒಂದು ಮತಗಟ್ಟೆಯಲ್ಲಿ ಯಾವುದೇ ಅಭ್ಯರ್ಥಿಯು ಉದಾಹರಣೆಗೆ 123 ಮತಗಳಿಂದ ಜಯಿಸಿದನೆನ್ದುಕೊಂಡರೆ, ಹಾಗು ಅದೇ ಮತಗಟ್ಟೆಯಲ್ಲಿ 123 ಕ್ಕಿಂತ ಹೆಚ್ಚು 49-O ಮತಗಳಿದ್ದರೆ ಆ ಚುನಾವಣೆಯನ್ನು ರದ್ದುಪಡಿಸಲಾಗುತ್ತದೆ. ಹಾಗು ಮರು-ಚುನಾವಣೆ ನಡೆಸಲಾಗುತ್ತೆ. ಅಷ್ಟೇ ಅಲ್ಲದೆ, ಅದೇ ಅಭ್ಯರ್ಥಿಗಳು ಮರು-ಚುನಾವಣೆಯಲ್ಲಿ ಸ್ಪರ್ದಿಸುವಂತಿಲ್ಲ. ಏಕೆಂದರೆ ಜನರು ಆಗಲೇ ತಮ್ಮ ನಿರ್ಧಾರ ತಿಳಿಸಿದ್ದಾರೆ. ಇದು ಯಾವುದೇ ರಾಜಕೀಯ ಪಾರ್ಟಿಗೂ ಭಯ ತರುವಂತದ್ದು ಆದ್ದರಿಂದ ಅವರು ಅರ್ಹ ಅಭ್ಯರ್ಥಿಗಳನ್ನೇ ಚುನಾವಣೆಯಲ್ಲಿ ನಿಲ್ಲಿಸಲು ಪ್ರಯತ್ನಿಸುವರು. ಇದು ನಮ್ಮ ರಾಜಕೀಯ ಪದ್ದತಿಯನ್ನೇ ಬದಲಾಯಿಸಬಹುದು. ಇದು ನಮ್ಮ ಭ್ರಷ್ಟ ಅಭ್ಯರ್ಥಿಗಳ ಹಾಗು ಭ್ರಷ್ಟ ಪಾರ್ಟಿಗಳ ಹಾಗು, ಭ್ರಷ್ಟಾಚಾರ ನಿರ್ಮೂಲನೆಗೆ ಒಂದು ಒಳ್ಳೆಯ ಸಾಧನವಾಗಿದೆ. :-)

ಇಲ್ಲಿ ಮತದಾರ ತನ್ನ ಮಹತ್ವವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಬಹುದು. ಯಾವುದೇ ಅಭ್ಯರ್ಥಿಯು ಅರ್ಹನಲ್ಲ ಅನಿಸಿದರೆ, "ಯಾರಿಗೂ ಮತ ಚಲಾಯಿಸುವುದಿಲ್ಲ (49-O)" ಮತ, ಮತ ಚಲಾಯಿಸುವುದಕ್ಕಿಂತ ಪರಿಣಾಮಕಾರಿ. ಆದ್ದರಿಂದ ಈ ಅವಕಾಶ ಕಳೆದುಕೊಳ್ಳಬೇಡಿ. "ಮತ ಚಲಾಯಿಸಿ" ಇಲ್ಲವೇ "ಯಾರಿಗೂ ಮತ ನೀಡಲು ಇಷ್ಟಪಡುವುದಿಲ್ಲ (೪೯-ಓ) ಗೆ ಮತ ನೀಡಿ"

Rating
No votes yet

Comments